ಬೆಂಗಳೂರು: ಕ್ರೀಡಾಪಟುಗಳಿಗೆ ಪ್ಯಾರಾ ಸೈಲಿಂಗ್ ಹಾಗೂ ಕ್ರೀಡಾಕೂಟದ ಪ್ರಚಾರದ ಏರ್ ಕ್ರಾಫ್ಟ್‌ಗಳಿಗೆ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಚಾಲನೆ ನೀಡಿದರು.
Advertisement
ಸಚಿವರು ಸಸ್ನಾ 172 ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಪ್ರಚಾರದ ಏರ್ ಕ್ರಾಫ್ಟ್‌ಗಳಿಗೆ ಚಾಲನೆ ನೀಡಿದರು. ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳಿಗಾಗಿ ಏರ್ಪಡಿಸಿರುವ ಪ್ಯಾರಾ ಸೈಲಿಂಗ್‍ಗೆ ನಾರಾಯಣಗೌಡ ಚಾಲನೆ ನೀಡಿದ್ದು, ಇಂದಿನಿಂದ ಕ್ರೀಡಾಪಟುಗಳಿಗೆ ಉಚಿತವಾಗಿ ಪ್ಯಾರಾ ಸೈಲಿಂಗ್‍ಗೆ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಉಪ-ತಳಿಗಳು ಅಪಾಯವನ್ನುಂಟು ಮಾಡುತ್ತವೆ: ಮೋದಿ ಎಚ್ಚರಿಕೆ
Advertisement
I am happy to take part in launching Advertising aircraft and Para Sailing Cessna 172 today.
Participants taking part in @kheloindia University Games can make use of this and it is a free ride for them.@kheloindia @IndiaSports @ianuragthakur @ddsportschannel @PIB_India
1/3 pic.twitter.com/jEITMhGcTl
— Dr. Narayana Gowda / ಡಾ.ನಾರಾಯಣ ಗೌಡ (@narayanagowdakc) April 27, 2022
Advertisement
Advertisement
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಪ್ರಚಾರಕ್ಕೆ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಕೈಜೋಡಿಸಿದೆ. ಸರ್ಕಾರಿ ವೈಮಾನಿಕ ಶಾಲೆಯ ಎರಡು ವಿಮಾನಗಳ ಮೂಲಕ ಪ್ರಚಾರ ಆರಂಭಿಸಿದೆ. ಈ ಎರಡು ವಿಮಾನ ಪ್ರತಿದಿನ ಸಿಟಿರೌಂಡ್ಸ್ ಮಾಡಲಿವೆ. ಜೈನ್ ವಿವಿ ಸೇರಿದಂತೆ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಪುಷ್ಪಾನಮನ ಸಲ್ಲಿಸಲಾಗುತ್ತದೆ. ಜೊತೆಗೆ ಸಮಾರೋಪ ಸಮಾರಂಭದ ದಿನ ವಿಮಾನದ ಮೂಲಕ ಪುಷ್ಪ ನಮನ ಸಲ್ಲಿಸಲು ಕೂಡ ಚಿಂತನೆ ನಡೆಸಲಾಗಿದೆ. ಇದನ್ನೂ ಓದಿ: ಭಾರತದ ಅಭಿವ್ಯಕ್ತಿ ಸ್ವಾತಂತ್ರ್ಯ ವಿಚಾರವಾಗಿ ಟ್ವಿಟ್ಟರ್ ತಲೆಹಾಕಿದ್ರೆ ಕ್ರಮಕೈಗೊಳ್ಳಿ: ಶಶಿ ತರೂರ್