ನ್ಯಾಷನಲ್ ಸ್ಟಾರ್ ಆಗಿ ಮಿರ ಮಿರ ಅಂತಾ ಮಿಂಚ್ತಿರುವ ಯಶ್ ಮನೆಯಲ್ಲಿ ಇದೀಗ ರಾಖಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಕಿಂಗ್ ಸ್ಟಾರ್ ಮಕ್ಕಳು ಕೂಡ ರಾಖಿ ಹಬ್ಬ ಆಚರಿಸಿ, ಸಂಭ್ರಮಿಸಿದ್ದಾರೆ. ಈ ಖುಷಿಯ ಕ್ಷಣಗಳ ಫೋಟೋವನ್ನು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ದೇಶಾದ್ಯಂತ ರಾಖಿ ಹಬ್ಬ ಆಚರಿಸಿ ಸಂಭ್ರಮಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಸಹೋದರಿ ನಂದಿನಿ ಜತೆ ರಾಖಿ ಹಬ್ಬ ಆಚರಿಸಿದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಮಕ್ಕಳು ಕೂಡ ರಕ್ಷೆಯ ಬಂಧನ ರಾಖಿ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಈ ಸಂಭ್ರಮ ಫೋಟೋವನ್ನ ಅಭಿಮಾನಿಗಳೊಂದಿಗೆ ನಟಿ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:`ಬಾಹುಬಲಿ’ ಸೀನ್ ರೀಕ್ರಿಯೇಟ್ ಮಾಡಿದ ಕಾಜಲ್ ಅಗರ್‌ವಾಲ್
Advertisement
View this post on Instagram
Advertisement
ಇಬ್ಬರು ಒಟ್ಟಿಗೆ ನಗುತ್ತಾರೆ, ಜಗಳ ಆಡುತ್ತಾರೆ, ಒಟ್ಟಿಗೆ ಇರುತ್ತಾರೆ ಎಂದು ರಾಖಿ ಹಬ್ಬದ ದಿನ ಚೆಂದದ ಅಡಿಬರಹವನ್ನ ಬರೆದು ರಾಧಿಕಾ ಪಂಡಿತ್ ಶೇರ್ ಮಾಡಿದ್ದಾರೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಮಕ್ಕಳು ಐರಾ ಮತ್ತು ಯಥರ್ವ್ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.