ಕೆಜಿಎಫ್ ತಾತ ಕೊನೆ ಸಿನಿಮಾ: ಜುಲೈ 07ಕ್ಕೆ ನ್ಯಾನೋ ನಾರಾಯಣಪ್ಪ ತೆರೆಗೆ

Public TV
2 Min Read
Nano Narayanappa 4

ಕೆಜಿಎಫ್ ತಾತ ಅಂತಾನೇ ಫೇಮಸ್ ಆಗಿದ್ದ ಕೃಷ್ಣೋಜಿ ರಾವ್ (Krishnaji Rao) ಈಗ ನಮ್ಮ ನಡುವೆ ಇಲ್ಲ. ಆದರೆ, ಅವರು ಕೊಟ್ಟು ಹೋದ ಕೊನೆಯ ಸಿನಿಮಾ ಬೆಳ್ಳಿ ಪರದೆ ಮೇಲೆ ಬರಲು ರೆಡಿಯಾಗಿದೆ. ಇದೇ ಜುಲೈ 07ರಂದು ಕೆಜಿಎಫ್ ತಾತ ನಾಯಕ ನಟನಾಗಿ ಅಭಿನಯಿಸಿರುವ, ಕುಮಾರ್ (Kumar) ಅವರ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿಬಂದಿರುವ ‘ನ್ಯಾನೋ ನಾರಾಯಣಪ್ಪ’ (Nano Narayanappa) ಚಿತ್ರ ತೆರೆಗೆ ಬರಲಿದೆ.

Nano Narayanappa 3

ನ್ಯಾನೋ ನಾರಾಯಣಪ್ಪ ಎರಡು ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಮಾಡಿರುವಂತಹ ಸಿನಿಮಾ.  ಯೂತ್ ಕಮರ್ಷಿಯಲ್ ಗಿಂತ ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಕೊಡಬೇಕು ಅಂತ ನಿರ್ದೇಶಕ ಕುಮಾರ್, ಕಾಮಿಡಿ ಪ್ಲಸ್ ಎಮೋಷನ್ ಎಲಿಮೆಂಟ್ಸ್ ನ ಬ್ಲೆಂಡ್ ಮಾಡಿ ಒಂದು ಸಂದೇಶಭರಿತ ಚಿತ್ರ ತೆಗೆದಿದ್ದಾರೆ.

Nano Narayanappa 2

ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತ ಕುಮಾರ್, ಯಂಗ್ ಜನರೇಷನ್ ಗೆ ಮಾದರಿ ಆಗುವಂತೆ ಸಿನಿಮಾ ಮಾಡಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ನ್ಯಾನೋ ನಾರಾಯಣಪ್ಪನ ಸಿದ್ದಪಡಿಸಿದ್ದಾರೆ. ಅಂದಹಾಗೆ ನಿರ್ದೇಶಕ ಕುಮಾರ್ ತಮ್ಮ ಸಿನಿಮಾಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡ್ತಾನೆ ಇರ್ತಾರೆ. ಡೆಬ್ಯೂ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪದಲ್ಲೂ ಡಿವೋರ್ಸ್ ನಿಂದ ಜನ ಹೇಗೆ ತಮ್ಮ ಜೀವನ ಹಾಳು ಮಾಡಿಕೊಳ್ತಾರೆ ಅನ್ನೋದನ್ನ ತೋರಿಸಿದ್ದರು.  ಇದನ್ನೂ ಓದಿ:3ನೇ ಪತ್ನಿಯಿಂದಲೂ ದೂರಾವಾದ್ರಾ ನಟ ಪವನ್ ಕಲ್ಯಾಣ್?

