ಮೊದಲ ದಿನ ಶೂಟಿಂಗ್ ಸ್ಪಾಟ್‍ಗೆ ತೆರಳಿದ್ದ ಚಿತ್ರತಂಡಕ್ಕೆ ಕಾದಿತ್ತು ಶಾಕ್!

Public TV
1 Min Read
KGF Set c

ಬೆಂಗಳೂರು: ಮೊದಲ ದಿನ ಶೂಟಿಂಗ್ ಸ್ಪಾಟ್ ಗೆ ತೆರಳಿದ್ದ ಕೆಜಿಎಫ್ ಚಿತ್ರತಂಡಕ್ಕೆ ಶಾಕ್ ಕಾದಿತ್ತು. ಕೆಜಿಎಫ್ ನಗರದ ಹೊರವಲಯದಲ್ಲಿ ಚಿತ್ರೀಕರಣ ನಡೆಸಲು ನಿಗದಿತ ಸ್ಥಳ ತಲುಪಿದ ಚಿತ್ರತಂಡ ಅಲ್ಲಿಯ ಧೂಳು ನೋಡಿ ಒಂದು ಕ್ಷಣ ಗಾಬರಿಯಾಗಿತ್ತು ಎಂದು ಆರ್ಟ್ ಡೈರೆಕ್ಟರ್ ಶಿವು ಕುಮಾರ್ ತಮ್ಮ ಅನುಭವವನ್ನು The Journey – Golden Stories of KGF  ಎಂಬ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

shivu kumar

ಮರುದಿನ ಎಲ್ಲರಿಗೂ ಗ್ಲಾಸ್, ಸುರಕ್ಷಾ ಕವಚಗಳನ್ನು ನೀಡಿ ಕೆಲಸ ಆರಂಭಿಸಲಾಯ್ತು. ಪ್ರತಿ ದಿನ ಹೊಸ ಹೊಸ ಸವಾಲುಗಳನ್ನು ನಮಗೆ ಎದುರಾದವು. ಅಲ್ಲಿಯ ಮಣ್ಣು ಸಡಿಲವಾಗಿದ್ದರಿಂದ ಸೆಟ್ ನಿರ್ಮಾಣ ಕಷ್ಟವಾಗಿತ್ತು. ಕೊನೆಗೆ ಪ್ರಯತ್ನ ಮಾಡಿ ಚಿತ್ರಕ್ಕೆ ಪೂರಕವಾಗುವಂತ ಸೆಟ್ ಹಾಕಲಾಯಿತು. ಸೆಟ್ ನಿರ್ಮಾಣವಾದ ಕೂಡಲೇ ಗಾಳಿ-ಮಳೆ ಶುರುವಾಗಿ ಸಿನಿಮಾದ ಪ್ರಮುಖ ಸೆಟ್ ಬಿದ್ದಿತ್ತು. ತಾತ್ಕಾಲಿಕವಾಗಿ ನಿರ್ಮಿಸಿದ್ದ ಶೆಡ್ ಗಳ ಸೀಟ್ ಗಾಳಿಗೆ ಹಾರಿ ಹೋಗಿತ್ತು. ಕಷ್ಟಪಟ್ಟು ಹಾಕಲಾಗಿದ್ದ ಸೆಟ್ ಬಹುತೇಕ ಹಾಳಾಗಿತ್ತು. ಮಳೆ ನಿಂತ ಮೇಲೆ ಅಲ್ಲಿಯ ಸ್ಥಳ ನೋಡಿ ಎಲ್ಲರಿಗೂ ಸೇರಿದಂತೆ ತುಂಬಾನೇ ಬೇಜಾರಾಯ್ತು. ಆದರೂ ಎಲ್ಲರೂ ಸೇರಿಕೊಂಡು ಮತ್ತೆ ಸೆಟ್ ಹಾಕಲಾಯ್ತು.ಮಳೆ ಬಂದ್ರೆ ಸಾಕು ಯಾವ ಸೆಟ್ ಬೀಳುತ್ತೆ ಎಂಬ ಭಯ ಎಲ್ಲರಲ್ಲೂ ಕಾಡುತ್ತಿತ್ತು ಎಂದು ಶಿವುಕುಮಾರ್ ಹೇಳಿದ್ರು.

kgf mari

ಚಿತ್ರದಲ್ಲಿ ಮಾರಿ ಜಾತ್ರೆ ಎಂಬ ಸೀನ್ ಬರುತ್ತೆ. ಆ ಒಂದು ದೃಶ್ಯಕ್ಕಾಗಿಯೇ ಸುಮಾರು 60 ಅಡಿಯ ಮೂರ್ತಿಯನ್ನು ನಿರ್ಮಾಣ ಮಾಡಲಾಗಿತ್ತು. ದೇವಿಯ ಮುಂದೆ ಸಹ ಒಂದು ಕೊಳವನ್ನು ನಿರ್ಮಾಣ ಮಾಡಿ, ನೈಸರ್ಗಿಕ ಎಂಬಂತೆ ತೋರಿಸಲಾಗಿದೆ. 1980ರಲ್ಲಿಯೇ ಬಳಸಲಾದ ವಸ್ತುಗಳನ್ನ ಚಿತ್ರದಲ್ಲಿ ಬಳಸಲಾಗಿದೆ. ಕೆಲವೊಂದನ್ನು ಕಲರ್ ನಿಂದ ಬದಲಾಯಿಸಿ ಬಳಕೆ ಮಾಡಿದ್ದೇವೆ ಎಂದು ಚಿತ್ರತಂಡ ಹೇಳಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *