ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ (Radhika) ಇಂದು (ಜು.12) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಸಂಭ್ರಮದಲ್ಲಿ ಯಶ್ ದಂಪತಿ(Yash), ಶಾರುಖ್ ಖಾನ್, ಜಾನ್ ಸೆನಾ ಸೇರಿದಂತೆ ಬಾಲಿವುಡ್ ದಂಡೇ ಹಾಜರಿ ಹಾಕಿದೆ.
ಅಂಬಾನಿ ಮನೆ ಮಗನ ಮದುವೆಗೆ ಮುಂಬೈನಲ್ಲಿ ಸ್ವರ್ಗವೇ ಧರೆಗಿಳಿದಿದೆ. ಮುಖೇಶ್ ಅಂಬಾನಿ ಮನೆಯನ್ನು ಕಣ್ಣು ಕುಕ್ಕುವಂತೆ ಸಿಂಗರಿಸಲಾಗಿದೆ. ಭಾರತದ ನಾನಾ ಭಾಗದಲ್ಲಿರುವ ತಾರೆಯರು ಈ ಮದುವೆಯ ಕಳೆಯನ್ನ ಹೆಚ್ಚಿಸಲು ಈಗಾಗಲೇ ಮುಂಬೈಗೆ ಬಂದಿಳಿದಿದ್ದಾರೆ.
ನ್ಯೂಯಾರ್ಕ್‌ನಲ್ಲಿದ್ದ ಶಾರುಖ್ ಖಾನ್ (Sharukh Khan), ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ (Priyanka Chopra), ಯಶ್ ದಂಪತಿ ಕೂಡ ಮುಂಬೈಗೆ ಎಂಟ್ರಿ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ಅರ್ಜುನ್ ಕಪೂರ್, ಜಾನ್ವಿ ಕಪೂರ್, ಸಿದ್ಧಾರ್ಥ್-ಕಿಯಾರಾ ಅಡ್ವಾಣಿ, ಶಾಹಿದ್ ಕಪೂರ್, ವಿಕ್ಕಿ ಕೌಶಲ್, ರಾಮ್ ಚರಣ್, ಸೋನಾಕ್ಷಿ ಸಿನ್ಹಾ ಎಂಟ್ರಿಯಿಂದ ಮದುವೆ ಸಮಾರಂಭದ ಮೆರಗು ಹೆಚ್ಚಾಗಿದೆ.
ಭಾರತೀಯ ಸಂಸ್ಕೃತಿ ಮತ್ತು ಕಲೆಗಾರಿಕೆ, ಸಂಗೀತಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಹಿಂದೆಂದು ಯಾರೂ ಮಾಡಿರದಷ್ಟು ಅದ್ಧೂರಿಯಾಗಿ ಈ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ಸನಾತನ ಶೈಲಿಯಲ್ಲಿ ಈ ಮದುವೆ ಜರುಗಲಿದೆ. ಇದನ್ನೂ ಓದಿ:ನಿರೂಪಣೆ ನೀವಿಲ್ಲದೇ ಅಪೂರ್ಣ ಅಪರ್ಣಾ ಅಕ್ಕ: ಅನುಶ್ರೀ ಭಾವುಕ
ಅಂದಹಾಗೆ, ಅನಂತ್ ಮತ್ತು ರಾಧಿಕಾ ಈ ವಿವಾಹವು 3 ದಿನಗಳ ಕಾಲ ಇರುತ್ತದೆ. ಜು.12ರಂದು ಶುಭವಿವಾಹ, ಜು.13ರಂದು ಶುಭ್ ಆಶೀರ್ವಾದ್, ಜು.14ರಂದು ಆರತಕ್ಷತೆ ನಂತರ ಜು.15ರಂದು ಮತ್ತೊಂದು ಆರತಕ್ಷತೆ ಕಾರ್ಯಕ್ರಮ ಜರುಗಲಿದೆ.