ರೆಡ್ ಗೌನ್ ಧರಿಸಿ ಪಡ್ಡೆಗಳ ನಿದ್ದೆಗೆಡಿಸಿದ ನವವಧು ಕಿಯಾರಾ

Public TV
1 Min Read
FotoJet 1 2

ತ್ತೀಚೆಗಷ್ಟೇ ಬಾ‍ಯ್ ಫ್ರೆಂಡ್ ಸಿದ್ದಾರ್ಥ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ಕಿಯಾರಾ ಅಡ್ವಾಣಿ ಹನಿಮೂನ್ ಮುಗಿಸಿಕೊಂಡು ಮತ್ತೆ ಟ್ರ್ಯಾಕ್ ಗೆ ಮರಳಿದ್ದಾರೆ. ಖಾಸಗಿ ವಾಹಿನಿಯ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಅವರು, ರೆಡ್ ಗೌನ್ ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ್ದಾರೆ.

FotoJet 7

ಕಿಯಾರಾ ಅಡ್ವಾಣಿ ಕೆಂಪು ಗೌನ್ ನಲ್ಲಿ ಬರುತ್ತಿದ್ದಂತೆಯೇ ಇಡೀ ಕ್ಯಾಮೆರಾಗಳು ಅವರನ್ನು ಸುತ್ತುವರೆದವು. ಒಂದು ಕ್ಷಣ ಅಚ್ಚರಿಯಿಂದಲೇ ಕಿಯಾರಾ ಕ್ಯಾಮೆರಾಗೆ ಪ್ರತಿಕ್ರಿಯೆ ನೀಡಿದರು. ಹಲವು ಬಗೆಯ ಪೋಸ್ ಗಳನ್ನೂ ಕ್ಯಾಮೆರಾಗೆ ಅವರು ನೀಡಿದರು. ಆ ಫೋಟೋಗಳು ಇದೀಗ ವೈರಲ್ ಕೂಡ ಆಗಿವೆ. ಇದನ್ನೂ ಓದಿ: `ಆಚಾರ್ಯ’ ಚಿತ್ರಕ್ಕಾಗಿ ನಿರ್ಮಿಸಿದ್ದ 20 ಕೋಟಿ ವೆಚ್ಚದ ಸೆಟ್ ಬೆಂಕಿಗಾಹುತಿ

Kiara Advani

ಪ್ರಶಸ್ತಿ ಪ್ರದಾನ ಸಮಾರಂಭದ ರೆಡ್ ಕಾರ್ಪೆಟ್ ಗಾಗಿಯೇ ಅವರು ವಿಶೇಷ ಗೌನ್ ಅನ್ನು ಸಿದ್ಧಪಡಿಸಿದ್ದರು. ಹೊಸ ಬಗೆಯ ವಿನ್ಯಾಸದಲ್ಲಿ ತಯಾರಾಗಿದ್ದ ಗೌನ್ ಬಗ್ಗೆಯೂ ಅವರು ಹಲವು ಮಾಹಿತಿಗಳನ್ನು ಹಂಚಿಕೊಂಡರು. ಈ ಗೌನ್ ನಲ್ಲಿ ಅವರು ಮತ್ತಷ್ಟು ಸ್ಟೈಲೀಶ್ ಆಗಿ ಕಂಡಿದ್ದು ವಿಶೇಷ.

kiara advani

ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕು ಎರಡನ್ನೂ ಸಮತೋಲನದಿಂದ ಕಾಪಾಡಿಕೊಂಡು ಬಂದವರು ಕಿಯಾರಾ. ಹಲವು ವರ್ಷಗಳಿಂದ ಸಿದ್ದಾರ್ಥ ಮಲ್ಹೋತ್ರಾ ಜೊತೆ ಡೇಟಿಂಗ್ ಮಾಡುತ್ತಿದ್ದವರು ಫೆಬ್ರವರಿ 7ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾದರು. ಮದುವೆಯ ನಂತರ ಈಗ ಮತ್ತೆ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಮ್ ಚರಣ್ ಜೊತೆ ಈಗ ಸಿನಿಮಾವೊಂದನ್ನು ಕಿಯಾರಾ ಮಾಡುತ್ತಿದ್ದಾರೆ.

Share This Article