ನವದೆಹಲಿ: ಮಹಾ ಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತದಲ್ಲಿ (Maha Kumbh stampede) 1,000 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾನು ಹೇಳಿದ್ದೇನೆ. ಒಂದು ವೇಳೆ ನಾನು ಹೇಳಿದ್ದು ತಪ್ಪು ಎನ್ನುವುದಾದರೆ, ಸಾವಿನ ಸಂಖ್ಯೆಯ ನಿಖರವಾದ ವರದಿಯನ್ನು ಬಿಡುಗಡೆ ಮಾಡಲಿ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Advertisement
ರಾಜ್ಯಸಭೆಯಲ್ಲಿಂದು (Rajya sabha) ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಜನವರಿ 29ರಂದು ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಮಡಿದ ʻಸಾವಿರಾರುʼ ಜನರಿಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ತಿಳಿಸಿದ್ರು. ಈ ವೇಳೆ ಸಭಾಪತಿ ಜಗದೀಪ್ ಧನಕರ್ (Jagdeep Dhankhar) ಅವರು, ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಹೇಳಿದರು. ಇದನ್ನೂ ಓದಿ: ವಿಜಯೇಂದ್ರನ ಕರ್ಮಕಾಂಡದ ಬಗ್ಗೆ ವಿವರಿಸಲು ದೆಹಲಿಗೆ ಹೊರಟಿದ್ದೇವೆ – ಯತ್ನಾಳ್ ಲೇವಡಿ
Advertisement
Advertisement
ಬಳಿಕ ಮಾತು ಮುಂದುವರಿಸಿದ ಖರ್ಗೆ ಅವರು, ಮಹಾಕುಂಭದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ನಾನು ಮಾತನಾಡಲು ಬಯಸುತ್ತೇನೆ. ತುಂಬಾ ಜನರು ಅಲ್ಲಿ ಪ್ರಾಣ ಕಳೆದುಕೊಂಡರು. ನಾನು ಅಲ್ಲಿ 1 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದು ನಾನು ಹೇಳಿದ್ದೇನೆ. ನಾನು ಹೇಳಿದ್ದು ತಪ್ಪು ಎನ್ನುವುದಾದರೆ ಕನಿಷ್ಠ ಅಲ್ಲಿ ಆಗಿರುವ ಸಾವುಗಳ ಸಂಖ್ಯೆಯ ನಿಖರವಾದ ವರದಿ ಕೊಡಿ ಎಂದು ಆಗ್ರಹಿಸಿದರು.
Advertisement
ಖರ್ಗೆ ಹೇಳಿಕೆಗೆ ಆಡಳಿತ ಪಕ್ಷ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಈ ವೇಳೆ ಗದ್ದಲ ಏರ್ಪಟ್ಟಿತು. ಇದನ್ನೂ ಓದಿ: ʻಕೇಂದ್ರದಿಂದ ರಾಜ್ಯಕ್ಕೆ ಮತ್ತೆ ಚೊಂಬು, ಚಿಪ್ಪು.. ಗೋವಿಂದ ಗೋವಿಂದ..ʼ – ಎಂ. ಲಕ್ಷ್ಮಣ್ ಲೇವಡಿ