ಬಾಲಿವುಡ್ ಬೆಡಗಿ ಶ್ರೀದೇವಿ ಪುತ್ರಿ ಖುಷಿ ಕಪೂರ್ (Kushi Kapoor) ಅವರು ಮಿಸ್ಟರಿ ಹುಡುಗನ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಬೆನ್ನಲ್ಲೇ ನಟಿ ಎಂಗೇಜ್ ಆಗಿರುವ ಕುರಿತು ಸುಳಿವು ನೀಡಿದ್ರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ:ರೆಟ್ರೋ ಗೆಟಪ್‌ನಲ್ಲಿ ಅಭಿಮಾನಿಗಳ ಮುಂದೆ ಬಂದ ಶ್ರೀಲೀಲಾ
ಮಿಸ್ಟರಿ ಹುಡುಗನನ್ನು (Mistery Man) ಖುಷಿ ತಬ್ಬಿಕೊಂಡು ಕನ್ನಡಿ ಮುಂದೆ ಸೆಲ್ಫಿ ಕ್ಲಿಕಿಸಿರುವ ರೊಮ್ಯಾಂಟಿಕ್ ಫೋಟೋವನ್ನು ನಟಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿರುವ ವ್ಯಕ್ತಿ ವೈದಾಂಗ್ ರೈನಾನಾ? ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಶೇರ್ ಮಾಡಿ ಡೇಟಿಂಗ್ ಕುರಿತು ನಟಿ ಸುಳಿವು ನೀಡಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ.
View this post on Instagram
ಇನ್ನೂ ಜುನೈದ್ ಖಾನ್ ಜೊತೆ ‘ಲವ್‌ಯಾಪಾ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಖುಷಿ ಕಪೂರ್ ನಟಿಸಿದ್ದಾರೆ. ಇದನ್ನೂ ಓದಿ:ರೆಟ್ರೋ ಗೆಟಪ್‌ನಲ್ಲಿ ಅಭಿಮಾನಿಗಳ ಮುಂದೆ ಬಂದ ಶ್ರೀಲೀಲಾ
ಆಮೀರ್ ಖಾನ್ ಪುತ್ರನ ಜೊತೆಗಿನ ನಟಿಯ ಸಿನಿಮಾ ಫೆ.7ರಂದು ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.