ಬೆಂಗಳೂರು: ಒಂದು ಇಲಾಖೆಯಿಂದ ಐಟಿ ರೇಡ್ ಆದ ಮೇಲೆ ಅಧಿಕಾರಿಗಳು ನಮ್ಮನ್ನು ಎಲ್ಲ ರೀತಿಯಲ್ಲೂ ವಿಚಾರಣೆ ಮಾಡುತ್ತಾರೆ. ನಾನು ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಿದ್ದೇನೆ ಎಂದು ನಟ ಯಶ್ ಹೇಳಿದರು.
ಐಟಿ ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಯಶ್, ಒಂದು ಇಲಾಖೆಯಿಂದ ಐಟಿ ರೇಡ್ ಆದ ಮೇಲೆ ಅಧಿಕಾರಿಗಳು ನಮ್ಮನ್ನು ಎಲ್ಲ ರೀತಿಯಲ್ಲೂ ವಿಚಾರಣೆ ಮಾಡುತ್ತಾರೆ. ನಮ್ಮ ಆದಾಯ, ಖರ್ಚು ಏನು? ಇದೇ ರೀತಿಯ ಅನೇಕ ವಿಷಯಗಳ ಬಗ್ಗೆ ಕೇಳುತ್ತಾರೆ. ನಾವು ಅದಕ್ಕೆ ಉತ್ತರ ಕೊಡಬೇಕು. ಇದೊಂದು ಪ್ರಕ್ರಿಯೆ ರೀತಿಯಲ್ಲಿ ನಡೆಯುತ್ತದೆ. ಇಂದು ಮಾತ್ರವಲ್ಲಿ ಇನ್ನೂ ಎರಡು ವರ್ಷ ನಡೆಯುತ್ತದೆ ಎಂದು ಹೇಳಿದರು.
Advertisement
Advertisement
ನಾವು ಸಾಮಾಜದಲ್ಲಿ ಏನೇ ಮಾಡಿದರೂ ಅದು ನಿಮಗೆ ಗೊತ್ತಾಗುತ್ತದೆ. 7-8 ಜನರು ಒಟ್ಟಿಗೆ ಸೇರಿ ಕೆಲಸ ಮಾಡಿದಾಗ, ಅವರ ವ್ಯವಹಾರ ಏನು? ಅವರ ಜೊತೆ ನಿಮ್ಮ ವ್ಯವಹಾರ ಏನು ಇಂತಹ ಕೆಲವು ಪ್ರಶ್ನೆಗಳು ಇರುತ್ತವೆ. ಇದೊಂದು ಪ್ರಕ್ರಿಯೆಯಾಗಿದ್ದು, ಇದನ್ನು ಅರ್ಥಮಾಡಿಕೊಂಡು ಗೌರವದಿಂದ ಮಾಡಿಕೊಂಡು ಹೋಗೋಣ. ಐಟಿ ಇಲಾಖೆಯಲ್ಲಿ ಯಾವ ರೀತಿ ಪ್ರಕ್ರಿಯೆ ಇರುತ್ತದೆ ಎಂದು ಅಧಿಕಾರಿಗಳು ನಮಗೆ ಎಲ್ಲವನ್ನು ಹೇಳಿದ್ದಾರೆ ಎಂದು ಯಶ್ ತಿಳಿಸಿದರು.
Advertisement
ಆಡಿಟರ್ ಮನೆಯ ಮೇಲೆ ಅಲ್ಲ, ಅವರ ಕಚೇರಿಯ ಮೇಲೆ ಐಟಿ ರೇಡ್ ಆಗಿದೆ ಅಷ್ಟೇ. ಅದು ಬಿಟ್ಟು ಬೇರೆ ನನಗೆ ಗೊತ್ತಿಲ್ಲ. ನಾನು ಜನವರಿ 8-9ರಂದು ನನ್ನ ಹುಟ್ಟುಹಬ್ಬವಿದೆ ಅಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ, ಆದ್ದರಿಂದ ದಿನಾಂಕ 10 ರಂದು ಬರುತ್ತೇನೆ ಎಂದು ಕೇಳಿದ್ದೆ, ಅದಕ್ಕೆ ಅವರು 11 ರಂದು ಬನ್ನಿ ಎಂದು ಹೇಳಿದ್ದರು. ಆದ್ದರಿಂದ ಇಂದು ವಿಚಾರಣೆಗೆ ಹಾಜರಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
Advertisement
ಇನ್ನೂ 40 ಕೋಟಿ ಸಾಲದ ಬಗ್ಗೆ ಪ್ರಶ್ನೆ ಕೇಳಿದಾಗ, ನನಗೆ 40 ಕೋಟಿ ಸಾಲ ಯಾಕೆ ಕೊಡುತ್ತಾರೆ. ನನ್ನ ಪ್ರಕಾರ ನನಗೆ 15 ರಿಂದ 16 ಲೋನ್ ಇದೆ. 15-16 ಕೋಟಿ ಲೋನ್ ಕೊಡಬೇಕಾದರೆ, ತೆರಿಗೆ ಎಷ್ಟಿರಬೇಕು? ತೆರಿಗೆ ಕಟ್ಟಿಲ್ಲ ಅಂದರೆ ಯಾರಾದರೂ ಲೋನ್ ಕೊಡುತ್ತಾರಾ ಎನ್ನುವುದು ಒಬ್ಬ ಸಾಮಾನ್ಯ ವ್ಯಕ್ತಿಗೆ ಗೊತ್ತಾದರೆ ಸಾಕು. ಸಾರ್ವಜನಿಕ ವ್ಯಕ್ತಿ ಎಂದಾಕ್ಷಣ ಇಷ್ಟಬಂದಂತೆ ಒಬ್ಬರ ಬಗ್ಗೆ ಮಾತನಾಡಿಕೊಂಡು, ತೇಜೋವಧೆ ಮಾಡಿಕೊಂಡು ಇದ್ದರೆ ಅದನ್ನು ನೋಡಿಕೊಂಡು ನಾವು ಸುಮ್ಮನಿರುವವರಲ್ಲ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದರು.
ಇಂದು ಬೆಳಗ್ಗೆ ನಟ ಯಶ್ ತಮ್ಮ ತಾಯಿ ಪುಷ್ಪಾ ಅವರ ಜೊತೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಗುರುವಾರವಷ್ಟೇ ಆಡಿಟರ್ ಬಸವರಾಜ್ ಮನೆಯಲ್ಲಿ ತಲಾಶ್ ನಡೆದಿತ್ತು. ಇತ್ತ ನಿರ್ಮಾಪಕ ಜಯಣ್ಣ ಕೂಡಾ ಐಟಿ ವಿಚಾರಣೆಗೆ ಹಾಜರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv