ಮುಂಬೈ: ರಝಾಕರ್‌ಗಳಿಂದಲೇ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕುಟುಂಬದವರ ಹತ್ಯೆ ನಡೆದಿದೆ. ಆದರೆ ಮುಸ್ಲಿಂ ವೋಟ್ ಬ್ಯಾಂಕ್‌ಗಾಗಿ (Muslim Vote Bank) ಖರ್ಗೆಯವರು ಏನೂ ಮಾತನಾಡುತ್ತಿಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ (Yogi Adityanath ) ಅವರು ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ (Maharashtra Election) ಹಿನ್ನೆಲೆಯಲ್ಲಿ ಇಂದು ಅಚಲಪುರದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನ್ನ ಮೇಲೆ ಅನಗತ್ಯವಾಗಿ ಕೋಪ ಮಾಡಿಕೊಳ್ಳುತ್ತಿದ್ದಾರೆ. ನಾನು ಅವರ ವಯಸ್ಸನ್ನು ಗೌರವಿಸುತ್ತೇನೆ. ಆದರೆ ನನ್ನ ಮೇಲೆ ಕೋಪ ಮಾಡಿಕೊಳ್ಳುವ ಬದಲು ಅವರು ಹೈದರಾಬಾದ್ ನಿಜಾಮಾನ ಮೇಲೆ ಆಕ್ರೋಶ ಹೊರಹಾಕಬೇಕು ಎಂದು ವಾಗ್ದಾಳಿ ನಡೆಸಿದರು.
Advertisement
#WATCH | Maharashtra: Uttar Pradesh CM Yogi Adityanath says, “These days Congress National President Mallikarjun Kharge is unnecessarily getting angry at me, he is furious. Kharge ji, don’t get angry at me, I respect your age. If you want to get angry, get angry at Hyderabad… pic.twitter.com/ERMllgi1Cg
— ANI (@ANI) November 12, 2024
Advertisement
ಖರ್ಗೆಯವರ ಗ್ರಾಮವಾದ ವಾರ್ವಟ್ಟಿ ಒಮ್ಮೆ ಹೈದರಾಬಾದ್‌ನ ನಿಜಾಮರ (Hyderabad Nizam) ಆಳ್ವಿಕೆಗೆ ಒಳಪಟ್ಟಿತ್ತು. ಆ ಸಮಯದಲ್ಲಿ ಬ್ರಿಟಿಷರು ರಾಷ್ಟ್ರವನ್ನು ವಿಭಜಿಸಲು ಮುಸ್ಲಿಂ ಲೀಗ್ (Muslim League) ಅನ್ನು ಪ್ರೋತ್ಸಾಹಿಸಿಸರು ಅದಕ್ಕೆ ಕಾಂಗ್ರೆಸ್ ನಾಯಕತ್ವವು ಶರಣಾಯಿತು. ಸ್ವಾತಂತ್ರ್ಯದ ನಂತರ ನಿಜಾಮರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಯಿತು ನಂತರ ಹಿಂಸಾಚಾರ ಆರಂಭವಾಯಿತು. ನಿಜಾಮರು ನಿಮ್ಮ ಗ್ರಾಮವನ್ನು ಸುಟ್ಟುಹಾಕಿದರು. ಹಿಂದೂಗಳನ್ನು (Hindu) ಬರ್ಬರವಾಗಿ ಕೊಂದರು ಮತ್ತು ನಿಮ್ಮ ತಾಯಿ, ಸಹೋದರಿ, ನಿಮ್ಮ ಕುಟುಂಬ ಸದಸ್ಯರನ್ನು ಸುಟ್ಟುಹಾಕಿದರು. ಈ ವಿಚಾರ ಖರ್ಗೆ ಅವರಿಗೆ ಗೊತ್ತಿದ್ದರೂ ಬಹಿರಂಗವಾಗಿ ಹೇಳಿಕೆ ನೀಡುತ್ತಿಲ್ಲ. ಮುಸ್ಲಿಂ ವೋಟ್‌ಬ್ಯಾಂಕ್‌ಗಾಗಿ ಅವರು ಎಲ್ಲವನ್ನೂ ಮರೆಯುತ್ತಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಅಭಿವೃದ್ಧಿಗೆ ಬ್ರೇಕ್ ಹಾಕುವಲ್ಲಿ ಕಾಂಗ್ರೆಸ್, ಮಿತ್ರಪಕ್ಷಗಳಿಂದ ಪಿಹೆಚ್‌ಡಿ: ಮೋದಿ ವಾಗ್ದಾಳಿ
Advertisement
#WATCH | Mumbai: At the ‘Samvidhan Bachao Sammelan’, Congress National President Mallikarjun Kharge says, “Many leaders live in the guise of sadhus and have now become politicians. Some have even become chief ministers. They wear ‘gerua’ clothes and have no hair on their… pic.twitter.com/wLnFkNNNz7
— ANI (@ANI) November 10, 2024
Advertisement
ಖರ್ಗೆ ಹೇಳಿದ್ದೇನು?
ಮುಂಬೈನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಖರ್ಗೆ, ನೈಜ ಯೋಗಿಗಳಾದವರು ವಿಭಜನೆಗೊಂಡರೆ ನಾಶವಾಗುತ್ತೇವೆ(ಬಟೆಂಗೇ ತೋ ಕಟೆಂಗೇ) ಎನ್ನುವ ಹೇಳಿಕೆಗಳನ್ನು ನೀಡುವುದಿಲ್ಲ. ಈ ರೀತಿಯ ಭಾಷೆಗಳನ್ನು ಬಳಸುವವರು ಉಗ್ರರು. ಬಿಜೆಪಿಯಲ್ಲಿ ಸಾಧುಗಳ ವೇಷ ಧರಿಸುವ ರಾಜಕಾರಣಿಗಳಿದ್ದಾರೆ. ಕಾವಿ ಧರಿಸುವ ಅವರ ತಲೆಯಲ್ಲಿ ಕೂದಲು ಇಲ್ಲ. ಸಮಾಜವನ್ನು ಒಂದುಗೂಡಿಸುವ ಹೇಳಿಕೆ ನೀಡುವ ಬದಲು ಸಮಾಜವನ್ನು ಒಡೆಯುವ ಹೇಳಿಕೆ ನೀಡುತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದರು.