ಮಂಗಳೂರು: ಖೇಲೋ ಇಂಡಿಯಾ (Khelo India) ರಾಷ್ಟ್ರ ಮಟ್ಟದ ಕಬಡ್ಡಿ (Kabaddi) ಪಂದ್ಯಾಟಕ್ಕೆ ಆಯ್ಕೆಯಾದ ಬೆಳ್ಳಾರೆಯ (Bellare) ಕೆಪಿಎಸ್‌ನ ಇಬ್ಬರು ವಿದ್ಯಾರ್ಥಿಗಳು ಮತ್ತು ಕ್ರೀಡಾಧಿಕಾರಿಯನ್ನು ನಾಗರಿಕರು ಮೆರವಣಿಗೆಯ ಮೂಲಕ ಸಂಸ್ಥೆಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ (Karnataka) ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ರಾಜ್ಯದ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ ಇವರು ಖೇಲೋ ಇಂಡಿಯಾ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ ಆಗಿದ್ದಾರೆ. ಇವರ ಜೊತೆ ಖೇಲೋ ಇಂಡಿಯಾ ಕ್ರೀಡಾಧಿಕಾರಿಯಾಗಿ ಬೆಳ್ಳಾರೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಆಯ್ಕೆಗೊಂಡಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ – ಯುಪಿ ಮೂಲದ ಹೊಸ ಆಟಗಾರನಿಗೆ ಚಾನ್ಸ್
Advertisement
Advertisement
ಸುಳ್ಯ ತಾಲೂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೆಪಿಎಸ್ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಖೇಲೋ ಇಂಡಿಯಾಗೆ ಆಯ್ಕೆಯಾಗಿ ಬೆಳ್ಳಾರೆಗೆ ಕೀರ್ತಿ ತಂದಿದ್ದಾರೆ. ಈ ವಿಶೇಷ ಸಾಧನೆಗೆ ಊರಿನ ನಾಗರಿಕರು ತೆಲಂಗಾಣದಿಂದ ಬೆಂಗಳೂರು ಮೂಲಕ ಸುಬ್ರಹ್ಮಣ್ಯ ಮಾರ್ಗವಾಗಿ ಆಗಮಿಸಿದ ಇಬ್ಬರು ಆಟಗಾರರನ್ನು ಮತ್ತು ಕ್ರೀಡಾಧಿಕಾರಿ ಪುಷ್ಪಾವತಿ ಇವರನ್ನು ಬರಮಾಡಿಕೊಂಡು ಸನ್ಮಾನಿಸಿ ಮೆರವಣಿಗೆಯ ಮೂಲಕ ಸಂಸ್ಥೆಗೆ ಬರಮಾಡಿದ್ದಾರೆ.