ಇಂದು ವಿಶ್ವದಾದ್ಯಂತ ‘ಕೆಜಿಎಫ್ ಚಾಪ್ಟರ್ 2’ ರಿಲೀಸ್ ಆಗಿದೆ. ಮಧ್ಯರಾತ್ರಿ 12 ಗಂಟೆಯಿಂದಲೇ ಅಭಿಮಾನಿಗಳು ಸಿನಿಮಾ ವೀಕ್ಷಿಸುತ್ತಿದ್ದಾರೆ. ಆದರೆ, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಥಿಯೇಟರ್ ನಲ್ಲಿ ಅಚಾತುರ್ಯವೊಂದು ನಡೆದು ಹೋಗಿದೆ. ಅದಕ್ಕಾಗಿ ಅಭಿಮಾನಿಗಳು ಕೂಡ ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್
Advertisement
ವೀರೇಶ್ ಚಿತ್ರಮಂದಿರದಲ್ಲಿ ಬೆಳಗಿನ ಜಾವ 5 ಗಂಟೆಗೆ ಎರಡು ಸ್ಕ್ರೀನ್ ಗಳಲ್ಲಿ ಕೆಜಿಎಫ್ 2 ಸಿನಿಮಾ ಪ್ರದರ್ಶನವಾಗಬೇಕಿತ್ತು. ಈ ಚಿತ್ರಮಂದಿರದಲ್ಲಿ ಎರಡು ಸ್ಕ್ರೀನ್ ಗಳದ್ದು, ಅಭಿಮಾನಿಗಳು ಒತ್ತಾಯದ ಮೇರೆಗೆ ಮತ್ತು ಒಂದು ಸ್ಕ್ರೀನ್ ನಲ್ಲಿ ಟಿಕೆಟ್ ಸೋಲ್ಡೌಟ್ ಆಗಿದ್ದರಿಂದ ಮತ್ತೊಂದು ಸ್ಕ್ರೀನ್ ನಲ್ಲೂ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹೀಗಾಗಿ ಎರಡೂ ಸ್ಕ್ರೀನ್ ನಲ್ಲೂ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಬೇಕಿತ್ತು. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ
Advertisement
Advertisement
ಬೆಳಗ್ಗೆ ಅಭಿಮಾನಿಗಳು 5 ಗಂಟೆಗೆ ಎರಡೂ ಸ್ಕ್ರೀನ್ ಮುಂದೆ ಜಮಾಯಿಸಿದ್ದರು. ತಮ್ಮ ತಮ್ಮ ಸೀಟ್ ನಲ್ಲಿ ಕುಳಿತುಕೊಂಡು ಕೆಜಿಎಫ್ ಚಾಪ್ಟರ್ 2 ಕಣ್ತುಂಬಿಕೊಳ್ಳಬೇಕು ಎನ್ನುವಷ್ಟರಲ್ಲಿ ಕೆಜಿಎಫ್ 1 ಸಿನಿಮಾ ತೆರೆಯ ಮೇಲಿತ್ತು. ಬರೋಬ್ಬರಿ ಇಪ್ಪತ್ತು ನಿಮಿಷಗಳ ಕಾಲ ಕೆಜಿಎಫ್ 1 ಪ್ರದರ್ಶನವಾಗಿದೆ. ಮೊದ ಮೊದಲು ಪ್ರೇಕ್ಷಕರು ಹೀಗೆಕೆ ಆಗುತ್ತಿದೆ ಎಂದು ಗೊಂದಲಕ್ಕೊಳಗಾದರು. ಸ್ವಲ್ಪ ಹೊತ್ತು ಮೊದಲ ಭಾಗ ತೋರಿಸಿ, ಆನಂತರ ಎರಡನೇ ಭಾಗಕ್ಕೆ ಶಿಫ್ಟ್ ಆಗುತ್ತಾರೆ ಎಂದುಕೊಂಡವರು ಅದೇ ಸಿನಿಮಾ ಮುಂದುವರೆದಿದ್ದರಿಂದ ಅಭಿಮಾನಿಗಳು ಆಕ್ರೋಶಗೊಂಡರು. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2
Advertisement
ಈ ಸುದ್ದಿ ಥಿಯೇಟರ್ ಮುಖ್ಯಸ್ಥರಿಗೆ ತಿಳಿಯುತ್ತಿದ್ದಂತೆಯೇ ಇದೊಂದು ಅಚಾತುರ್ಯದಿಂದ ಆದ ಕೆಲಸ. ಸರಿ ಮಾಡಿಕೊಳ್ಳುತ್ತೇವೆ ಎಂದು ವಿನಂತಿಸಿಕೊಂಡು, ಚಾಪ್ಟರ್ 2 ರ ಪ್ರದರ್ಶನ ಮಾಡಿದರು. ಆನಂತರ ಅಭಿಮಾನಿಗಳು ಸಮಾಧಾನಗೊಂಡು ಚಿತ್ರ ವೀಕ್ಷಿಸಿದ್ದಾರೆ.