ಕೆಜಿಎಫ್ (KGF) ಸಿನಿಮಾದಲ್ಲಿ ವಯೋವೃದ್ದ ಅಂಧನ ಪಾತ್ರಕ್ಕೆ ಬಣ್ಣ ಹಚ್ಚಿ ಬೆಂಕಿ ಡೈಲಾಗ್ ಬಿಟ್ಟಿದ್ದ ಕೃಷ್ಣೋಜಿ ರಾವ್ (Krishnaji Rao), ಕೆಜಿಎಫ್ ತಾತ ಅಂತಾನೇ ಫೇಮಸ್ ಆಗಿದ್ದು ನಿಮ್ಮೆಲ್ಲರಿಗೂ ಗೊತ್ತೆಯಿದೆ. ಅಂದ್ಹಾಗೇ, ಈ ತಾತನಿಗೆ ಒಂದು ಕನಸಿತ್ತು. ಬಣ್ಣ ಕಳಚುವುದರೊಳಗೆ ನಾನು ಹೀರೋ ಆಗ್ಬೇಕು, ನಾಯಕನಾಗಿ ನಾನು ಕೂಡ ಬೆಳ್ಳಿತೆರೆ ಮೇಲೆ ಮೆರವಣಿಗೆ ಹೊರಡಬೇಕು ಅಂತ ಆಸೆಪಟ್ಟಿದ್ದರು. ಅವರ ಆಸೆಯನ್ನು ನಿರ್ದೇಶಕ ಕುಮಾರ್ ಈಡೇರಿಸಿದರು. ನ್ಯಾನೋ ನಾರಾಯಣಪ್ಪ (Nano Narayanappa) ಚಿತ್ರಕ್ಕೆ ಕೆಜಿಎಫ್ ತಾತನ್ನು ಹೀರೋ ಮಾಡಿದರು. ಸದ್ಯ ಈ ಸಿನಿಮಾ ರಿಲೀಸ್‍ಗೆ ರೆಡಿಯಿದೆ, ಜುಲೈ 07ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ. ಆದರೆ, ಈ ಚಿತ್ರದ ಹೀರೋ ಕೆಜಿಎಫ್ ತಾತಾ ಅಲಿಯಾಸ್ ಕೃಷ್ಣೋಜಿ ರಾವ್ ಜೀವಂತವಾಗಿ ಉಳಿದಿಲ್ಲ. ಬಿಗ್‍ಸ್ಕ್ರೀನ್ ಮೇಲೆ ದಿಬ್ಬಣ ಹೊರಡುವ ಗಳಿಗೆಗೆ ಸಾಕ್ಷಿಯಾಗಬೇಕು ಎನ್ನುವ ಕೆಜಿಎಫ್ ತಾತನ ಕನಸು ನನಸಾಗಲಿಲ್ಲ.
