Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕ್ಷಮಿಸಿ ಬಿಡು ಬಸವಣ್ಣ : ವಿಡಿಯೋ ರಿಲೀಸ್ ಮಾಡಿದ ಹಂಸಲೇಖ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ಕ್ಷಮಿಸಿ ಬಿಡು ಬಸವಣ್ಣ : ವಿಡಿಯೋ ರಿಲೀಸ್ ಮಾಡಿದ ಹಂಸಲೇಖ

Public TV
Last updated: April 18, 2022 10:38 am
Public TV
Share
3 Min Read
FotoJet 2 10
SHARE

ಸಾಹಿತಿ ಮತ್ತು ದಂತವೈದ್ಯರಾಗಿರುವ ಗಂಗಾವತಿಯ ಡಾ.ಶಿವಕುಮಾರ್ ಮಾಲಿಪಾಟೀಲ್‌ ರಚಿಸಿರುವ ’ಕ್ಷಮಿಸಿ ಬಿಡು ಬಸವಣ್ಣ’ ಎನ್ನುವ 5.34 ನಿಮಿಷದ ವಿಡಿಯೋ ಹಾಡನ್ನು ನಿರ್ಮಿಸಿದ್ದಾರೆ. ನಾಡೋಜ.ಗೂ.ರು.ಚನ್ನಬಸಪ್ಪ, ನಾದಬ್ರಹ್ಮ ಹಂಸಲೇಖಾ ಇತರೆ ಗಣ್ಯರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನಾಡೋಜ ಗೂ.ರು.ಚನ್ನಬಸಪ್ಪ ಮಾತನಾಡುತ್ತಾ ಹಂಸಲೇಖಾ ನಮ್ಮ ನಾಡಲ್ಲೆ ಅಭಿಮಾನ ಪಡತಕ್ಕಂಥ ಶ್ರೇಷ್ಟ ಸಂಗೀತ ಸಂಯೋಜಕ. ಅವರ ಬಗ್ಗೆ ಒಂದು ಲೇಖನ ಬರೆದಿದ್ದೆ. ಆದರೆ ನೆನಪಿನ ಶಕ್ತಿ ಹೋಗಿದ್ದರಿಂದ ಹೇಳಲು ಆಗುತ್ತಿಲ್ಲ. ಮಾಲಿಪಾಟೀಲರು ಲೋಕಗೀತೆ ರಚನೆ ಮಾಡಿ ಅದಕ್ಕೊಂದು ದೃಶ್ಯರೂಪ ಕೊಟ್ಟಿರುವುದು ತುಂಬ ಅಭಿನಂದನೀಯ. ನಾನು ನೋಡಿ ಸಂತೋಷಪಟ್ಟಿದ್ದೇನೆ. ನೀವು, ನಿಮ್ಮ ಅಕ್ಕಪಕ್ಕದವರಿಗೆ ಹೇಳಿ. ಶ್ರೀನಿವಾಸಮೂರ್ತಿರನ್ನು ಪರದೆ ಮೇಲೆ ಮಾತ್ರ ನೋಡಿದ್ದೆ. ನೇರವಾಗಿ ನೋಡಿರಲಿಲ್ಲ. ಈ ನೆಪದಲ್ಲಿ ಆದರೂ ಹಂಸಲೇಖಾರನ್ನು ನೋಡಲು ಅವಕಾಶವಾಯಿತು. ನನಗೆ 95 ಆಗಿದೆ. ದೇವರ ಅನುಗ್ರಹ ಇದ್ದರೆ ಸಂಚೂರಿ ಬಾರಿಸುತ್ತೇನೆಂದು ಆಹ್ವಾನಿತರನ್ನು ನಗಿಸಿದರು. ಇದನ್ನೂ ಓದಿ: ಬಾಲಿವುಡ್‌ 3ನೇ ದಿನದ ಕಲೆಕ್ಷನ್‌ನಲ್ಲೂ ಹವಾ ಕ್ರಿಯೇಟ್‌ ಮಾಡಿದ ʻಕೆಜಿಎಫ್‌ 2ʼ

