ಖನನ ಈ ವಾರ ಬಿಡುಗಡೆ

Public TV
1 Min Read
Khanana 1

ಸಸ್ಪೆನ್ಸ್ ಥ್ರಿಲ್ಲರ್ ಕಥಾ ವಸ್ತು ಹೊಂದಿರುವ ಚಿತ್ರ `ಖನನ’ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಎಸ್ ನಲಿಗೆ ಪ್ರೊಡಕ್ಷನ್ ಅಡಿಯಲ್ಲಿ ಶ್ರೀನಿವಾಸ ರಾವ್ ಪ್ರಥಮ ನಿರ್ಮಿಸಿ, ರಾಧ ಅವರ ನಿರ್ದೇಶನದ ಮೊದಲ ಚಿತ್ರವಾದ ಖನನಕ್ಕೆ ನಿರ್ದೇಶಕರೇ ಚಿತ್ರಕಥೆ ಹಾಗೂ ಸಂಭಾಷಣೆ ಸಹ ಬರೆದಿದ್ದಾರೆ. ರವಿಕಾಂತ್ ಜಿ ಅವರು ಈ ಚಿತ್ರಕ್ಕೆ ಕಥೆ ರಚಿಸಿದ್ದಾರೆ. ನಿರ್ಮಾಪಕ ಶ್ರೀನಿವಾಸ ರಾವ್ ಅವರು ಬಹಳ ವರ್ಷಗಳಿಂದ ಕನ್ನಡ ಚಿತ್ರಗಳ ಚಿತ್ರೀಕರಣ ಉಪಕರಣಗಳನ್ನು ಒದಗಿಸುತ್ತಾ ಬಂದಿರುವ ಉದ್ಯಮಿ.

Khanana 7

ಪ್ರೀತಿ, ವಿಶ್ವಾಸ, ನಂಬಿಕೆ, ಸ್ವಾತಂತ್ರ್ಯದ ವಿಚಾರಗಳನ್ನು ಹೊಂದಿರುವ ಐದು ವಿಭಿನ್ನ ಶೇಡ್‍ಗಳಲ್ಲಿ ನಟಿಸುವ ಮೂಲಕ ಆರ್ಯವರ್ಧನ ನಾಯಕನಟನಾಗಿ ಪರಿಚಯವಾಗುತ್ತಿದ್ದಾರೆ. ಈ ಹಿಂದೆ ಇವರು `ಮಾರ್ಚ್ 22′ ಸಿನಿಮಾದಲ್ಲಿ ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಏನೋ ಹೇಳ ಹೊರಟಿದ್ದಾರೆ ಖನನ ಹೀರೋ!

ರಮೇಶ್ ತಿರುಪತಿ ಛಾಯಾಗ್ರಹಣ, ನಳಿನ್ ಬಾಡೆ ಸಂಕಲನ, ಕುನ್ನಿ ಗುಡಿಪಾಟಿ ಸಂಗೀತ, ಜೋಯ್ ಮ್ಯಾಥ್ಯೂ, ಬಾಬಿ ಹಾಗೂ ರಾಜೇಶ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ: ಮೂರು ಭಾಷೆಗಳಲ್ಲಿ ಅಬ್ಬರಿಸಲು ಅಣಿಯಾಯ್ತು ಕನ್ನಡದ ಖನನ!

Khanana 6

ಆರ್ಯವರ್ಧನ ಜೊತೆ ನಾಯಕಿ ಆಗಿ ಕರಿಷ್ಮ ಬರುಹಾ, ಈ ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರ ವಹಿಸಿದೆ. ಖಳ ನಟನಾಗಿ ಯುವ ಕಿಶೋರ್ ಪರಿಚಯ ಆಗುತ್ತಿದ್ದಾರೆ. ಅವಿನಾಶ್, ಓಂ ಪ್ರಕಾಷ್ ರಾವ್, ಬ್ಯಾಂಕ್ ಜನಾರ್ಧನ್, ಶ್ರೀನಿವಾಸ ರಾವ್, ವಿನಯಾ ಪ್ರಕಾಶ್, ಮೋಹ ಜುನೇಜ, ಮಹೇಶ್ ಸಿದ್ದು, ಹೊನ್ನವಳ್ಳಿ ಕೃಷ್ಣ, ಕೆಂಪೇಗೌಡ, ಆಶಿಶ್ ಜಾ ಹಾಗೂ ಇತರರು ತಾರಗಣದಲ್ಲಿದ್ದಾರೆ. ಇದನ್ನೂ ಓದಿ: ಖನನ ಮೂಲಕ ನಿರ್ದೇಶಕರಾಗಿ ಬಂದ್ರು ರಾಯಚೂರಿನ ರಾಧಾ!

Share This Article
Leave a Comment

Leave a Reply

Your email address will not be published. Required fields are marked *