ಕೆಜಿಎಫ್ ತಾತ ನಿಧನರಾಗಿ ಸುಮಾರು ಆರು ತಿಂಗಳು ಕಳೀತಾ ಬಂತು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಕೃಷ್ಣೋಜಿ ರಾವ್ ಅವರು ಚಿಕಿತ್ಸೆ ಫಲಿಸದೇ ಉಸಿರು ಚೆಲ್ಲುವಂತಾಯ್ತು. ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನಾಯಕನಾಗಿ ಬಣ್ಣ ಹಚ್ಚಿದ ಸಿನಿಮಾನ ಸಿಲ್ವರ್ ಸ್ಕ್ರೀನ್ ಮೇಲೆ ನೋಡುವ ಸುವರ್ಣಾವಕಾಶ ಮಿಸ್ ಆಯ್ತು. ಆದರೆ, ಸಿನಿಮಾನ ಡಬ್ಬಿಂಗ್ ಟೈಮ್‍ನಲ್ಲಿ ನೋಡಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ರಂತೆ. 40 ವರ್ಷಗಳ ಕಾಲ ಚಿತ್ರರಂಗದಲ್ಲಿ ಜೂನಿಯರ್ ಆರ್ಟಿಸ್ಟ್, ಅಸೋಸಿಯೇಟ್, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಕ್ಕೂ ಸಾರ್ಥಕವಾಯ್ತು ಎನ್ನುವ ಹೆಮ್ಮೆಯ ಭಾವ ವ್ಯಕ್ತಪಡಿಸಿದ್ರಂತೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಕಮ್ ನಿರ್ಮಾಪಕ ಕುಮಾರ್ (Kumar), ಕೆಜಿಎಫ್ ತಾತನ ಅನುಪಸ್ಥಿತಿಯಲ್ಲಿ ನಮ್ಮ ಸಿನಿಮಾ ರಿಲೀಸ್ ಆಗ್ತಿರುವುದು ನಮಗೂ ಬೇಸರವಿದೆ ಎಂದರು. ಇದನ್ನೂ ಓದಿ:ಡೆವಿಲ್ ಕಥೆ ಹೇಳಲು ಸಜ್ಜಾದ ತೆಲುಗಿನ ನಟ ಕಲ್ಯಾಣ್ ರಾಮ್
ಸಿನಿಮಾದ ಬಗ್ಗೆ ಮಾತು ಮುಂದುವರೆಸಿದ ನಿರ್ದೇಶಕ ಕುಮಾರ್, ಬರೀ 30 ಲಕ್ಷದಲ್ಲಿ ನ್ಯಾನೋ ನಾರಾಯಣಪ್ಪ ಸಿನಿಮಾ ಮಾಡಿದ್ದೇನೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಹಾಗೂ ಕ್ರಿಟಿಕಲ್ ಕೀರ್ತನೆಗಳು ಕೂಡ ಕಡಿಮೆ ಬಜೆಟ್‍ನಲ್ಲಿ ನಿರ್ಮಾಣಗೊಂಡಿದ್ವು. ಹಾಕಿದ ಬಂಡವಾಳದ ಜೊತೆಗೆ ಲಾಭ ತಂದುಕೊಟ್ಟಿದ್ವು. ಹೀಗಾಗಿ, ನ್ಯಾನೋ ನಾರಾಯಣಪ್ಪನ ಮೇಲೂ ನಂಬಿಕೆಯಿದೆ. ಆಡಿಯೋ ರೈಟ್ಸ್ ಒಳ್ಳೆ ಅಮೌಂಟ್‍ಗೆ ಸೇಲಾಗಿದ್ದು, ಅಮೆಜಾನ್ ಪ್ರೈಮ್‍ಗೆ ಡಿಜಿಟಲ್ ರೈಟ್ಸ್ ಮಾತುಕತೆ ನಡೀತಿದೆ. ವಿಜಯ್ ಸಿನಿಮಾಸ್ ಅವರು ಡಿಸ್ಟ್ರಿಬ್ಯೂಷನ್ ಮಾಡ್ತಿದ್ದಾರೆ ಎಂದು ಹೇಳಿಕೊಂಡರು. ತಮ್ಮ ನಿರ್ದೇಶನದ ಮೂರು ಸಿನಿಮಾಗಳಲ್ಲೂ ನ್ಯಾನೋ ಕಾರು ಬಳಕೆ ಮಾಡಿರುವ ಕುರಿತು ಸೆಂಟಿಮೆಂಟ್ ಬಿಚ್ಚಿಟ್ಟರು.