FotoJet 1 11

ಕ್ಷಮಿಸಿ ಬಿಡು ಬಸವಣ್ಣ ಅಂತ ಯಾಕೆ ಕೇಳಬೇಕು. ಹನ್ನರಡನೇ ಶತಮಾನದಲ್ಲಿ ಕ್ರಾಂತಿ ಮಾಡಿ ದಾರಿದೀಪ ಹಾಕಿ ಕೊಟ್ಟಿದ್ದಾರೆ. ಅದರಂತೆ ಎಲ್ಲರೂ ಯಾರು ನಡೆಯುತ್ತಿಲ್ಲ. ಅದರಲ್ಲೂ ರಾಜಕೀಯ ವ್ಯಕ್ತಿಗಳು. ಇವತ್ತು ಹೇಳಿದ್ದನ್ನು ನಾಳೆ ಹೇಳೋಲ್ಲ. ನಾಳೆ ಹೇಳಿದ್ದನ್ನು ನಾಡಿದ್ದು ಮರೆತುಬಿಡ್ತಾರೆ. ಇಂಥ ಪ್ರಸಂಗದಲ್ಲಿ ಕ್ಷಮಿಸಿ ಬಿಡು ಅಂತ ಯಾರಿಗೆ ಹೇಳೋದು. ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಂಡರೆ ಬೇಕಾದಷ್ಟು ಆಗುತ್ತದೆ. ಆವಾಗ ಬಸವಣ್ಣನವರು ಮೇಲಿಂದ ಕ್ಷಮಿಸುತ್ತಾರೆ. ಇಂಥ ಒಂದು ಸಾಹಿತ್ಯವನ್ನು ನಿರ್ಮಾಪಕರು ಸೊಗಸಾಗಿ ರಚನೆ ಮಾಡಿದ್ದಾರೆ. ಅದನ್ನೆ ಅಷ್ಟೇ ಚೆಂದವಾಗಿ ರಾಜುಎಮ್ಮಿಗನೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣ ಹಂಸಲೇಖಾ. ಈ ಹಿಂದೆ ಅವರು ಏನೇ ಮಾತನಾಡಿದ್ರು ಸುದ್ದಿ ಆಗುತ್ತಿತ್ತು. ಆದರೆ ಯಾವುದಕ್ಕೂ ಬಗ್ಗಲಿಲ್ಲ. ಅದು ಒಂದು ಅವರ ಕೆಚ್ಚದೆಯ ನುಡಿ. ಇದ್ದದ್ದನ್ನು ಇದ್ದಾಗೆ ಹೇಳಿಬಿಡಬೇಕು. ಆದು ಆಗಿದೆ ಹೀಗಿದೆ. ಒಳಗೊಂದು ಹೊರಗೊಂದು ಇಟ್ಟುಕೊಳ್ಳದೆ ನೇರವಾಗಿ ಮಾತಾಡಿದ್ದು ಕೆಲವರಿಗೆ ರುಚಿಸಲಿಲ್ಲ. ಅದಕ್ಕೆ ನಾನು ಅವರ ಪರವಾಗಿ ಜೈ ಅಂತೇನೆ. ಹಾಡು ಲೋಕಾರ್ಪಣೆಯಾಗಿದೆ, ಹೆಚ್ಚು ಜಯಪ್ರಿಯವಾಗಲೆಂದು ಹಿರಿಯ ನಟ ಶ್ರೀನಿವಾಸಮೂರ್ತಿ ಶುಭ ಹಾರೈಸಿದರು. ಇದನ್ನೂ ಓದಿ: `ಚಂದ್ರಲೇಖ ರಿಟರ್ನ್ಸ್’ ಅಂತಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್

