– ವಿವಾಹಿತರು, ಅವಿವಾಹಿತ ಮಹಿಳೆಯರೊಂದಿಗೆ ಸಂಬಂಧ
ಚಂಡೀಗಢ: `ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ, ಖಲಿಸ್ತಾನ್ (Khalistan) ಬೆಂಬಲಿಗ ಅಮೃತ್‌ಪಾಲ್ ಸಿಂಗ್ (Amritpal Singh) ಬಂಧಿಸುವ ಕಾರ್ಯಾಚರಣೆ 6ನೇ ದಿನಕ್ಕೆ ಕಾಲಿಟ್ಟಿದೆ. ಶೋಧ ನಡೆಸುತ್ತಿರುವ ಪಂಜಾಬ್ ಪೊಲೀಸರಿಗೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಲಭ್ಯವಾಗಿದೆ.
ಅಮೃತ್‌ಪಾಲ್ ಸಿಂಗ್, ಹಲವಾರು ಮಹಿಳೆಯರೊಂದಿಗೆ ಚಾಟ್ ಮಾಡುತ್ತಿದ್ದ. ಇದು ವಿವಾಹಿತ ಹಾಗೂ ಅವಿವಾಹಿತ ಮಹಿಳೆಯರೊಂದಿಗೆ ವಿವಾಹೇತರ ಸಂಬಂಧ (Casual Relationships) ಹೊಂದಿದ್ದ ಎಂಬುದನ್ನು ಸೂಚಿಸಿವೆ. ಪಾಲ್ ಮಹಿಳೆಯರ ಅಶ್ಲೀಲ ವೀಡಿಯೋಗಳನ್ನಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂದು ಈಗ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮರ್ಸಿಡಿಸ್ ಕಾರಿನಲ್ಲಿ ವೇಷ ಬದಲಿಸಿಕೊಂಡು ಮರೆಯಾದ ಅಮೃತಪಾಲ್ – ಕೊನೇ ಬಾರಿ ಕಾಣಿಸಿದ್ದು ಎಲ್ಲಿ?
- Advertisement 2-
- Advertisement 3-
ಪಂಜಾಬ್ ಪೊಲೀಸರಿಗೆ (Punjab Police) ಲಭ್ಯವಾದ ಅಮೃತ್‌ಪಾಲ್‌ನ ಚಾಟ್‌ಗಳು ಹಾಗೂ 12 ವಾಯ್ಸ್ ನೊಟ್‌ಗಳನ್ನು ಪರಿಶೀಲಿಸಿದಾಗ ಅನೇಕ ಮಾಹಿತಿಗಳು ಬೆಳಕಿಗೆ ಬಂದಿದೆ. ಲಭ್ಯವಾದ ವಾಯ್ಸ್ನೋಟ್ ಒಂದರಲ್ಲಿ ತಾನು ಮಹಿಳೆಯರೊಂದಿಗೆ ತಾತ್ಕಾಲಿಕ ಸಂಬಂಧ ಬಯಸುವುದಾಗಿ ಹೇಳಿದ್ದಾನೆ. ಹೆಂಗಸರು ಬೇಗ ಸೀರಿಯಸ್ ಆಗುತ್ತಾರೆ, ತನ್ನ ಮದುವೆಯ ಮೇಲೆ ಪರಿಣಾಮ ಬೀರದಿರುವವರೆಗೂ ಸಂಬಂಧ ಹೊಂದಲು ಸಿದ್ಧವಿರುತ್ತೇನೆ ಎಂದು ಅದರಲ್ಲಿ ಹೇಳಿರುವ ಮಾಹಿತಿ ಇದೆ.
- Advertisement 4-
ಅಲ್ಲದೇ ಮಹಿಳೆಯೊಬ್ಬರಿಗೆ ಚಾಟ್ ಮಾಡುವಾಗ, “ನಮ್ಮ ಹನಿಮೂನ್ ದುಬೈನಲ್ಲಿ ಇರುತ್ತೆ” ಎಂದು ಮೆಸೇಜ್ ಮಾಡಿದ್ದಾನೆ, ಅದಕ್ಕೆ ಮಹಿಳೆ ನಗುವಿನ ಇಮೋಜಿಯನ್ನೂ ಕಳಿಸಿದ್ದಾಳೆ. ಪಂಜಾಬ್ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ – ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ
ಅಮೃತಪಾಲ್ ಸಿಂಗ್ ಬಂಧನಕ್ಕೆ ಪಂಜಾಬ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ ನಂತರ ಶನಿವಾರ ಬೆಳಿಗ್ಗೆ 11:27ರ ಸುಮಾರಿಗೆ ಜಲಂಧರ್‌ನ ಟೋಲ್ ಬೂತ್ ದಾಟಿ ಹೋಗುವುದು ಪತ್ತೆಯಾಗಿತ್ತು. ಮಾರುತಿ ಬ್ರೆಜಾ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ. ಅದಕ್ಕೂ ಮುನ್ನ ಆತ ಮರ್ಸಿಡಿಸ್ ಎಸ್‌ಯುವಿಯಲ್ಲಿ ಇರುವುದು ಕಂಡುಬಂದಿತ್ತು. ಆ ಕಾರನ್ನು ಆತ ಶಾಹಕೋಟ್‌ನಲ್ಲಿ ಬಿಟ್ಟು ತೆರಳಿದ್ದ. ಅಲ್ಲಿಂದ ಕೆಲವು ಗಂಟೆಗಳ ನಂತರ ತನ್ನ ಸಹವರ್ತಿಯೊಬ್ಬನ ಮಾರುತಿ ಬ್ರೆಜಾ ಕಾರಿನಲ್ಲಿ ಪ್ರಯಾಣಿಸಿದ್ದ. ಕಾರಿನಲ್ಲಿ ಆತ ಬಟ್ಟೆಗಳನ್ನು ಬದಲಿಸಿರುವುದು ಖಚಿತವಾಗಿತ್ತು. ಆತ ಮಾಮೂಲಿಯಾಗಿ ಧರಿಸುವ ಉಡುಪಿನ ಬದಲು ಅಂಗಿ ತೊಟ್ಟಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.