ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಾಂಗ್ಲಾ ಉಗ್ರರಾಯ್ತು. ಇದೀಗ ಖಲಿಸ್ತಾನ್ ಉಗ್ರರ ಸರದಿ ಶುರುವಾಗಿದೆ. ಇದನ್ನೆಲ್ಲ ನೋಡುತ್ತಿದ್ದರೆ ಉಗ್ರರ, ಜಿಹಾದಿಗಳ, ಪ್ರತ್ಯೇಕತಾವಾದಿಗಳ ಅಡ್ಡವಾವಾಗುತ್ತಿದೆಯಾ ಬೆಂಗಳೂರು ಎಂಬ ಆತಂಕ ಕಾಡಲಾರಂಭಿಸಿದೆ.
ಬೆಂಗಳೂರು ಸಿಸಿಬಿ ಪೊಲೀಸರಿಂದ ಬಹುದೊಡ್ಡ ಕಾರ್ಯಾಚರಣೆ ನಡೆದಿದ್ದು, ಖಲಿಸ್ತಾನದ ಪ್ರತ್ಯೇಕತಾವಾದಿ ಜರ್ನಲ್ ಸಿಂಗ್ ಸಿದ್ದು ಬೆಂಗಳೂರಲ್ಲಿ ಅರೆಸ್ಟ್ ಆಗಿದ್ದಾನೆ. ಕಳೆದ 6 ತಿಂಗಳಿಂದ ಬೆಂಗಳೂರಿನಲ್ಲಿ ಇದ್ದ ಜರ್ನಲ್ ಸಿಂಗ್ ಸಿದ್ದು, ಸಂಪಿಗೆಹಳ್ಳಿ ರಾಧಾಕೃಷ್ಣ ಪಿಜಿಯಲ್ಲಿ ವಾಸವಿದ್ದನು. ಮೂಲತಃ ತೆಲಂಗಾಣದ ಹೈದರಾಬಾದ್‍ನವನಾದ ಜರ್ನಲ್ ಸಿಂಗ್ ಸಿದ್ದು, ಎಂಜಿನಿಯರಿಂಗ್ ಮಾಡಿಕೊಂಡು ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ.
ನಗರದ ಬಾಗಮನೆ ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿದ್ದ ಈತ ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದ. ಸಿಖ್ ಧರ್ಮದವರಿಗಾಗಿಯೇ ಪ್ರತ್ಯೇಕ ದೇಶಬೇಕು ಎಂದು ಹೋರಾಟ ಮಾಡುತ್ತಿದ್ದ. ಪಂಜಾಬ್ ಅನ್ನು ಪ್ರತ್ಯೇಕ ಖಲಿಸ್ತಾನ ಮಾಡಬೇಕೆಂದು ನಿರಂತರ ಹೋರಾಟದಲ್ಲಿ ನಿರತನಾಗಿದ್ದ. ತೆಲಂಗಾಣದವನಾಗಿದ್ದರು ಪಂಜಾಬ್‍ನಲ್ಲಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಈತ, ಸಿಖ್ ಧರ್ಮದ ವಿರುದ್ಧ ಕೆಲಸ ಮಾಡುವವರ ವಿರುದ್ಧ ಸಮರ ನಡೆಸುತ್ತಿದ್ದ.
ಇದೇ ರೀತಿಯ ಗಲಾಟೆಯೊಂದರಲ್ಲಿ ಪಂಜಾಬ್‍ನ ಮೊಹಾಲಿಯಲ್ಲಿ ಈತನ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು. 2019ರ ಫೆಬ್ರವರಿಯಲ್ಲಿ ಮೊಹಾಲಿ ಐಎಸ್‍ಡಿ ಪ್ರಕರಣ ದಾಖಲಿಸಿ, ಪಂಜಾಬ್ ರಾಜ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಬೆಂಗಳೂರಿಗೆ ಎಸ್ಕೇಪ್ ಆಗಿದ್ದ ಇಂಗ್ ಮೊಹಾಲಿಯಿಂದ ಬೆಂಗಳೂರಿಗೆ ಬಂದಿದ್ದ. ಪಾಕಿಸ್ತಾನದ ಐಎಸ್‍ಐ ಜೊತೆ ನಿರಂತರ ಸಂಪರ್ಕದಲ್ಲಿದ್ದ ಜರ್ನಲ್ ಸಿಂಗ್ ಸಿದ್ದು. ಮೊಹಾಲಿಯ ಐಎಸ್‍ಐ ಏಜೆಂಟ್ ನಿಹಾಲ್ ಸಿಂಗ್ ಸ್ನೇಹಿತನಾಗಿದ್ದ.
ಪ್ರತ್ಯೇಕ ಖಲಿಸ್ತಾನದ ಹೋರಾಟಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದ. ಆದರೆ ಸದ್ಯ ಸಿಸಿಬಿಯ ಒಸಿಡಬ್ಲ್ಯೂ ವಿಂಗ್ ನಿಂದ ಜರ್ನಲ್ ಸಿಂಗ್ ಅರೆಸ್ಟ್ ಆಗಿದ್ದಾನೆ. ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ನಡೆದಿದ್ದ ಆಪರೇಷನ್ ನಲ್ಲಿ ಆರೋಪಿಯನ್ನು ಬಂಧಿಸಿ ಪಂಜಾಬ್ ಪೊಲೀಸರಿಗೆ ಒಪ್ಪಿಸಿದ್ದಾರೆ.