ನವದೆಹಲಿ: ಇಂದು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಬರೋಬ್ಬರಿ 5,000 ಕೆಜಿ ಕಿಚಡಿ ತಯಾರು ಮಾಡುವ ಮೂಲಕ ವರ್ಲ್ಡ್ ರೆಕಾರ್ಡ್ ಮಾಡಿದೆ.
ವಿಶ್ವ ದಾಖಲೆ ಸೃಷ್ಟಿಸುವ ಉದ್ದೇಶದಿಂದ ದಲಿತರ ಮನೆಗಳಿಂದ ಅಕ್ಕಿ ಮತ್ತು ಬೇಳೆಯನ್ನು ರಾಮಲೀಲಾ ಮೈದಾನಕ್ಕೆ ತರಿಸಿ ರ‍್ಯಾಲಿಯಲ್ಲಿ ಕಿಚಡಿಯನ್ನು ತಯಾರು ಮಾಡಲಾಗಿದೆ. ‘ಬಿಮ್ ಮಹಾಸಂಗಮ್ ವಿಜಯ್ ಸಂಕಲ್ಪ’ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಬೆಂಬಲಿಗರು ಹಾಗೂ ಕಾರ್ಯಕರ್ತರಿಗೆ ಕಿಚಡಿಯನ್ನು ವಿತರಿಸಲಾಗಿದೆ. ಈ ರ‍್ಯಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆಯುತ್ತಿದೆ.
Advertisement
Advertisement
ನವೆಂಬರ್ 2017 ರಂದು ಖ್ಯಾತ ಬಾಣಸಿಗ ಸಂಜೀವ್ ಕಪೂರ್ ಅವರು 918 ಕೆಜಿ ಕಿಚಡಿ ತಯಾರಿಸುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದರು. ಈ ಕಿಚಡಿಯನ್ನು ಸಂಜೀವ್ ಕಪೂರ್ ಅವರು ದೆಹಲಿಯಲ್ಲಿ ಆಹಾರ ಸಂಸ್ಕರಣಾ ಸಚಿವಾಲಯ ಆಯೋಜಿಸಿದ್ದ ಆಹಾರ ಮೇಳದಲ್ಲಿ ತಯಾರು ಮಾಡಿದ್ದರು.
Advertisement
ಈ ರ‍್ಯಾಲಿಯಲ್ಲಿ ಅಮಿತ್ ಶಾ ಅವರು, ಬಿಜೆಪಿ ಸರ್ಕಾರ ದಲಿತ ಸಮುದಾಯಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಮಾತನಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು, ಬಿಜೆಪಿ ಸರ್ಕಾರ ಸಮಾಜದಲ್ಲಿ ದಲಿತರು ಮತ್ತು ಕೆಳಹಂತದಲ್ಲಿರುವ ಜನರ ಅಭಿವೃದ್ದಿಗಾಗಿ ಯಾವುದೇ ಯೋಜನೆ ಜಾರಿಗೆ ತಂದಿಲ್ಲ ಎಂದು ನಿರಂತರವಾಗಿ ಕಾಂಗ್ರೆಸ್ ಬಗ್ಗೆ ಆರೋಪ ಮಾಡುತ್ತಿತ್ತು.
Advertisement
ಈ ಹಿನ್ನೆಲೆಯಲ್ಲಿ ಅಮಿತ್ ಶಾ ದಲಿತರಿಗೆ ತಮ್ಮ ಸರ್ಕಾರ ಅವರಿಗಾಗಿ ಯಾವ ಯಾವ ಯೋಜನೆಯನ್ನು ಜಾರಿಗೆ ಮಾಡಿದೆ ಎಂಬುದನ್ನು ತಿಳಿಸಲು ಈ ರ‍್ಯಾಲಿಯನ್ನು ಆಯೋಜನೆ ಮಾಡಿದ್ದಾರೆ. ಜೊತೆಗೆ ದಲಿತರ ಮನೆಯಲ್ಲಿಯೇ ಅಕ್ಕಿ, ಬೇಳೆ ತರಿಸಿ ಕಿಚಡಿ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
त्रिपुरा के पन्ना प्रमुख सम्मेलन में यह एक अविस्मरणीय क्षण था जब सभी पन्ना प्रमुखों ने पन्ने दिखाकर अपनी उपस्थिति दर्ज करायी।
भाजपा की शक्ति हमारा बूथ का कार्यकर्ता है और मुझे गर्व है कि भाजपा ही एक ऐसी पार्टी है जहां मेरे जैसा एक बूथ का कार्यकर्ता राष्ट्रीय अध्यक्ष बन सकता है। pic.twitter.com/vpfoMwqGbn
— Amit Shah (@AmitShah) January 5, 2019
ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv