ಉತ್ತರ ಭಾರತ ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಫೇಮಸ್ ಆಗಿರೋ ಪಾವ್ ಭಾಜಿ ನಿಮಗೆಲ್ಲರಿಗೂ ಗೊತ್ತಿದೆ. ಸ್ಟ್ರೀಟ್ ಫುಡ್ ಪ್ರಿಯರಿಗಂತೂ ಇದು ಅಚ್ಚುಮೆಚ್ಚು. ಇದೇ ಪಾವ್ ಭಾಜಿಗೆ ನಾನ್‌ವೆಜ್ ಟ್ವಿಸ್ಟ್ ನೀಡಿದ್ರೆ ಹೇಗೆ? ಪಾವ್ ಜೊತೆ ಇಲ್ಲಿವರೆಗೆ ಭಾಜಿ ಮಾತ್ರ ನೀವು ಟ್ರೈ ಮಾಡಿದ್ರೆ ಇದೀಗ ನಾನ್‌ವೆಜ್ ಖೀಮಾವನ್ನು ಟ್ರೈ ಮಾಡೋ ಸಮಯ. ನಾವಿಂದು ಪಾವ್ ಜೊತೆ ಸವಿಯೋ ರುಚಿಕರ ಮಟರ್ ಖೀಮಾ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ.
Advertisement
ಬೇಕಾಗುವ ಪದಾರ್ಥಗಳು:
ಖೀಮಾ ಅಥವಾ ಕೊಚ್ಚಿದ ಮಾಂಸ – 300 ಗ್ರಾಂ
ಹಸಿರು ಬಟಾಣಿ – 1 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 2
ಸಣ್ಣಗೆ ಹೆಚ್ಚಿದ ಟೊಮೆಟೋ – 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಪಾವ್ ಭಾಜಿ ಮಸಾಲಾ – 1 ಟೀಸ್ಪೂನ್
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – ಅರ್ಧ ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – ಮುಷ್ಟಿಯಷ್ಟು
ಬೆಣ್ಣೆ – 50 ಗ್ರಾಂ
ನಿಂಬೆ – 1
ಪಾವ್ ಬನ್ – 8
ಎಣ್ಣೆ – 2 ಟೀಸ್ಪೂನ್ ಇದನ್ನೂ ಓದಿ: ವೀಕೆಂಡ್‌ನಲ್ಲಿ ಮಾಡಿ ಕೊಲ್ಹಾಪುರಿ ಪಂದ್ರಾ ರಸ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಹಸಿರು ಬಟಾಣಿಯನ್ನು ಕುಕ್ಕರ್‌ಗೆ ಹಾಕಿ, ಉಪ್ಪು, ಸಕ್ಕರೆ ಬೆರೆಸಿ, ಸಾಕಷ್ಟು ನೀರು ಸೇರಿಸಿ, 2 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ. ನಂತರ ಅದನ್ನು ಬದಿಗಿಡಿ.
* ಈಗ ಕುಕ್ಕರ್‌ಗೆ ಎಣ್ಣೆ ಹಾಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಉಪ್ಪು ಹಾಗೂ ಖೀಮಾ ಸೇರಿಸಿ ಹುರಿದು, 5 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
* ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಈರುಳ್ಳಿ ಹಾಕಿ ಗುಲಾಬಿ ಬಣ್ಣ ಬರುವವರೆಗೆ ಹುರಿಯಿರಿ.
* ನಂತರ ಟೊಮೆಟೋ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ.
* ಈಗ ಮಸಾಲಾ ಪುಡಿಗಳನ್ನು ಸೇರಿಸಿ ಎಣ್ಣೆ ಬಿಡುವವರೆಗೆ ಹುರಿದುಕೊಳ್ಳಿ.
* ಈಗ ಬೇಯಿಸಿದ ಖೀಮಾ ಮತ್ತು ಹಸಿರು ಬಟಾಣಿ ಸೇರಿಸಿ ಎಲ್ಲವೂ ಚೆನ್ನಾಗಿ ಮಿಶ್ರಣವಾಗುವವರೆಗೆ 10 ನಿಮಿಷಗಳ ಕಾಲ ಕುದಿಸಿ.
* ಅದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
* ಈಗ ಒಂದು ಪ್ಯಾನ್‌ನಲ್ಲಿ ಪಾವ್ ಬನ್‌ಗಳನ್ನು ಬೆಣ್ಣೆಯೊಂದಿಗೆ ಟೋಸ್ಟ್ ಮಾಡಿ.
* ಸ್ವಲ್ಪ ಬೆಣ್ಣೆ, ನಿಂಬೆ ತುಂಡು, ಈರುಳ್ಳಿ ಮತ್ತು ಬೆಣ್ಣೆಯಲ್ಲಿ ಟೋಸ್ಟ್ ಮಾಡಿದ ಪಾವ್‌ಅನ್ನು ಪ್ಲೇಟ್‌ನಲ್ಲಿ ಇರಿಸಿ, ಅದರೊಂದಿಗೆ ಖೀಮಾ ಮಟರ್ ಅನ್ನು ಬಡಿಸಿ ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಮಸಾಲೆಯುಕ್ತ ಬಾಂಬೆ ಆಲೂಗಡ್ಡೆ ರೆಸಿಪಿ ಒಮ್ಮೆ ಮಾಡಿ