ಬಾಲಿವುಡ್ ಹಾಟ್ ಬ್ಯೂಟಿ ಕಿಯಾರಾ ಅಡ್ವಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆಷ್ಟೇ ಕಿಯಾರಾ ತಮ್ಮ ಬಾಯ್ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರಾ ವಿಚಾರವಾಗಿ ಭಾರೀ ಸುದ್ದಿಯಲ್ಲಿದ್ದರು. ಈಗ ತಾನು ಮದುವೆ ಆಗದೆಯೇ ಸೆಟಲ್ ಆಗಿದ್ದೀನಿ ಅಂತಾ ಹೇಳಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
Advertisement
ಬಿಟೌನ್ ಬ್ಯೂಟಿ ಕಿಯಾರಾ ಅಡ್ವಾನಿ ಸದ್ಯ `ಭೂಲ್ ಬುಲಯ್ಯ 2′ ಯಶಸ್ಸಿನ ಅಲೆಯಲ್ಲಿದ್ದಾರೆ. ಈ ಚಿತ್ರದ ಯಶಸ್ಸಿನಿಂದ ಬಾಲಿವುಡ್ಗೆ ಹೊಸ ಚೈತನ್ಯ ಸಿಕ್ಕಂತಾಗಿದೆ. ಈ ಬೆನ್ನಲ್ಲೇ ಕಿಯಾರಾ ನಟನೆಯ ಹೊಸ ಸಿನಿಮಾ `ಜುಗ್ ಜುಗ್ ಜೀಯೋ’ ಟ್ರೇಲರ್ ಕೂಡ ರಿಲೀಸ್ ಆಗಿದೆ. ಈ ವೇಳೆ ಕಿಯಾರಾ ಅವರಿಗೆ ಯಾವಾಗ ಸೆಟಲ್ ಆಗುತ್ತೀರಿ ಎಂದು ಕೇಳಲಾಯಿತು. ಆಗ ಕಿಯಾರಾ ನಾನು ಮದುವೆ ಆಗದೇನು ಸೆಟಲ್ ಆಗಬಹುದಲ್ವಾ ಸ್ಮಾರ್ಟ್ ಉತ್ತರ ನೀಡಿದ್ದಾರೆ. ಕೆಲಸ ಮಾಡುತ್ತಿದ್ದೇನೆ, ಹಣ ಮಾಡುತ್ತೀದ್ದೇನೆ, ಮತ್ತು ಖುಷಿಯಾಗಿದ್ದೇನೆ ಇಷ್ಟು ಸಾಕಲ್ವಾ ಎಂದಿದ್ದಾರೆ.ಇದನ್ನೂ ಓದಿ:ಸ್ಯಾಂಡಲ್ವುಡ್ ನಿರ್ದೇಶಕ ಕೆ.ಎನ್.ಮೋಹನ್ ಕುಮಾರ್ ವಿಧಿವಶ
Advertisement
Advertisement
ಸದ್ಯ ಬಾಲಿವುಡ್ನ ಟಾಪ್ ನಾಯಕಿಯರಲ್ಲಿ ಒಬ್ಬರಾಗಿ ಮಿಂಚ್ತಿರೋ ಕಿಯಾರಾ, `ಭೂಲ್ ಬುಲಯ್ಯ ೨’ ಸಕ್ಸಸ್ ನಂತರ ಭಾರೀ ಡಿಮ್ಯಾಂಡ್ನಲ್ಲಿದ್ದಾರೆ. ಅಂದಹಾಗೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಜತೆ ಎಂಗೇಜ್ ಆಗಿರೋ ಕಿಯಾರಾ ಮುಂದೆ ಮದುವೆ ಅಂತಾ ಫ್ಯಾನ್ಸ್ ಕೇಳ್ತಿದ್ದಾರೆ. ಆದರೆ ಈ ಇಬ್ಬರು ಸ್ಟರ್ಸ್, ತಮ್ಮ ಮುಂಬರುವ ಪ್ರಾಜೆಕ್ಟ್ನಲ್ಲಿ ಬ್ಯುಸಿಯಾಗಿದ್ದಾರೆ.