Connect with us

Cinema

ತಮಿಳುನಾಡಲ್ಲೂ ಕೆಜಿಎಫ್ ಹವಾ – ತಮಿಳು ಚಿತ್ರಗಳನ್ನು ಹಿಂದಿಕ್ಕಿ ಸ್ಕ್ರೀನ್ ಹೆಚ್ಚಿಸಿಕೊಳ್ಳುತ್ತಿದ್ದಾನೆ ರಾಕಿ ಭಾಯ್

Published

on

ಚೆನ್ನೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ತಮಿಳುನಾಡಿನಾದ್ಯಂತ ಅದ್ಧೂರಿ ಪ್ರದರ್ಶನ ನೀಡುತ್ತಿದ್ದು, ದಿನದಿಂದ ದಿನಕ್ಕೆ ರಾಕಿ ಭಾಯ್ ತನ್ನ ಸ್ಕ್ರೀನ್ ಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿದ್ದಾನೆ.

ಹೌದು, ತಮಿಳುನಾಡಿನಲ್ಲಿ ಪರಭಾಷಾ ಚಿತ್ರಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವುದು ಸಾಮಾನ್ಯ. ಆದರೆ ಕನ್ನಡದ ಕೆಜಿಎಫ್ ತಮಿಳು ಅವತರಣೆಯ ಸಿನಿಮಾ ತಮಿಳು ಚಿತ್ರಗಳನ್ನೇ ಹಿಂದಿಕ್ಕಿ ತನ್ನ ಸ್ಕ್ರೀನ್ ಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಳ ಮಾಡಿಕೊಂಡಿದೆ.

ತಮಿಳುನಾಡಿನಲ್ಲಿ ಚಿತ್ರ ವಿತರಣೆ ಮಾಡುತ್ತಿರುವ ನಟ ವಿಶಾಲ್ ಮಾಲೀಕತ್ವದ ವಿಶಾಲ್ ಫಿಲ್ಮ್ ಫ್ಯಾಕ್ಟರಿ ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಟ್ವೀಟ್‍ನಲ್ಲಿ ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಕೆಜಿಎಫ್ ಸ್ಕ್ರೀನ್ ಗಳ ಸಂಖ್ಯೆ 3 ಪಟ್ಟು ಹೆಚ್ಚಳವಾಗಿದೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ : ಹಿಂದಿಯಲ್ಲಿ ಕೆಜಿಎಫ್ ಕಮಾಲ್ – ಶುಕ್ರವಾರಕ್ಕಿಂತ ಸೋಮವಾರದ ಕಲೆಕ್ಷನ್ ಜಾಸ್ತಿ

ಕೆಜಿಎಫ್ ಚಿತ್ರ ಡಿಸೆಂಬರ್ 21 ರಂದು ತಮಿಳುನಾಡಿನಲ್ಲಿ ಸುಮಾರು 100 ಸ್ಕ್ರೀನ್ ಗಳಲ್ಲಿ ತೆರೆ ಕಂಡಿತ್ತು. ಕೆಜಿಎಫ್ ಜೊತೆ ಜೊತೆಗೆ ನಟ ಧನುಷ್ ಅಭಿನಯದ ಮಾರಿ-2 ಮತ್ತು ಶಾರುಖ್ ಖಾನ್ ರ ಜೀರೋ ಚಿತ್ರಗಳೂ ಕೂಡ ಬಿಡುಗಡೆಯಾಗಿದ್ದವು. ಆದರೆ ಈಗ ಕೆಜಿಎಫ್ ಚಿತ್ರ ತಮಿಳುನಾಡು ಬಾಕ್ಸ್ ಆಫೀಸ್ ನಲ್ಲೂ ಧೂಳೆಬ್ಬಿಸುತ್ತಿದ್ದು, 100 ಸ್ಕ್ರೀನ್ ಗಳಲ್ಲಿದ್ದ ಕೆಜಿಎಫ್ ಚಿತ್ರ ತನ್ನ ವ್ಯಾಪ್ತಿಯನ್ನು ಇದೀಗ 300ಕ್ಕೂ ಅಧಿಕ ಸ್ಕ್ರೀನ್ ಗಳಿಗೆ ವಿಸ್ತರಿಸಿದೆ. ಆ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ತನ್ನ ದರ್ಬಾರ್ ಮುಂದುವರಿಸಿದೆ.

ಪರಭಾಷಾ ಚಿತ್ರಗಳು ತಮಿಳುನಾಡಿನಲ್ಲಿ ಅಸ್ತಿತ್ವಕ್ಕಾಗಿ ಹೋರಾಡುವ ಸಂದರ್ಭದಲ್ಲಿ ತಮಿಳು ಹೊರತು ಪಡಿಸಿ ಅದರಲ್ಲಿಯೂ ಕನ್ನಡದ ಚಿತ್ರವೊಂದು ನಿರೀಕ್ಷೆ ಮೀರಿ ಯಶಸ್ಸು ಸಾಧಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *