ಬೆಂಗಳೂರು: ಭಾರತದ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ಐದು ಭಾಷೆಯಲ್ಲಿ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೆಜಿಎಫ್ ಚಿತ್ರ ಬಿಡುಗಡೆಯಾದ ನಾಲ್ಕು ದಿನಕ್ಕೆ ಬಾಕ್ಸ್ ಆಫೀಸ್‍ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.
ಕೆಜಿಎಫ್ ಚಿತ್ರ 5 ಭಾಷೆಯಲ್ಲಿ ಒಟ್ಟು 2,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಐದು ಭಾಷೆಯಲ್ಲೂ ಕೆಜಿಎಫ್ ಸಿನಿಮಾಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ದಿನದಿಂದ ದಿನಕ್ಕೆ ಸ್ಕ್ರೀನ್ ಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.
Advertisement
“ಕೆಜಿಎಫ್ ಸಿನಿಮಾ ಬಿಡುಗಡೆಯಾದ ಮೊದಲ ಸೋಮವಾರ ಹಿಂದಿಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕೆಜಿಎಫ್ ಸಿನಿಮಾ ಶುಕ್ರವಾರದಿಂದ ಹೆಚ್ಚು ಸೋಮವಾರ ಕಲೆಕ್ಷನ್ ಆಗಿದೆ. ಸೋಮವಾರ ಬರೋಬ್ಬರಿ 2.90 ಕೋಟಿ ರೂ. ಬಾಕ್ಸ್ ಆಫೀಸ್‍ನಲ್ಲಿ ಕಲೆಕ್ಷನ್ ಆಗಿದೆ. ಮೊದಲ ವಾರಾಂತ್ಯದಲ್ಲಿ ಕೆಜಿಎಫ್ 9.20 ಕೋಟಿ ರೂ. ಕಲೆಕ್ಷನ್ ಆಗಿದೆ. ದೇಶ್ಯಾದ್ಯಂತ ಹಿಂದಿ ವರ್ಷನ್‍ನಲ್ಲಿ 4 ದಿನ ಒಟ್ಟು 12.10 ಕೋಟಿ ರೂ. ಕಲೆಕ್ಷನ್ ಆಗಿದೆ” ಎಂದು ಸಿನಿಮಾ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹಿಂದಿಯಲ್ಲಿ ಕೆಜಿಎಫ್ ಕಮಾಲ್ – ಶುಕ್ರವಾರಕ್ಕಿಂತ ಸೋಮವಾರದ ಕಲೆಕ್ಷನ್ ಜಾಸ್ತಿ
Advertisement
#KGF holds well in Hindi on 1st Monday..
Monday – Dec 24th – ₹ 2.90 Crs.. More than Friday nos..
1st Weekend: ₹ 9.20 cr.
4-Days Total – ₹ 12.10 Crs
All-India Nett..
— Ramesh Bala (@rameshlaus) December 25, 2018
Advertisement
ಸೋಮವಾರ ಕೆಜಿಎಫ್ ಚಿತ್ರ ಕರ್ನಾಟಕದಲ್ಲಿ ಒಟ್ಟು 11.70 ಕೋಟಿ ರೂ. ಕಲೆಕ್ಷನ್ ಆಗಿದೆ. ತೆಲುಗು ರಾಜ್ಯದಲ್ಲಿ 1.90 ಕೋಟಿ ರೂ., ತಮಿಳುನಾಡಿನಲ್ಲಿ 0.90 ಕೋಟಿ ರೂ., ಹಾಗೂ ಕೇರಳದಲ್ಲಿ 0.40 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ತಮಿಳುನಾಡಲ್ಲೂ ಕೆಜಿಎಫ್ ಹವಾ – ತಮಿಳು ಚಿತ್ರಗಳನ್ನು ಹಿಂದಿಕ್ಕಿ ಸ್ಕ್ರೀನ್ ಹೆಚ್ಚಿಸಿಕೊಳ್ಳುತ್ತಿದ್ದಾನೆ ರಾಕಿ ಭಾಯ್
Advertisement
#KGF Monday – Dec 24th BO – Gross:
Karnataka – ₹ 11.70 Crs
Telugu States – ₹ 1.90 Crs
TN – 0.90 Crs
Kerala – 0.40 Crs
— Ramesh Bala (@rameshlaus) December 25, 2018
ಕೆಜಿಎಫ್ ಚಿತ್ರ ಬಿಡುಗಡೆಯಾದ 4 ದಿನದಲ್ಲಿ ವಿಶ್ವಾದ್ಯಂತ 80 ಕೋಟಿ ರೂ. ಬಾಕ್ಸ್ ಆಫೀಸ್‍ನಲ್ಲಿ ಕಲೆಕ್ಷನ್ ಆಗಿದೆ. ವಾರಾಂತ್ಯದ ಕಲೆಕ್ಷನ್‍ಗೆ ಹೋಲಿಸಿದರೆ, ತೆಲುಗು ರಾಜ್ಯ, ತಮಿಳುನಾಡು ಹಾಗೂ ಕೇರಳದಲ್ಲಿ ಸೋಮವಾರದ ಕಲೆಕ್ಷನ್‍ನಲ್ಲಿ ಏರಿಕೆಯಾಗಿದೆ ಎಂದು ರಮೇಶ್ ವಿಶ್ಲೇಷಿಸಿದ್ದಾರೆ.
In 4 days, #KGF has grossed nearly ₹ 80 Crs at the WW Box Office..
Since Monday, there is an upswing in collections in Telugu States, TN and Kerala, compared to the weekend.. pic.twitter.com/iHEuxLdOxp
— Ramesh Bala (@rameshlaus) December 25, 2018
“ಕೆಜಿಎಫ್ ಚಿತ್ರ ಅತ್ಯುತ್ತಮವಾಗಿ ಟ್ರೆಂಡ್ ಆಗುತ್ತಿದೆ. ಸೋಮವಾರದ ಕಲೆಕ್ಷನ್ ಶುಕ್ರವಾರದ ಕಲೆಕ್ಷನ್‍ಕ್ಕಿಂತ ಹೆಚ್ಚಿದೆ. ಕ್ರಿಸ್‍ಮಸ್ ರಜೆ ಇರುವುದರಿಂದ ಇಂದು ಹೆಚ್ಚು ಕಲೆಕ್ಷನ್ ಆಗುವ ಸಾಧ್ಯತೆ ಇದೆ. ಕೆಜಿಎಫ್ ಚಿತ್ರ ಶುಕ್ರವಾರ 2.10 ಕೋಟಿ ರೂ, ಶನಿವಾರ 3 ಕೋಟಿ ರೂ, ಭಾನುವಾರ 4.10 ಕೋಟಿ ರೂ. ಹಾಗೂ ಸೋಮವಾರ 2.90 ಕೋಟಿ ರೂ ಕಲೆಕ್ಷನ್ ಆಗಿದೆ. ಕೆಜಿಎಫ್ ಚಿತ್ರ ಹಿಂದಿ ವರ್ಷನ್‍ನಲ್ಲಿ ಒಟ್ಟು 12.10 ಕೋಟಿ ರೂ. ಕಲೆಕ್ಷನ್ ಆಗಿದೆ” ಎಂದು ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv