Advertisements

ಬೆಂಗ್ಳೂರಲ್ಲಿ 4 ಗಂಟೆಗೆ ಕೆಜಿಎಫ್ ರಿಲೀಸ್- ಚಳಿಯಲ್ಲೂ ರಾತ್ರಿಯಿಡೀ ಕಾದುಕುಳಿತ ಅಭಿಮಾನಿಗಳು

– ಥಿಯೇಟರ್ ಮುಂದೆ ಯಶ್ ಕಟೌಟ್‍ಗಳ ಅಬ್ಬರ

ಬೆಂಗಳೂರು: ಗೊಂದಲದ ನಡುವೆಯೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಈಗಾಗಲೇ ತೆರೆಕಂಡಿದ್ದು, ಇಡೀ ಭಾರತೀಯ ಚಿತ್ರ ರಂಗವೇ ತಿರುಗಿ ನೋಡುವಂತೆ ಸೌಂಡ್ ಮಾಡುತ್ತಿದೆ.

Advertisements

ಸಿಲಿಕಾನ್ ಸಿಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಚಿತ್ರ ಮಂದಿರಗಳಿಗೆ ಅಲಂಕಾರ ಮಾಡಿರುವ ಅಭಿಮಾನಿಗಳು ಅದ್ಧೂರಿಯಾಗಿ ಕೆಜಿಎಫ್‍ನ್ನು ಸ್ವಾಗತಿಸಿದ್ದಾರೆ. ಕೆಜಿಎಫ್ ಚಿತ್ರ ವಿಶ್ವದಾದ್ಯಂತ 2,000 ಸ್ಕ್ರೀನ್ ಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.

Advertisements

ನಗರದ ಊರ್ವಶಿ ಥಿಯೇಟರ್‍ನಲ್ಲಿ 4 ಗಂಟೆಗೆ ಶೋ ಶುರುವಾಯ್ತು. ಆದ್ರೆ ಅಭಿಮಾನಿಗಳು ಮಾತ್ರ ಮಧ್ಯರಾತ್ರಿಯಿಂದಲೇ ಕಾಯುತ್ತಲೇ ಇದ್ರು. ಅಲ್ಲದೇ ಪಟಾಕಿ ಸಿಡಿಸಿ ರಾಕಿಭಾಯ್‍ಗೆ ಅದ್ಧೂರಿ ಸ್ವಾಗತ ಕೋರಿದ್ರು. ಗೌಡನಪಾಳ್ಯದ ಶ್ರೀನಿವಾಸ್ ಥಿಯೇಟರ್‍ನಲ್ಲೂ ರಾತ್ರಿಯಿಂದಲೇ ಅಭಿಮಾನಿಗಳು ಜಮಾಯಿಸಿದ್ರು. ಕುಣಿದು ಕುಪ್ಪಳಿಸಿ, ಕಟೌಟ್ ಮುಂದೆ ತೆಂಗಿನ ಕಾಯಿ ಒಡೆದು ತಮ್ಮ ನೆಚ್ಚಿನ ನಟನ ಚಿತ್ರವನ್ನು ಸ್ವಾಗತಿಸಿದ್ರು.

ನಗರದ ವೀರೇಶ್ ಥಿಯೇಟರ್ ನಲ್ಲಿ ಬೆಳಗ್ಗೆ 6.15 ರಿಂದ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಇದಕ್ಕೂ ಮುನ್ನ ಯಶ್ ಬೃಹತ್ ಕಟೌಟ್ ಮುಂದೆ ಪಟಾಕಿ ಸಿಡಿಸಿ ಗ್ರ್ಯಾಂಡ್ ವೆಲ್‍ಕಮ್ ಕೊಟ್ರು. ಮೈನ್ ಥಿಯೇಟರ್‍ನಲ್ಲಿ ಫಿಲಂ ನೋಡಬೇಕು ಅಂತಾ ಅಭಿಮಾನಿಗಳು ರಾತ್ರಿ ಇಡೀ ಕಾದಿದ್ದರು.

Advertisements

ಮಂಡ್ಯ, ಮೈಸೂರಿನಿಂಂದ ರಾತ್ರಿಯೇ ಬಂದು ಮೆಜೆಸ್ಟಿಕ್ ನ ನರ್ತಕಿ ಮುಂದೆಯೂ ಅಭಿಮಾನಿಗಳು ಚಳಿಯನ್ನೂ ಲೆಕ್ಕಿಸದೇ ಚಿತ್ರ ವೀಕ್ಷಣೆಗೆ ಕಾದು ಕುಳಿತಿದ್ದರು. ಅಲ್ಲದೇ ಸಲಾಂ ರಾಕಿ ಭಾಯ್ ಅಂತಾ ಘೋಷಣೆ ಕೂಗಿದ್ದಾರೆ. ಈ ದಿನದ ಪ್ರತೀ ಪ್ರದರ್ಶನದ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಇಲ್ಲಿ ಯಶ್ ಬೃಹತ್ ಕಟೌಟ್ ರಾರಾಜಿಸುತ್ತಿದೆ.

ನವರಂಗ್ ಚಿತ್ರಮಂದಿರದಲ್ಲಿ 6 ಗಂಟೆಗೆ ಕೆಜಿಎಫ್ ಸಿನಿಮಾ ನೋಡಲು ಥಿಯೇಟರ್ ಎದುರು ಅಭಿಮಾನಿಗಳ ದಂಡು ಆಗಮಿಸಿದೆ. ಯಶ್ ಪೋಸ್ಟರ್ ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಭೂಮಿಕಾ ಚಿತ್ರಮಂದಿರದಲ್ಲಿ 7 ಗಂಟೆಗೆ ಶೋ ಆರಂಭವಾಗಿದ್ದು, ಸದ್ಯಕ್ಕೆ ಅಭಿಮಾನಿಗಳಿಲ್ಲದೇ ಭೂಮಿಕಾ ಚಿತ್ರಮಂದಿರ ಖಾಲಿ ಖಾಲಿಯಾಗಿದೆ. ಭೂಮಿಕಾ ಚಿತ್ರಮಂದಿರದಲ್ಲಿ ಕೆಜಿಎಫ್ 3 ಶೋ ತೆಲುಗು ಹಾಗೂ 3 ಶೋ ಹಿಂದಿ ವರ್ಷನ್ ಪ್ರದರ್ಶನ ಮಾಡಲಾಗಿದೆ.

ಕೆಜಿಎಫ್ ಸಿನಿಮಾವನ್ನು ಥಿಯೇಟರ್‍ಗೇ ಹೋಗಿ ನೋಡುವಂತೆ ರಾಕಿಂಗ್ ಸ್ಟಾರ್ ಯಶ್ ಮನವಿ ಮಾಡಿದ್ದಾರೆ. ಗುರುವಾರ ಇನ್‍ಸ್ಟಾಗ್ರಾಂಗೆ ವಿಡಿಯೋ ಹಾಕಿರುವ ಯಶ್, ನಮ್ಮ ಇಷ್ಟು ದಿನದ ಪರಿಶ್ರಮ ತೆರೆ ಮೇಲೆ ಬರ್ತಿದೆ. ಎಲ್ರೂ ನೋಡಿ ಅಂತ ಹೇಳಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 200 ರಷ್ಟು ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ರಿಲೀಸ್ ಮಾಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Advertisements
Exit mobile version