ಬಾಲಿವುಡ್ ತಾರಾಜೋಡಿ ಕಿಯಾರಾ ಅಡ್ವಾನಿ (Kiara Advani) ಹಾಗೂ ಸಿದ್ದಾರ್ಥ್ ಮಲ್ಹೋತ್ರಾ (Siddarth Malhotra) ತಮ್ಮ ಪುತ್ರಿಯ ಹೆಸರನ್ನು ಇದೀಗ ರಿವೀಲ್ ಮಾಡಿದ್ದಾರೆ. ಪುತ್ರಿಗೆ `ಸರಾಯಾ’ ಎಂದು ಹೆಸರಿಟ್ಟಿದ್ದು, ಮಗಳ ಹೆಸರನ್ನು ಸ್ಟಾರ್ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ರಿವೀಲ್ ಮಾಡಿದ್ದಾರೆ.
View this post on Instagram
ಕಳೆದ ಜುಲೈ 16ರಂದು ಕಿಯಾರಾ ಹಾಗೂ ಸಿದ್ಧಾರ್ಥ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಇದುವರೆಗೂ ಮಗಳ ಮುಖವನ್ನ ಕ್ಯಾಮೆರಾ ಮುಂದೆ ತೋರಿಸಿಲ್ಲ. ಇದೀಗ ತಮ್ಮ ಮಗಳಿಗೆ ಸಾಂಪ್ರದಾಯಿಕ ಹೆಸರನ್ನಿಟ್ಟು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.
ಪ್ರೀತಿಸಿ ಮದುವೆಯಾದ ಕಿಯಾರಾ ಸಿದ್ದಾಥ್ ಬಾಲಿವುಡ್‌ನ ಮೋಸ್ಟ್ ಸೆನ್ಸೇಷನಲ್ ಕಪಲ್. ಬಹುಬೇಡಿಯಲ್ಲಿದ್ದಾಗಲೇ ಕಿಯಾರಾ ಅಮ್ಮನಾಗಿದ್ದಾರೆ. ಇದೀಗ ನಟನೆಗೆ ಮಾತೃತ್ವದ ರಜೆಪಡೆದಿರುವ ಕಿಯಾರಾ ಕೆಲವೇ ತಿಂಗಳಲ್ಲಿ ಮತ್ತೆ ನಟನೆಗೆ ಮರಳುವ ಉತ್ಸಾಹದಲ್ಲಿದ್ದಾರೆ. ಇದೀಗ ಪುತ್ರಿಗೆ `ಸಯಾರಾ’ ಎಂದು ಸಾಂಪ್ರದಾಯಿಕ ಹೆಸರನ್ನಿಟ್ಟಿದ್ದಾರೆ.