FotoJet 3 2

ಇಡೀ ಕನ್ನಡ ನಾಡಿನ ಜನಜೀವನದ ಸಮಾಜ ಉದ್ದಾರದ ಎಲ್ಲಾ ವಿಷಯಗಳ ಸಂಸ್ಥೆಗೆ ಅಧ್ಯಕ್ಷರು ಒಬ್ಬನೇ ಬಸವಣ್ಣ. ಅವರು ಅಧ್ಯಕ್ಷರು, ನಾವೆಲ್ಲರೂ ಅದಕ್ಷರು. ಅವರು ಹೇಳಿದ್ದು ಒಂದನ್ನು ಪಾಲಿಸದೆ ಹೀಗೆ ಪರಿಪಾಲಿಸಿಕೊಂಡು ಜೀವನ ಮಾಡ್ತಾ ಇದ್ದೇವೆ. ನಾನು ನಾಟಕ ಕಂಪೆನಿಯಿಂದ ಬಂದವನು. ನೂರಾರು ಕಲಾವಿದರು ಬರುತ್ತಾ ಇದ್ದಾರೆ. ಅವರಿಗೊಂದು ವೇದಿಕೆ ಸೃಷ್ಟಿಸಲು ಪಂಚಾಕ್ಷರಿ ಗವಾಯಿ ಹೆಸರಿನಲ್ಲಿ ಚೌಡಯ್ಯ ಮಂದಿರ ತರಹ ರಂಗಮಂದಿರ ಕಟ್ಟಬೇಕೆಂದು ಯೋಚನೆ ಮಾಡ್ತಾ ಇದ್ದೇನೆ. ನಿರ್ಮಾಪಕರು ಮೂರು ವರ್ಷದ ಕೆಳಗೆ ಕರೋನ ಬಗ್ಗೆ ಗೀತೆಯನ್ನು ರಚಿಸಿದ್ದರು. ಅದನ್ನು ಉಪೇಂದ್ರ ಪ್ರಶಂಸೆ ವ್ಯಕ್ತಪಡಿಸಿದ್ದರು. ದೇಶದಲ್ಲಿ, ಜಗತ್ತಿನಲ್ಲಿ ಬದಲಾವಣೆ ಆಗ್ತಾ ಇದೆ. ಮತ್ಸರ ಮತ್ತು ದ್ರೋಹ ಅನ್ನೋದು ದಿನನಿತ್ಯದ ಶೈಲಿಯಾಗಿದೆ. ಉಕ್ರೇನ್‌ನಂತಹ ಚಿಕ್ಕ ದೇಶ ಗುಬ್ಬಚ್ಚಿಗೆ ಪಾಪಚ್ಚಿ ಬಿದ್ದು ಅಪ್ಪಚ್ಚಿ ಆಯಿತು. ನಾವುಗಳು ಏನು ಮಾಡಲಿಕ್ಕೆ ಸಾಧ್ಯವಿಲ್ಲ. ಮಂಗನಿಂದ ಮಾನವ. ನಾವು ಬದುಕಿದ್ದು ಆಯಿತು. ನಮ್ಮ ಮಕ್ಕಳು ಬೆಳೀಬೇಕು. ಅವರುಗಳು ಪೂರ್ಣ ಜೀವನ ಮಾಡಬೇಕು. ಹೀಗೆ ನಾವು ಯೋಚನೆ ಮಾಡುವ ದೃಷ್ಟಿಯಲ್ಲಿ ಬಸವ ಇರ‍್ತಾನೆ. 12ನೇ ಶತಮಾನದಲ್ಲಿ ಬಸವಣ್ಣ ಖಡ್ಗವನ್ನು ಕೆಳಗಿಳಿಸು ಬಿಜ್ಜಳ ರಾಜನೇ, ಯುದ್ದವನ್ನು ನಿಲ್ಲಿಸು, ಸೈನಿಕರನ್ನು ಅಕ್ಷರಸ್ತರನ್ನಾಗಿ ಮಾಡು, ಯುದ್ದ ನಿಲ್ಲುತ್ತೆ. ಜನತಂತ್ರ ಬರುತ್ತೆ ಅಂತ ಬುದ್ದಿ ಹೇಳಿದ್ದ. ಅಂದರೆ ಜನತಂತ್ರದ ಜನಕ ಬಸವ. ಅವನನ್ನು ಮುಟ್ಟಿದರೆ ಕೀರ್ತಿ ಇಲ್ಲವೆ ಬೇರೆನೋ ಆಗುತ್ತದೆ. ಅದರಿಂದ ಆ ಬಸವ ಇಡೀ ಪ್ರದೇಶಕ್ಕೆ ಒಂದು ಧರ್ಮ ಸೃಷ್ಟಿಸುತ್ತೆ. ಇಡೀ ಕರ್ನಾಟಕ ವೀರಶೈವ ಎನ್ನುವ ಲಿಂಗಾಯಿತ ಧರ್ಮವನ್ನು ಪರಿಶುದ್ದವಾಗಿ ಶೋಧಿಸಿ ಮಾನವ ಜನಾಂಗಕ್ಕೆ ಕೊಟ್ಟಂತ ಬಸವಣ್ಣನನ್ನು ನಿರ್ಮಾಪಕರು ಪ್ರೀತಿಯಿಂದ ಬಯಲಿಗೆ ತಂದಿದ್ದಾರೆ. ನಾವು ಬುದ್ದಿ ಹೇಳ್ತಾ ಇರಬೇಕು. ಅವರು ಬುದ್ದಿ ಕಲಿತುಕೊಳ್ತಾ ಇರಬೇಕು. ಇದು ಬಸಿವ ಭಾರತ, ಬಸವ ಭಾರತವೆಂದು ನಾದಬ್ರಹ್ಮ ಹಂಸಲೇಖಾ ಅಭಿಪ್ರಾಯಪಟ್ಟರು.

