ನವದೆಹಲಿ: ಪ್ರಧಾನಿ ಮೋದಿ ಅವರ ಮಾತುಗಳಿಗೂ ಮತ್ತು ಅವರು ಮಾಡುವ ಕೆಲಸಗಳಿಗೂ ಒಂದಕ್ಕೊಂದು ಹೊಂದಾಣಿಕೆಯೇ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಖಾದಿ ಮಹತ್ವವನ್ನು ನೆನಪಿಸಿಕೊಳ್ಳುವ ಸಲುವಾಗಿ ಸಾಬರಮತಿ ನದಿ ತೀರದಲ್ಲಿಂದು ಆಯೋಜಿಸಿದ್ದ `ಖಾದಿ ಉತ್ಸವ’ದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಕನಸಿಗೆ ಖಾದಿ ಪ್ರಮುಖ ಶಕ್ತಿಯಾಗಿದೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಇದೀಗ ಈ ಹೇಳಿಕೆಗೆ ಟ್ವೀಟ್ ಮಾಡುವ ಮೂಲಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
‘Khadi for Nation’ but Chinese Polyester for National flag! ????????
As always, the words and actions of the PM never match.
— Rahul Gandhi (@RahulGandhi) August 28, 2022
‘ಖಾದಿ ಫಾರ್ ನೇಷನ್’ ಆದರೆ ಚೈನೀಸ್ ಪಾಲಿಸ್ಟರ್ ರಾಷ್ಟ್ರಧ್ವಜಕ್ಕೆ. ಪ್ರಧಾನಿಯವರು ಆಡುವ ಮಾತಿಗೂ ಮತ್ತು ಮಾಡುವ ಕೆಲಸಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಿಸಿದವರಿಗೆ 5 ಸಾವಿರ ರೂ. ದಂಡ – ಶ್ರೀನಗರ ಕಾಲೇಜು ಆದೇಶ
ರಾಷ್ಟ್ರಧ್ವಜವನ್ನು ಕೈಯಿಂದ ನೇಯ್ದು ಅಥವಾ ಯಂತ್ರದಿಂದ ತಯಾರಿಸಲಾಗುತ್ತದೆ. ಹತ್ತಿ / ಪಾಲಿಸ್ಟರ್ / ಉಣ್ಣೆ / ರೇಷ್ಮೆ ಖಾದಿ ಬಂಟಿಂಗ್‍ನಿಂದ ಮಾಡಲು ಧ್ವಜ ಸಂಹಿತೆಗೆ ತಿದ್ದುಪಡಿ ತಂದಿರುವುದಕ್ಕೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಬಲವಾಗಿ ಟೀಕಿಸಿದೆ. ಮೊದಲು, ಯಂತ್ರದಿಂದ ತಯಾರಿಸಿದ ಮತ್ತು ಪಾಲಿಯೆಸ್ಟರ್ ಧ್ವಜಗಳನ್ನು ಬಳಸಲು ಅನುಮತಿ ನೀಡಲಾಗಿರಲಿಲ್ಲ. ಇದನ್ನೂ ಓದಿ: ಇಂತಹ ಸುರಂಗಗಳನ್ನು ನಿರ್ಮಿಸಬಹುದಾ?: ಗಡ್ಕರಿಗೆ ಆನಂದ್ ಮಹೀಂದ್ರಾ ಮನವಿ