ಪಾಟ್ನಾ: ಜನಪ್ರಿಯ ಆನ್‌ಲೈನ್ ಬೋಧಕ, ಪಾಟ್ನಾದ ಖಾನ್ ಸರ್ (Khan Sir) 7,000 ರಾಖಿಗಳನ್ನು (Rakhi) ಕಟ್ಟಿಸಿಕೊಳ್ಳುವ ಮೂಲಕ ವಿಶ್ವ ದಾಖಲೆ (World Record) ಬರೆದಿದ್ದಾರೆ. ರಕ್ಷಾ ಬಂಧನ (Raksha Bandhan) ದಿನದಂದು ಕೋಚಿಂಗ್ ಸೆಂಟರ್‌ನಲ್ಲಿ (Coaching Centre) ಏರ್ಪಡಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು (Students) ಖಾನ್ ಸರ್‌ಗೆ ರಾಖಿ ಕಟ್ಟಲು ಮುಗಿಬಿದ್ದರು.
ಅಪಾರ ಜನಸ್ತೋಮದಿಂದಾಗಿ ಎಲ್ಲರಿಗೂ ರಾಖಿ ಕಟ್ಟಲು ಸಾಧ್ಯವಾಗಲಿಲ್ಲ. ಖಾನ್ ಸರ್ ಅವರು ಪ್ರತಿಯೊಬ್ಬ ವಿದ್ಯಾರ್ಥಿನಿಯನ್ನೂ ಖುದ್ದಾಗಿ ಭೇಟಿಯಾಗಿ ರಾಖಿ ಕಟ್ಟುವಂತೆ ನೋಡಿಕೊಂಡರು. ಈ ಘಟನೆ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆಯಿತು. ಇಂತಹ ಘಟನೆ ಹಿಂದೆಂದೂ ಸಂಭವಿಸಿಲ್ಲ. ಇದು ವಿಶ್ವ ದಾಖಲೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ INDIA ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ: ಎಎಪಿ ಮುಖ್ಯ ವಕ್ತಾರೆ
Advertisement
Advertisement
ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಖಾನ್ ಸರ್, ನನಗೆ ಸ್ವಂತ ಸಹೋದರಿಯರು ಇಲ್ಲ. ಆದ್ದರಿಂದ ಈ ಎಲ್ಲಾ ಹುಡುಗಿಯರನ್ನು ತನ್ನ ಸಹೋದರಿಯರಂತೆ ಪರಿಗಣಿಸುತ್ತೇನೆ. ಪ್ರತಿ ವರ್ಷ ನನ್ನ ವಿದ್ಯಾರ್ಥಿಗಳಿಂದ ರಾಖಿಗಳನ್ನು ಕಟ್ಟಲಾಗುತ್ತದೆ. ಅವರಷ್ಟು ರಾಖಿಗಳನ್ನು ಜಗತ್ತಿನಲ್ಲಿ ಯಾರೂ ಯಾರಿಗೂ ಕಟ್ಟುತ್ತಿರಲಿಲ್ಲ ಎಂದು ವಿಶ್ವಾಸದಿಂದ ಹೇಳಿದರು. ಇದನ್ನೂ ಓದಿ: ನಾಳೆಯಿಂದ INDIA ಒಕ್ಕೂಟದ 3ನೇ ಸಭೆ – ‘ಬಿಜೆಪಿ ಚಲೇ ಜಾವೋ’ ಅಭಿಯಾನಕ್ಕೆ ಚಾಲನೆ ನಿರೀಕ್ಷೆ
Advertisement
ವಿದ್ಯಾರ್ಥಿನಿಯರು ಕೋಚಿಂಗ್ ಪಡೆಯಲು ಬೇರೆ ಬೇರೆ ಸ್ಥಳಗಳಿಂದ ಬರುತ್ತಾರೆ. ತಮ್ಮ ಕುಟುಂಬವನ್ನು ಬಿಟ್ಟು ತಮ್ಮ ಕೋಚಿಂಗ್ ಸೆಂಟರ್‌ನಲ್ಲಿ ಓದುತ್ತಾರೆ. ಅವರು ತಮ್ಮ ಕುಟುಂಬಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾನು ಅವರಿಗೆ ಸಹೋದರನ ಸ್ಥಾನ ನೀಡುತ್ತೇನೆ. ಶಿಕ್ಷಣದ ಮೂಲಕ ತನ್ನ ಸಹೋದರಿಯರು ಯಶಸ್ಸನ್ನು ಸಾಧಿಸಲು ಮತ್ತು ಉತ್ತಮ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುವುದು ನನ್ನ ಗುರಿಯಾಗಿದೆ ಎಂದರು. ಇದನ್ನೂ ಓದಿ: Chandrayaan-3: ‘ಸ್ಮೈಲ್ ಪ್ಲೀಸ್’ – ವಿಕ್ರಂನ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್
Advertisement
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳು ಖಾನ್ ಸರ್ ಅವರನ್ನು ವಿಶ್ವದ ಅತ್ಯುತ್ತಮ ಶಿಕ್ಷಕ, ಗುರು ಮತ್ತು ಸಹೋದರ ಎಂದು ಶ್ಲಾಘಿಸಿದರು. ಅವರಿಗಿಂತ ಉತ್ತಮ ಸಹೋದರ ಇಲ್ಲ ಎಂದು ಪ್ರತಿಪಾದಿಸಿದರು. ಕೆಲವು ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಖಾನ್ ಸರ್ ಅವರ ಕೈಗೆ ರಾಖಿ ಕಟ್ಟುವುದನ್ನು ಮುಂದುವರಿಸುತ್ತೇವೆ ಎಂದು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಅದಾನಿ ಷೇರು ಶಾರ್ಟ್ ಸೆಲ್ಲಿಂಗ್, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?
Web Stories