ಹೆಸರಾಂತ ನಟಿ, ರಾಜಕಾರಣಿ ಖುಷ್ಬೂ (Khushboo) ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದರು. ಆ ಫೋಟೋದಲ್ಲಿ ಖುಷ್ಬೂ ಶಾರ್ಟ್ ಹೇರ್ ಕಟ್ (short hair) ಮಾಡಿಸಿಕೊಂಡಿದ್ದರು. ಈ ಫೋಟೋ (photo) ಬಗ್ಗೆ ಸಾಕಷ್ಟು ಚರ್ಚೆ ಕೂಡ ಮಾಡಲಾಗಿತ್ತು. ಉದ್ದನೆಯ ಜಡೆ ಹೊಂದಿದ್ದ ಖುಷ್ಭು ಯಾಕೆ ಹೀಗೆ ಮಾಡಿಕೊಂಡರು ಎಂದು ಕೇಳಲಾಗಿತ್ತು.
ಜೊತೆಗೆ ಈ ರೀತಿಯ ಶಾರ್ಟ್ ಹೇರ್ ಕಟ್ ಈ ವಯಸ್ಸಿನಲ್ಲಿ ಯಾಕೆ ಎಂದು ತರ್ಲೆ ತಮಾಷೆಗಳನ್ನೂ ಮಾಡಲಾಗಿತ್ತು. ಅವರು ಶೇರ್ ಮಾಡಿದ್ದ ಫೋಟೋಗಳು ವೈರಲ್ ಕೂಡ ಆಗಿದ್ದು. ಅಭಿಮಾನಿಗಳು ಮುಗಿಬಿದ್ದು ಕಾಮೆಂಟ್ ಮಾಡಿದ್ದರು. ಆ ಕಾಮೆಂಟ್ ಓದಿರುವ ಖುಷ್ಬೂ ಕ್ಷಮೆ ಕೇಳಿದ್ದಾರೆ.
ನಾನು ತಲೆಕೂದಲನ್ನು ಕಟ್ ಮಾಡಿಸಿಕೊಂಡಿಲ್ಲ. ಇದು ಹೊಸ ಸಿನಿಮಾವಾಗಿ ಮಾಡಿಸಿರುವ ಲುಕ್ ಟೆಸ್ಟ್. ಈ ಫೋಟೋ ನಿಮಗೆ ಮಿಸ್ ಗೈಡ್ ಮಾಡಿದ್ದರೆ ಕ್ಷಮೆ ಇರಲಿ ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಮಾಡಿರುವ ಕಾಮೆಂಟ್ ನನಗೆ ಅಚ್ಚರಿ ಮೂಡಿಸಿವೆ ಎಂದಿದ್ದಾರೆ.
ಎಂಬತ್ತರ ದಶಕದಿಂದ ಈವರೆಗೂ ಬಹುಬೇಡಿಕೆಯ ನಟಿಯಾಗಿದ್ದಾರೆ ಖುಷ್ಬೂ. ಕನ್ನಡದಲ್ಲೂ ಹಲವಾರು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದರ ಜೊತೆ ಜೊತೆಗೆ ರಾಜಕಾರಣಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]