Nano Narayanappa 1

ಕ್ರಿಟಿಕಲ್ ಕೀರ್ತನೆಗಳು ಚಿತ್ರದಲ್ಲಿ ಐಪಿಎಲ್ ಬೆಟ್ಟಿಂಗ್ ನಿಂದಾಗಿ ಜನಸಾಮಾನ್ಯರ ಮೇಲೆ ಆಗುವ ಪರಿಣಾಮದ ಬಗ್ಗೆ ಮಾತನಾಡಿದ್ದರು. ಈಗ ನ್ಯಾನೋ ನಾರಾಯಣಪ್ಪ ಚಿತ್ರದಲ್ಲಿ ಬೇಗ ದುಡ್ಡು ಮಾಡುವ ಸಲುವಾಗಿ ಯಾವ್ ರೀತಿ ಸ್ಕ್ಯಾಮ್ ಮಾಡ್ತಾರೆ ಅನ್ನೋದನ್ನ ತಿಳಿಸಲಿಕ್ಕೆ ಹೊರಟಿದ್ದಾರೆ. ಕಾಮಿಡಿ ಜೊತೆಗೆ ಕಾಡುವ ಕಥೆಯನ್ನಿಟ್ಟು ಕುಟುಂಬ ಸಮೇತ ಥಿಯೇಟರ್ ಗೆ ಬಂದು ನೋಡುವಂತಹ ಸಿನಿಮಾ ಮಾಡಿದ್ದಾರೆ

Nano Narayanappa 5

ಈ‌ ಚಿತ್ರದಲ್ಲಿ ಕೆಜಿಎಫ್ ತಾತ ಜೂನಿಯರ್ ಆರ್ಟಿಸ್ಟ್ ಪಾತ್ರ ಮಾಡಿದ್ದಾರೆ. ಕೌಬಾಯ್ ಗೆಟಪ್‍ನಲ್ಲೂ ಖದರ್ ತೋರಿಸಿದ್ದಾರೆ. ಇಳಿವಯಸ್ಸಲ್ಲೂ ಕುಗ್ಗದ ಉತ್ಸಾಹ, ಹುಮ್ಮಸ್ಸು ಕೃಷ್ಣೋಜಿ ರಾವ್‍ರನ್ನ ಹೀರೋ ಮಾಡಿದೆ. 80ರ ದಶಕದಲ್ಲಿ ಕಂಡ ಕನಸು ಕೊನೆಗೂ ಈಡೇರಿದೆ. ಪ್ರಶಾಂತ್ ಸಿದ್ದಿ (Prashant Siddi), ಕಾಕ್ರೋಚ್ ಸುಧಿ (Cockroach Sudhi), ಗಿರೀಶ್ ಶಿವಣ್ಣ, ಅಕ್ಷತಾ ಕುಕ್ಕಿ, ಅಪೂರ್ವ, ಕಾಮಿಡಿ ಕಿಲಾಡಿಗಳು ಸಂತು, ಅನಂತ್ ಪದ್ಮನಾಭ್, ಕಿಂಗ್ ಮೋಹನ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ.

 

ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಿದ್ದು, ಶಿವಶಂಕರ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಆಕಾಶ್ ಪರ್ವ ಸಂಗೀತ, ದೀಪು, ಸಿದ್ದಾರ್ಥ್ ನಾಯಕ ಸಂಕಲನ ಚಿತ್ರಕ್ಕಿದ್ದು, ಕೇಸರಿ ಫಿಲ್ಮಂ ಕ್ಯಾಪ್ಚರ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಕುಮಾರ್ ಅವ್ರ ಬಂಡವಾಳದಲ್ಲಿ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಇದೇ ಜುಲೈ 07ರಂದು ರಾಜ್ಯಾದ್ಯಂತ ನ್ಯಾನೋ ನಾರಾಯಣಪ್ಪನ ದರ್ಶನವಾಗಲಿದೆ. ಮಿಸ್ ಮಾಡದೇ ಥಿಯೇಟರ್ ಗೆ ಬಂದು‌ ಕೆಜಿಎಫ್ ತಾತನ ಕೊನೆಯ ಸಿನಿಮಾ ನೋಡಿ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article