– ನಮಗಿಂತ ಒಳ್ಳೆಯ ಕೆಲಸ ಮಾಡಿ ಮತ ಕೇಳಲಿ
ಬೆಂಗಳೂರು: ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು ಸೂಕ್ತವಲ್ಲ ಎಂದು ಸಚಿವ ಕೆ.ಹೆಚ್ ಮುನಿಯಪ್ಪ (KH Muniyappa) ಅವರು ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ (Mandya) ಹನುಮ ಧ್ವಜ (Keragodu, Hanuman Flag Clash) ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ತಿರುಗೇಟು ನೀಡಿದ್ದಾರೆ. ಈ ವೇಳೆ, ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು ಸೂಕ್ತವಲ್ಲ. ಭಾರತ ದೇಶ ಜಾತ್ಯಾತೀತ ರಾಷ್ಟ್ರವಾಗಿದೆ. ಈ ರಾಷ್ಟ್ರದಲ್ಲಿ ಎಲ್ಲಾ ವರ್ಗದ, ಎಲ್ಲಾ ಧರ್ಮಗಳ ಜನ ಇದ್ದಾರೆ. ವ್ಯವಸ್ಥೆಯಲ್ಲಿ ಸಂವಿಧಾನ ಬದ್ಧವಾಗಿ ನಾವೆಲ್ಲ ಅಣ್ಣ-ತಮ್ಮಂದಿರಂತೆ ಬಾಳಬೇಕು ಎಂದಿದ್ದಾರೆ. ಇದನ್ನೂ ಓದಿ: ಲೋಕಸಭೆಗೆ ಒಳ್ಳೆಯ ಅಭ್ಯರ್ಥಿ ತನ್ನಿ- ವೇದಿಕೆಯಲ್ಲೇ ವಿಜಯೇಂದ್ರ ಕಾಲಿಗೆ ಬಿದ್ದ ಚೌಹಾಣ್
- Advertisement
ನಾವು ಗ್ಯಾರೆಂಟಿಗಳನ್ನು ಕೊಟ್ಟು ಮತ ಕೇಳುತ್ತಿದ್ದೇವೆ. ಅವರು ನಮಗಿಂತ ಒಳ್ಳೆಯ ಕೆಲಸ ಮಾಡಿ ಮತ ಕೇಳಲಿ. ರಾಜಕೀಯ ಪಕ್ಷಗಳು ಸಿದ್ಧಾಂತದ ಮೇಲೆ ರಾಜಕಾರಣ ಮಾಡಬೇಕು. ಎಲ್ಲಾ ಪಕ್ಷಗಳಲ್ಲೂ ಎಲ್ಲಾ ಧರ್ಮದ ಜನರು ಇರುತ್ತಾರೆ. ಅವರಿಗೆ ಇಷ್ಟ ಬಂದ ದೇವರನ್ನು ಪೂಜೆ ಮಾಡುತ್ತಾರೆ. ರಾಮ ಮಂದಿರದ ವಿಚಾರ ಮುಂದಿಟ್ಟು ರಾಜಕಾರಣ ಮಾಡುವುದು ಸೂಕ್ತವಲ್ಲ ಎಂದಿದ್ದಾರೆ.
- Advertisement
ವೈಯಕ್ತಿಕ ಆಚಾರ-ವಿಚಾರಗಳಲ್ಲಿ ಪಾಲಿಟಿಕ್ಸ್ ಸಲ್ಲದು:
ಸಿದ್ದರಾಮಯ್ಯನವರ ಹೆಸರೇ ರಾಮನ ಹೆಸರು, ಅದರಲ್ಲಿ ವಿರೋಧ ಹೇಗೆ ಆಗುತ್ತದೆ. ಹೇಳುವುದಕ್ಕೆ ಒಂದು ರೀತಿ ನೀತಿ ಇರಬೇಕು. ಅವರ ಹೆಸರಿನಲ್ಲೇ ರಾಮ ಇರುವಾಗ ವಿರೋಧ ಹೇಗೆ ಮಾಡುತ್ತಾರೆ? ಯಾವ ಧರ್ಮಕ್ಕೂ ವಿರೋಧ ಮಾಡುವುದು ಸಂವಿಧಾನ ಬದ್ಧವಾಗಿ ಇಲ್ಲ. ಆ ರೀತಿ ವಿರೋಧ ಮಾಡುವುದು ಕಾನೂನು ಬಾಹಿರ. ದೇವರ ಮೇಲೆ ಪ್ರೀತಿ ವಿಶ್ವಾಸ ಎಲ್ಲರಿಗೂ ಇದೆ. ಕೆಲವರು ಹಿಂದು, ಕೆಲವರು ಮುಸ್ಲಿಂ ಹಾಗೂ ಕೆಲವರು ಕ್ರೈಸ್ತರು ಅವರವರ ವೈಯಕ್ತಿಕ ಆಚಾರ ವಿಚಾರಗಳಲ್ಲಿ ರಾಜಕೀಯ ಬೆರೆಸಬಾರದು. ನಾವು ಹಿಂದುಗಳಿದ್ದೇವೆ ದೇವರನ್ನು ಪೂಜೆ ಮಾಡುತ್ತೇವೆ ಎಂದಿದ್ದಾರೆ.
ನಾವು ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರನ್ನು ವಿರೋಧ ಮಾಡುವುದಿಲ್ಲ. ಕಾರಣ ಇಷ್ಟೇ ಗಾಂಧೀಜಿಯವರ ನೇತೃತ್ವದಲ್ಲಿ ಎಲ್ಲರೂ ಒಗ್ಗೂಡಿ ಸ್ವಾತಂತ್ರ್ಯ ತಂದಿದ್ದಾರೆ. ಸೈದ್ಧಾಂತಿಕವಾಗಿ ಜಾತ್ಯತೀತ ರಾಷ್ಟ್ರ ನಮ್ಮದು, ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವವರ ಜೊತೆಗೆ ಏನು ಮಾತನಾಡಲು ಆಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೆರಗೋಡಿನಲ್ಲಿ ತಾರಕಕ್ಕೇರಿದ ಹನುಮ ಧ್ವಜ ಸಂಘರ್ಷ- ಫೆ.9ಕ್ಕೆ ಮಂಡ್ಯ ಬಂದ್‍ಗೆ ಕರೆ