ರನ್ಯಾ ರಾವ್‌ಗೆ KIADBಯಿಂದ ಜಮೀನು ಮಂಜೂರು ಮಾಡಿಲ್ಲ: ಸಿಇಓ ಸ್ಪಷ್ಟನೆ

Public TV
1 Min Read
kiadb md mahesh

ಬೆಂಗಳೂರು: ರನ್ಯಾ ರಾವ್‌ಗೆ (Ranya Rao) ಕೆಐಎಡಿಬಿಯಿಂದ ಯಾವುದೇ ಜಮೀನು ಮಂಜೂರು ಮಾಡಿಲ್ಲ ಎಂದು ಕೆಐಎಡಿಬಿ (KIADB) ಸಿಇಓ ಡಾ.ಮಹೇಶ್ ಸ್ಪಷ್ಟನೆ ನೀಡಿದ್ದಾರೆ.

ನಟಿ ರನ್ಯಾ ರಾವ್‌ಗೆ ಸರ್ಕಾರದಿಂದ ಜಮೀನು ಮಂಜೂರು (Land Allotment) ಪ್ರಕರಣದ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಶಿರಾ ಬಳಿ ಮಂಜೂರು ಆಗಿರೋ ಜಾಗ ಕೆಐಎಡಿಬಿ ವಶದಲ್ಲೇ ಇದೆ. ತುಮಕೂರಿನ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಇದುವರೆಗೂ ಹಣ ಕಟ್ಟಿ ಕಂಪನಿ ತನ್ನ ಸ್ವಂತಕ್ಕೆ ಮಾಡಿಕೊಂಡಿಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಸಚಿವರಿಗೆ ರನ್ಯಾ ಕರೆ ಮಾಡಿದ್ದಾಳೆ: ಶಾಸಕ ಭರತ್ ಶೆಟ್ಟಿ ಬಾಂಬ್

Ranya Rao 1

2023 ಜನವರಿ 25 ರಂದು ಸಚಿವರು ಮತ್ತು ಸದಸ್ಯರನ್ನ ಒಳಗೊಂಡ ಸ್ಟೇಟ್ ಲೆವೆಲ್ ವಿಂಡೋ ಕಮಿಟಿ ಕ್ಲಿಯರೆನ್ಸ್ ಕೊಟ್ಟಿದೆ. ಕಮಿಟಿ ಕ್ಲಿಯರೆನ್ಸ್ ಕೊಟ್ಟ ಮೇಲೆ ಕಂಪನಿ ಕಡೆಯಿಂದ ಜಾಗ ಮಂಜೂರು ಮಾಡಿ ಎಂದು ಹೇಳಿಲ್ಲ. ಹಾಗಾಗಿ ಕೆಐಎಡಿಬಿಯಿಂದ ಯಾವುದೇ ಜಾಗ ಮಂಜೂರು ಆಗಿಲ್ಲ. ಜನರಲ್ ಕ್ಯಾಟಗಿರಿಯಲ್ಲಿ ಕ್ಲಿಯರೆನ್ಸ್ ಸಿಕ್ಕಿತ್ತು ಎಂದರು. ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ ಅಕ್ರಮ ಆರೋಪ – ಛತ್ತೀಸ್‌ಗಢ ಮಾಜಿ ಸಿಎಂ, ಪುತ್ರನ ಮನೆ ಮೇಲೆ ED ದಾಳಿ

ಸಿಂಗಲ್ ವಿಂಡೋ ಕಮಿಟಿಯಲ್ಲಿ ಕ್ಲಿಯರೆನ್ಸ್ ಸಿಕ್ಕಿದ ಮೇಲೆ ಜಾಗ ಪಡೆಯಲು ಎರಡು ವರ್ಷಗಳ ಕಾಲ ಸಮಯ ಇರುತ್ತದೆ. ಕ್ಲಿಯರೆನ್ಸ್ ಸಿಕ್ಕಿಯೇ ಎರಡು ವರ್ಷ ಮುಕ್ತಾಯ ಆಗಿದೆ. ಹಾಗಾಗಿ ಜಾಗ ಈಗ ಮಂಜೂರು ಮಾಡೋಕೆ ಬರಲ್ಲ. ಜಾಗ ಬೇಕು ಅಂದರೆ ಮತ್ತೆ ಅಪ್ಲೈ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹಾವೇರಿ| 33 ಸೆಕೆಂಡ್ ನಲ್ಲಿ 33 ಲಕ್ಷ ಹಣ ಕಳ್ಳತನ – ಓರ್ವ ಆರೋಪಿ ಅರೆಸ್ಟ್

Share This Article