FotoJet 4 2

ಹಂಸಲೇಖಾ ಶಿಷ್ಯ ರಾಜುಎಮ್ಮಿಗನೂರು ಗೀತೆಗೆ ನಿರ್ದೇಶನ ಮತ್ತು ರಾಗ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಹಣ ರವಿಗೌಡರ್, ಸಂಕಲನ ಎ.ಆರ್.ಕೃಷ್ಣ, ನೃತ್ಯ ನಾಗರತ್ನಹಡಗಲಿ ಅವರದಾಗಿದೆ. ಧಾರವಾಡದಲ್ಲಿ ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಹಾಡನ್ನು ಆನಂದ್ ಆಡಿಯೋದವರು ಹೊರತಂದಿದ್ದಾರೆ. ಸುಂದರ ಕಾರ್ಯಕ್ರಮದಲ್ಲಿ ಅರವಿಂದಜತ್ತಿ, ಶ್ರೀಪಾದಹೆಗಡೆ ಉಪಸ್ತಿತರಿದ್ದರು.

Share This Article
Facebook Whatsapp Whatsapp Telegram
Previous Article crime 8 ವರ್ಷದ ಮಗನನ್ನೇ ಕತ್ತು ಸೀಳಿ ಕೊಂದ ಕ್ರೂರಿ ತಾಯಿ
Next Article SIDDU DKSHI ಡಿಕೆಶಿ, ಸಿದ್ದರಾಮಯ್ಯ, ಸುರ್ಜೇವಾಲಾ ವಿರುದ್ಧ ಎಫ್‍ಐಆರ್ ದಾಖಲು

Latest Cinema News

urmila matondkar
ಮಿನಿ ಫ್ರಾಕ್ ಧರಿಸಿ ರಂಗೀಲಾರೆ ಎಂದು ಕುಣಿದ ಊರ್ಮಿಳಾ
Bollywood Cinema Latest Top Stories
Kavya Shastri G Parameshwar
`ಗೃಹಸಚಿವರ ಮಾತಿಗೆ ನಾಚಿಕೆಯಾಗ್ಬೇಕು’ ಎಂದ ನಟಿ ಕಾವ್ಯ ಶಾಸ್ತ್ರಿ
Cinema Latest Sandalwood Top Stories Uncategorized
Nimika Ratnakar
ದರ್ಶನ್ ಅಮೇಝಿಂಗ್ ವ್ಯಕ್ತಿ – ಕ್ರಾಂತಿ ಸೆಟ್‍ನ ಮೆಲುಕು ಹಾಕಿದ ಪುಷ್ಪವತಿ
Cinema Latest Sandalwood Top Stories
Sanjay Dutt 3
ಸಂಜಯ್ ದತ್ ಕತ್ತಿಗೆ ರೇಜರ್ ಹಿಡಿದಿದ್ದ ಡಬಲ್ ಮರ್ಡರ್ ಅಪರಾಧಿ!
Bollywood Cinema Latest Top Stories
Om Prakash Rao Darshan
ಫೀನಿಕ್ಸ್ ಸಿನಿಮಾದ ಕಥೆ ದರ್ಶನ್ ಅವರಿಗೆ ಮಾಡಿದ್ದು: ಓಂ ಪ್ರಕಾಶ್ ರಾವ್ ಸ್ಫೋಟಕ ಮಾತು
Cinema Latest Sandalwood Top Stories

You Might Also Like

vijayendra delegation
Latest

ಧರ್ಮಸ್ಥಳ ವಿರುದ್ಧ ಪಿತೂರಿ ಆರೋಪ- ಅಮಿತ್‌ ಶಾ ಭೇಟಿಯಾದ ರಾಜ್ಯ ಬಿಜೆಪಿ ನಾಯಕರ ನಿಯೋಗ

3 hours ago
Narendra Modi 2
Latest

ಜಿಎಸ್‍ಟಿ ಬಗ್ಗೆ ಅರಿವು ಮೂಡಿಸಲು ಸಮ್ಮೇಳನ ಆಯೋಜಿಸಿ – ಎನ್‍ಡಿಎ ಸಂಸದರಿಗೆ ಮೋದಿ ಸೂಚನೆ

4 hours ago
CT Ravi 1
Chikkamagaluru

ಸಿಎಂ ಹೊಗಳಿದ ಶಾಂತಿದೂತರಿಂದ ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲು: ಸಿಟಿ ರವಿ ಆಕ್ರೋಶ

5 hours ago
a british man came to nandigiri search of his ancestors graves
Chikkaballapur

ಪೂರ್ವಿಕರ ಸಮಾಧಿ ಹುಡುಕಿಕೊಂಡು ನಂದಿಗಿರಿಧಾಮಕ್ಕೆ ಬಂದ ಬ್ರಿಟೀಷ್ ವ್ಯಕ್ತಿ!

5 hours ago
H D Kumaraswamy 2
Bengaluru City

ಬಿಡದಿಯ ಕೇತಗಾನಹಳ್ಳಿ‌ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ – ಹೆಚ್‌ಡಿಕೆಗೆ ಹೈಕೋರ್ಟ್ ಶಾಕ್

5 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?