ಬೆಂಗಳೂರಿನ ನಂದಿ ಲಿಂಕ್ಸ್ ಮೈದಾನದಲ್ಲಿ ಇಂದು ನಟ ಡಾಲಿ ಧನಂಜಯ್ (Dhananjay) ಫ್ಯಾನ್ಸ್ ಜೊತೆ ಹುಟ್ಟು ಹಬ್ಬವನ್ನು (birthday) ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಿಗಾಗಿಯೇ ನಿನ್ನೆ ಮಧ್ಯರಾತ್ರಿಯಿಂದಲೇ ಸಮಯವನ್ನು ಮೀಸಲಿಟ್ಟಿದ್ದಾರೆ. ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಆಚರಿಸಲು ಅಭಿಮಾನಿಗಳು ‘ಡಾಲಿ ಉತ್ಸವ’ ಹೆಸರಿನಲ್ಲಿ ಕಾರ್ಯಕ್ರಮವನ್ನೇ ಆಯೋಜನೆ ಮಾಡಿದ್ದಾರೆ.
Advertisement
ಎರಡು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದು, ಬಂದಿದ್ದ ಅಭಿಮಾನಿಗಳಿಗಾಗಿಯೇ ಉತ್ತರ ಕರ್ನಾಟಕ (North Karnataka) ಮತ್ತು ಸೌತ್ ಇಂಡಿಯನ್ ಶೈಲಿಯಲ್ಲಿ ಊಟವನ್ನು (lunch) ಆಯೋಜನೆ ಮಾಡಲಾಗಿದೆ. ಅದರಲ್ಲೂ ರಾಯಚೂರು, ಸಿಂಧನೂರಿನ ಅಭಿಮಾನಿಗಳು ಖಡಕ್ ರೊಟ್ಟಿ, ಎಣ್ಣೆ ಬದನೆಕಾಯಿ, ಪುಂಡೆ ಪಲ್ಯೆ, ಬೂಂದಿ, ಶೇಂಗ ಹಿಂಡಿ , ಮೆಣಸಿನಕಾಯಿ ಒಳಗೊಂಡ ಊಟದ ವ್ಯವಸ್ಥೆ ಮಾಡಿದ್ದಾರೆ. ಡಾಲಿ ಅಭಿಮಾನಿಯಾದ ಶಿವರಾಜ್ ಪಾಟೀಲ್ ಗುಂಜಳ್ಳಿ ಉತ್ತರ ಕರ್ನಾಟಕದ ಊಟದ ವ್ಯವಸ್ಥೆ ಮಾಡಿದ್ದು ವಿಶೇಷ. ಇದನ್ನೂ ಓದಿ:ನ್ಯೂಯಾರ್ಕ್‌ನ 41ನೇ ಇಂಡಿಯಾ ಡೇ ಪರೇಡ್‌ನಲ್ಲಿ ಭಾಗಿಯಾದ ಸಮಂತಾ
Advertisement
Advertisement
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಧನಂಜಯ್, ‘ನಾನು ಹುಟ್ಟು ಹಬ್ಬ ಸೆಲೆಬ್ರೇಶನ್ ಮಾಡ್ಕೊಂಡು ತುಂಬಾ ದಿನ ಆಗಿತ್ತು. ಕಾರಣಾಂತರಗಳಿಂದ 3-4 ವರ್ಷಗಳಿಂದ ಮಾಡಿರಲಿಲ್ಲ. ಈ ವರ್ಷ ಅಭಿಮಾನಿಗಳ ಜೊತೆ ಆಚರಣೆ ಮಾಡಿದ್ದು ತುಂಬಾ ಖುಷಿಯಾಗಿದೆ. ಉತ್ತರಕಾಂಡ ಸಿನಿಮಾದ ಗಬ್ರು ಸತ್ಯ, ಅಣ್ಣಾ ಫ್ರಮ್ ಮೆಕ್ಸಿಕೋ 2 ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದೀವಿ’ ಎಂದರು.
Advertisement
ಮುಂದುವರೆದು ಮಾತನಾಡಿದ ಡಾಲಿ, ‘ನಾನು ಬರಬೇಕಾದರೆ ತುಂಬಾ ಜನ ವಿಶ್ ಮಾಡಿದ್ರು. ಜನರು ಕೂಡ ನೀನು ಚೆನ್ನಾಗಿ ಬೆಳೀಬೇಕು ಅಂತ ಹಾರೈಸ್ತಿದಾರೆ. ಅದಕ್ಕಿಂತ ದೊಡ್ಡ ಸಂಪಾದನೆ ಯಾವುದು ಇಲ್ಲ. ಅದನ್ನ ಕಾಪಾಡಿಕೊಳ್ಳೋಕೆ ಕೆಲಸ ಮಾಡ್ತೀನಿ. ಜನರ ಪ್ರೀತಿಗೆ ನಾನ್ಯಾವತ್ತೂ ಬೆಲೆ ಕಟ್ಟೋದಕ್ಕೆ ಆಗಲ್ಲ. ಅಣ್ಣಾ ಫ್ರಮ್ ಮೆಕ್ಸಿಕೋ ಸಿನಿಮಾ ಬಹಳ ಡಿಫರೆಂಟ್ ಆಗಿದೆ. ಅಭಿಮಾನಿಗಳಿಗೆ ಇಷ್ಟವಾಗುವಂತಹ ಪಾತ್ರವನ್ನ ಕೊಡ್ತಾ ಇದೀನಿ. ಅಭಿಮಾನಿಗಳಿಗೆ ಪಾತ್ರಗಳಿಂದ ಒಂದಿಷ್ಟು ವಿಷಯಗಳನ್ನ ಹೇಳ್ತಾ ಇದೀನಿ’ ಎನ್ನುತ್ತಾರೆ
Web Stories