ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ಈ ಹಿಂದೆ ರಿಲೀಸ್ ಆಗಿರುವ ಆರ್.ಆರ್.ಆರ್ ಸಿನಿಮಾದ ಜೊತೆ ತುಲನೆ ಮಾಡಲಾಗುತ್ತಿದೆ. ಜತೆಗೆ ಕೆಜಿಎಫ್ 2 ಸಿನಿಮಾಗೂ ಒಂದು ದಿನ ಮುಂಚೆ ಬಿಡುಗಡೆಯಾದ ಬೀಸ್ಟ್ ಸಿನಿಮಾದ ಜೊತೆಯೂ ಬಾಕ್ಸ್ ಆಫೀಸ್ ಲೆಕ್ಕಾಚಾರವನ್ನು ಹೋಲಿಕೆ ಮಾಡಲಾಗುತ್ತಿದೆ. ಇದನ್ನೂ ಓದಿ : ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕ್ರೇಜ್
ಕೆಜಿಎಫ್ 2 ಮೊದಲ ದಿನದ ಗಳಿಕೆಯು ವಿಶ್ವದಾದ್ಯಂತ ಸೇರಿ 145 ಕೋಟಿ ಎಂದು ವಿತರಕ ವಲಯ ಅಂದಾಜಿಸಲಾಗಿದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ, ಕರ್ನಾಟಕಕ್ಕಿಂತಲೂ ಬಾಲಿವುಡ್ ನಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಅಚ್ಚರಿಗೆ ಕೆಜಿಎಫ್ 2 ಕಾರಣವಾಗಿದೆ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್
ದೇಶಾದ್ಯಂತ ಬಹುತೇಕ ಕಡೆ ಮೊದಲ ದಿನ ಎಲ್ಲ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ. ಅದರಲ್ಲೂ ಕರ್ನಾಟಕದಲ್ಲಿ ಐನೂರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಕೆಜಿಎಫ್ 2 ರಿಲೀಸ್ ಆಗಿತ್ತು. ಅಷ್ಟೂ ಚಿತ್ರಮಂದಿರಗಳಲ್ಲೂ ಕಲೆಕ್ಷನ್ ಉತ್ತಮವಾಗಿಯೇ ಬಂದಿದೆ. ಹೀಗಾಗಿ ಕರ್ನಾಟಕದಲ್ಲಿ ಕೆಜಿಎಫ್ 2 ಗಳಿಕೆ ಅಂದಾಜು 40 ಕೋಟಿ ಎನ್ನಲಾಗುತ್ತಿದೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS
ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗಿದೆ. ತಮಿಳು ಹೊರತಾಗಿ ಬಹುತೇಕ ಕಡೆ ಸಿನಿಮಾದ ಕ್ರೇಜ್ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿತ್ತು. ಅದರಲ್ಲೂ ದಕ್ಷಿಣದಲ್ಲಿ ಕನ್ನಡಕ್ಕಿಂತಲೂ ತೆಲುಗಿನಲ್ಲೇ ಅತೀ ಹೆಚ್ಚು ಹಣ ಹರಿದು ಬರಲಿದೆ ಎಂದು ವಿತರಕರ ವಲಯ ಹೇಳಿತ್ತು. ಒಟ್ಟಾರೆ ಭಾರತದಲ್ಲಿ ಹಿಂದಿಯಲ್ಲಿ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿತ್ತು. ಹಿಂದಿಯಲ್ಲಿ ಅಂದುಕೊಂಡಂತೆ ಹೆಚ್ಚಿನ ಮೊತ್ತವೇ ನಿರ್ಮಾಪಕರ ಜೇಬು ಸೇರಿದೆ. ಇದನ್ನೂ ಓದಿ:ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾ
ಕರ್ನಾಟಕದಲ್ಲಿ ಅಂದಾಜು 40 ಕೋಟಿ ಕಲೆಕ್ಷನ್ ಆಗಿದ್ದರೆ, ಕೇರಳದಲ್ಲಿ ಅಂದಾಜು 5 ಕೋಟಿ, ಆಂಧ್ರ ಮತ್ತು ತೆಲಂಗಾಣದಲ್ಲಿ ಅಂದಾಜು 25 ಕೋಟಿ, ತಮಿಳು ನಾಡಿನಲ್ಲಿ ಅಂದಾಜು 8 ಕೋಟಿ, ಹಿಂದಿಯಲ್ಲಿ ಅಂದಾಜು 45 ಕೋಟಿ ಹಾಗೂ ವಿದೇಶಗಳಿಂದ 30 ಕೋಟಿ ಹಣ ಹರಿದು ಬಂದಿದೆ ಎನ್ನುವ ಲೆಕ್ಕಾಚಾರ ಸಿಗುತ್ತಿದೆ. ಈ ಮೂಲಕ ಮೊದಲ ದಿನವೇ ಕೆಜಿಎಫ್ 2 ನೂರು ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿದೆ.
ಇದು ಕೇವಲ ವಿತರಕರಿಂದ ಪಡೆದ ಮಾಹಿತಿಯಾಗಿದ್ದು ಒಟ್ಟಾರೆ ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರವನ್ನು ಈವರೆಗೂ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ನೀಡಿಲ್ಲವಾದರೂ, ನಿರ್ಮಾಣ ಸಂಸ್ಥೆ ಹೇಳಿದ ನಂತರವೇ ಅಧಿಕೃತಗೊಳ್ಳಲಿದೆ.