ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಮಾಲ್ಡೀವ್ಸ್ ಕಡಲ ತೀರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಾಲ್ಡೀವ್ಸ್‌ನಲ್ಲಿ ಅದ್ಭುತವಾದಂತಹ ಕಾಲ ಕಳೆದ ಕಿಯಾರಾ ಅಡ್ವಾನಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ವೀಡಿಯೋದಲ್ಲಿ ಕಿಯಾರಾ ಬಿಳಿ ಬಣ್ಣದ ಬಿಕಿನಿ ಹಾಗೂ ಸ್ಟೈಲಿಶ್ ಸನ್ ಗ್ಲಾಸ್ ತೊಟ್ಟು ಸಖತ್ ಹಾಟ್ ಆಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ನಟ ಧನುಷ್, ಐಶ್ವರ್ಯಾ ಡಿವೋರ್ಸ್- 18 ವರ್ಷದ ವೈವಾಹಿಕ ಸಂಬಂಧಕ್ಕೆ ಗುಡ್‍ಬೈ
ಇತ್ತೀಚೆಗಷ್ಟೇ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದ ಕಿಯಾರಾ ಅಷ್ಟಾಗಿ ಯಾವುದೇ ಫೋಟೋಗಳನ್ನು ಎಲ್ಲೂ ರಿವೀಲ್ ಮಾಡಿರಲಿಲ್ಲ. ಆದರೆ ಹಲವು ದಿನಗಳ ಗ್ಯಾಪ್ ಬಳಿಕ ಇದೀಗ ಕಿಯಾರಾ ಮಾಲ್ಡೀವ್ಸ್‌ನಲ್ಲಿ ತಾವು ಎಂಜಾಯ್ ಮಾಡಿರುವ ಕೆಲವು ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ‘ಪುಷ್ಪಾ’ ಸಿನಿಮಾಗೆ ಮುದ್ದಾದ ಗೌರವ ಸಲ್ಲಿಸಿದ ಅಮುಲ್
View this post on Instagram
ಒಂದು ಫೋಟೋದಲ್ಲಿ ಕಿಯಾರ ಬೋಟ್‍ನಲ್ಲಿ ಕುಳಿತು ಆಕಾಶದತ್ತ ನೋಡುತ್ತಿದ್ದರೆ, ಮತ್ತೊಂದರಲ್ಲಿ ಸಮುದ್ರದಲ್ಲಿ ತಮ್ಮ ಕೂದಲನ್ನು ನೆನೆಸುತ್ತಾ ಕಣ್ಣು ಮುಚ್ಚಿ ಇದರಲ್ಲಿಯೂ ಆಕಾಶದತ್ತ ನೋಡಿದ್ದಾರೆ. ಇನ್ನೊಂದರಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದರ ಜೊತೆಗೆ ಬಿಕಿನಿ ತೊಟ್ಟು ದೂರದಿಂದ ಓಡಿ ಬರುತ್ತಿರುವ ಮತ್ತು ಬೋಟ್‍ನಲ್ಲಿ ಪ್ರಯಾಣಿಸುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಕ್ಯಾಪ್ಷನ್‍ನಲ್ಲಿ ಬಟರ್ ಫ್ಲೈ ಎಮೋಜಿಯನ್ನು ಹಾಕಿದ್ದಾರೆ. ಒಟ್ಟಾರೆ ಕಿಯಾರಾ ಹಾಟ್ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ವೀಡಿಯೋಗೆ ಹಲವಾರು ಲೈಕ್‍ಗಳು ಹರಿದುಬರುತ್ತಿದೆ.