ಅಂದ್ಹಾಗೆ, ನ್ಯಾನೋ ನಾರಾಯಣಪ್ಪ ಕಾಮಿಡಿ ಡ್ರಾಮಾ ಒಳಗೊಂಡಿರುವ ಚಿತ್ರ. ಇಲ್ಲಿ 70ರ ದಶಕದ ಲವ್‍ಸ್ಟೋರಿಯಿದೆ. ಪ್ರೀತಿಯ ಜೊತೆಗೆ ಜೀವನದ ಪಾಠವೂ ಅಡಕವಾಗಿದೆ. ಒಂದಿಡೀ ಕುಟುಂಬ ಥಿಯೇಟರ್‍ಗೆ ಬಂದು ಕಣ್ಣರಳಿಸಿ ನೋಡುವಂತಹ ಸಿನಿಮಾ ಇದು. ಇಲ್ಲಿ ಕೆಜಿಎಫ್ ತಾತ ಜೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೌಬಾಯ್ ಗೆಟಪ್‍ನಲ್ಲೂ ಖದರ್ ತೋರಿಸಿದ್ದಾರೆ. ಇಳಿವಯಸ್ಸಲ್ಲೂ ಕುಗ್ಗದ ಉತ್ಸಾಹ, ಹುಮ್ಮಸ್ಸು ಕೃಷ್ಣೋಜಿ ರಾವ್‍ರನ್ನ ಹೀರೋ ಮಾಡಿದೆ. 80ರ ದಶಕದಲ್ಲಿ ಕಂಡ ಕನಸು ಕೊನೆಗೂ ಈಡೇರಿದೆ. ಪ್ರಶಾಂತ್ ಸಿದ್ದಿ, ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಅಕ್ಷತಾ ಕುಕ್ಕಿ, ಅಪೂರ್ವ, ಕಾಮಿಡಿ ಕಿಲಾಡಿಗಳು ಸಂತು, ಅನಂತ್ ಪದ್ಮನಾಭ್, ಕಿಂಗ್ ಮೋಹನ್ ಸೇರಿದಂತೆ ಹಲವು ಕಲಾವಿದರ ದಂಡು ಚಿತ್ರದಲ್ಲಿದ್ದು, ನ್ಯಾನೋ ನಾರಾಯಣಪ್ಪನಿಗೆ ಬಲ ಬಂದಂತಾಗಿದೆ.
ನ್ಯಾನೋ ನಾರಾಯಣಪ್ಪ ಟೈಟಲ್ಲೇ ಹೇಳುವಂತೆ ನ್ಯಾನೋ ಕಾರು ಈ ಚಿತ್ರದ ಹೈಲೆಟ್. ಎರಡು ರಿಯಲ್ ಇನ್ಸಿಡೆಂಟ್‍ಗಳನ್ನ ಸಿನಿಮಾರೂಪಕವಾಗಿಸಿರುವುದು ಮತ್ತೊಂದು ಹೈಲೆಟ್. ಹಾಸ್ಯದ ಜೊತೆಗೆ ಭಾವನೆಗಳನ್ನು ಬ್ಲೆಂಡ್ ಮಾಡಿ ಪ್ರೇಕ್ಷಕರನ್ನು ಹಿಡಿದು ಕೂರಿಸುವ ನಿರ್ದೇಶಕ ಕುಮಾರ್, ಈ ಭಾರಿಯೂ ಅಂತಹದ್ದೇ ಪ್ರಯೋಗ ಮಾಡಿದ್ದಾರೆ. ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಿದ್ದು, ಶಿವಶಂಕರ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಆಕಾಶ್ ಪರ್ವ ಸಂಗೀತ, ದೀಪು, ಸಿದ್ದಾರ್ಥ್ ನಾಯಕ ಸಂಕಲನ ಚಿತ್ರಕ್ಕಿದ್ದು, ಕೇಸರಿ ಫಿಲ್ಮಂ ಕ್ಯಾಪ್ಚರ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಕುಮಾರ್ ಅವ್ರ ಬಂಡವಾಳದಲ್ಲಿ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಇದೇ ಜುಲೈ 07ರಂದು ರಾಜ್ಯಾದ್ಯಂತ ನ್ಯಾನೋ ನಾರಾಯಣಪ್ಪನ ದರ್ಶನವಾಗಲಿದೆ. ಮಿಸ್ ಮಾಡದೇ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎನ್ನುತ್ತಿದೆ ಚಿತ್ರತಂಡ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]