ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಚಿತ್ರ ಕೆಜಿಎಫ್. ಈಗಾಗಲೇ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಯಶ್ ಅವರಿಗೆ ಅಭಿಮಾನಿ ಸಮೂಹವೊಂದು ಹುಟ್ಟಿಕೊಂಡಿದೆ. ಅವರಿಗಾಗಿಯೇ ಕೆಜಿಎಫ್ ಚಿತ್ರ ತಮಿಳು, ತೆಲುಗಿನಲ್ಲಿಯೂ ಬಿಡುಗಡೆಯಾಗಲಿದೆ. ಇದೀಗ ತಮಿಳು ವರ್ಷನ್ನಿನ ಕೆಜಿಎಫ್ ಟ್ರೈಲರ್ ಬಿಡುಗಡೆ ಮಾಡಿ ಅದೇ ಸಂದರ್ಭದಲ್ಲಿ ರಿಲೀಸಿಂಗ್ ಡೇಟ್ ಅನೌನ್ಸ್ ಮಾಡಲು ತಮಿಳು ಸ್ಟಾರ್ ವಿಶಾಲ್ ರೆಡಿಯಾಗಿದ್ದಾರೆ.
ಇಂದು ಸಂಜೆ 6 ಘಂಟೆಗೆ ವಿಶಾಲ್ ತಮ್ಮ ಟ್ವಿಟರ್ ಖಾತೆಯ ಮೂಲಕ ಕೆಜಿಎಫ್ ಟ್ರೈಲರನ್ನು ತಮಿಳುನಾಡಿನಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮಿಳು ಕೆಜಿಎಫ್ ಬಿಡುಗಡೆಯಾಗೋ ದಿನಾಂಕವನ್ನೂ ಘೋಷಿಸಲಿದ್ದಾರೆ.
ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಕೆಜಿಎಫ್ ಚಿತ್ರದ ಬಗೆಗೊಂದು ಕುತೂಹಲ ನೆಲೆಗೊಂಡಿದೆ. ಸುದೀರ್ಘವಾಗಿ ಎರಡು ವರ್ಷಗಳ ಕಾಲ ನಿರಂತರವಾಗಿ ಚಿತ್ರೀಕರಣ ನಡೆಸಿಕೊಂಡಿರೋ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತೆ ಎಂಬ ನಿರೀಕ್ಷೆಯೂ ಇದೆ. ಈ ಚಿತ್ರ ಜಪಾನ್ ಹಾಗೂ ಚೈನೀಸ್ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆಯಂತೆ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv