– ದೇಶದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯ ಐದನೇ ಸ್ಥಾನದಲ್ಲಿ ಕೆಜಿಎಫ್
ಬೆಂಗಳೂರು: ಈ ವರ್ಷದ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ, ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರ ಐದನೇ ಸ್ಥಾನದಲ್ಲಿದೆ. ಖ್ಯಾತ ಸಿನಿಮಾ ಡೇಟಾಬೇಸ್ ವೆಬ್‍ಸೈಟ್ ಇಂಟರ್ ನೆಟ್ ಮೂವಿ ಡೇಟಾ ಬೇಸ್(ಐಎಂಡಿಬಿ) ಪಟ್ಟಿಯಲ್ಲಿ ತೆಲುಗಿನ ವಿಜಯ ದೇವರಕೊಂಡ ಅಭಿನಯದ ‘ಟ್ಯಾಕ್ಸಿವಾಲಾ’ ಆರನೇ ಸ್ಥಾನದಲ್ಲಿದೆ. ಈ ಪಟ್ಟಿಯ ಮೂಲಕ ಕನ್ನಡ ಸಿನಿಮಾಗಳಿಗೆ ದೇಶದಾದ್ಯಂತ ಮಾರುಕಟ್ಟೆ ಲಭ್ಯವಾಗಿತ್ತಿರೋದು ಖುಷಿಯ ವಿಚಾರವಾಗಿದೆ.
ಐಎಂಡಿಬಿ ಪಟ್ಟಿಯ ಮೊದಲ ಸ್ಥಾನದಲ್ಲಿ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ‘2.0’ ಮೊದಲ ಸ್ಥಾನದಲ್ಲಿದೆ. ನಂತರ ತಮಿಳಿನ ಸರ್ಕಾರ್, ಹಿಂದಿಯ ಜೀರೋ, ಥಗ್ಸ್ ಆಫ್ ಹಿಂದೋಸ್ತಾನ್ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿವೆ. 5ನೇ ಸ್ಥಾನದಲ್ಲಿ ಕೆಜಿಎಫ್ ಇದೆ. ಉಳಿದಂತೆ ತೆಲುಗಿನ ಟ್ಯಾಕ್ಸಿವಾಲಾ, ಹಿಂದಿಯ ಮಿರ್ಜಾಪುರ, ಮೊಹಲ್ಲಾ ಐಸಿ, ಕೇದರನಾಥ್ ಮತ್ತು ಮೈರ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ.
Advertisement
Advertisement
ದೇಶಾದ್ಯಂತ ಸುದ್ದಿ ಮಾಡಿದ ಬೇರೆ ಭಾಷೆಗಳ ಚಿತ್ರಗಳ ಕಾರ್ಯಕ್ರಮಗಳಿಗೆ ಕನ್ನಡದ ಮಾಧ್ಯಮಕ್ಕೆ ಆಗಾಗ ಕರೆ ಬರೋದಿದೆ. ಆದರೆ ಬೇರೆ ಭಾಷೆಗಳ ಮಾಧ್ಯಮ ಮಂದಿಯೇ ಕನ್ನಡ ಚಿತ್ರದ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿಳಿದ್ದಿಲ್ಲ. ಆದರೀಗ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ತೆಲುಗು ಮತ್ತು ತಮಿಳು ಮಾಧ್ಯಮದವರೇ ಬೆಂಗಳೂರಿಗೆ ಬರುವಂತೆ ಮಾಡಿದೆ.
Advertisement
ಇದೇ ತಿಂಗಳ 9ರಂದು ಅದ್ಧೂರಿ ಸಮಾರಂಭವೊಂದರ ಮೂಲಕ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ಅದಕ್ಕೆ ತೆಲುಗು ಮತ್ತು ತಮಿಳು ಮಾಧ್ಯಮಗಳಿಗೂ ಆಹ್ವಾನ ಹೋಗಿದೆ. ಅವರೂ ಕೂಡಾ ಬರಲು ಉತ್ಸುಕರಾಗಿದ್ದಾರೆ. ಇದು ನಿಜಕ್ಕೂ ಕನ್ನಡ ಚಿತ್ರರಂಗದ ಘನತೆಯನ್ನು ದಕ್ಷಿಣ ಭಾರತೀಯ ಚಿತ್ರ ರಂಗಕ್ಕೆ ಪರಿಚಯಿಸುವಂಥಾ ವಿದ್ಯಮಾನ. ಸಿನಿಮಾ ಡಿಸೆಂಬರ್ 21ರಂದು ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv