ಬೆಂಗಳೂರು: ನಮಗೆ ನ್ಯಾಯಾಲಯದಿಂದ ಯಾವುದೇ ನೋಟಿಸ್ ಬಂದಿಲ್ಲ. ಹಾಗಾಗಿ ನಾಳೆ ಸಿನಿಮಾ ರಿಲೀಸ್ ಮಾಡಲಿದ್ದೇವೆ. ಕೆಜಿಎಫ್ ಚಿತ್ರದ ಕಥೆ ಮತ್ತು ತಂಗಂ ಜೀವನಾಧರಿತ ಕಥೆಯೇ ಬೇರೆಯಾಗಿದ್ದು, ನಿಗದಿಯಂತೆ ಎಲ್ಲ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಪಬ್ಲಿಕ್ ಟಿವಿಗೆ ತಿಳಿಸಿದೆ.
ಈಗಾಗಲೇ ಸಿನಿಮಾದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು, ಸಿನಿಮಾ ರಿಲೀಸ್ ಆಗುತ್ತಾ ಅಥವಾ ಇಲ್ಲವಾ ಎಂಬ ಗೊಂದಲ ಉಂಟಾಗಿದೆ. ತಂಗಂ ಜೀವನಾಧರಿತ ಕಥೆಯಲ್ಲ ಎಂಬುವುದು ಚಿತ್ರತಂಡದ ವಾದವಾಗಿದೆ. ಇಂದು ರಾತ್ರಿಯೇ ಚಿತ್ರತಂಡದ ಬಾಗಿಲು ತಟ್ಟುವ ಸಾಧ್ಯತೆಗಳು ಹೆಚ್ಚಾಗಿವೆ. ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಕೆಜಿಎಫ್ ಮಾಡಿದೆ. ಇತ್ತ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಭಿನಯದ ಝೀರೋ ಸಿನಿಮಾಗೆ ಸೆಡ್ಡು ಹೊಡೆದು ಭಾರತದ ನಿರೀಕ್ಷೆ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕೆಜಿಎಫ್ ಇದೆ. ಒಟ್ಟಿನಲ್ಲಿ ನ್ಯಾಯಾಲಯದ ಮಧ್ಯಂತರ ತಡೆ ನೀಡಿದ್ದರಿಂದ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.
Advertisement
Advertisement
ವಿಶ್ವದಾದ್ಯಂತ ಬಿಡುಗಡೆ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿರುವ ನಟ ಯಶ್ ಅಭಿನಯದ ಕೆ.ಜಿ.ಎಫ್ ಸಿನಿಮಾಗೆ ಬಿಡುಗಡೆಗೆ ನಗರದ 10 ನೇ ಸಿಟಿ ಸಿವಿಲ್ ಕೋರ್ಟ್‍ನಿಂದ ಮಧ್ಯಂತರ ತಡೆ ನೀಡಿದೆ.
Advertisement
ಕೋರ್ಟ್ ಮಧ್ಯಂತರ ಆದೇಶದ ಅನ್ವಯ 2019 ಜನವರಿ 7 ನೇ ದಿನಾಂಕದವರೆಗೆ ಚಿತ್ರ ಬಿಡುಗಡೆಗೆ ತಡೆ ನೀಡಲಾಗಿದೆ. ವೆಂಕಟೇಶ್ ಎಂಬವರು ಕೆಜಿಎಫ್ ಸಿನಿಮಾ ವಿರುದ್ಧ ದಾವೆ ಹೂಡಿದ್ದು, ಕೆಜಿಎಫ್ ಸಿನಿಮಾ ರೌಡಿ ತಂಗಂ ಜೀವನಾಧರಿತ ಚಿತ್ರ ಎಂದು ಆರೋಪ ಮಾಡಿದ್ದಾರೆ. ತಾವು ತಂಗಂ ಜೀವನಾಧರಿತ ಸಿನಿಮಾ ಮಾಡಲು ಹಕ್ಕು ಪಡೆದಿದ್ದು, ಅದ್ದರಿಂದ ಸಿನಿಮಾಗೆ ಬಿಡುಗಡೆಗೆ ತಡೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv