– 3 ದಿನದಲ್ಲಿ 60 ಕೋಟಿ ಕಲೆಕ್ಷನ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ದೇಶ-ವಿದೇಶದಲ್ಲಿ ತನ್ನದೇ ಆದ ಹವಾ ಕ್ರಿಯೇಟ್ ಮಾಡಿದ್ದು, ಬಾಲಿವುಡ್‍ನ ನಟ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾಗೆ ಭರ್ಜರಿ ಫೈಟ್ ನೀಡಿದೆ.
‘ಕೆಜಿಎಫ್’ ಸಿನಿಮಾ ಪಂಚಭಾಷೆಯಲ್ಲಿ ಇದೇ ಶುಕ್ರವಾರ ಬಿಡುಗಡೆಗೊಂಡಿತ್ತು. ಅದೇ ದಿನ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾ ಕೂಡ ಬಿಡುಗಡೆಯಾಗಿತ್ತು. ಆದರೆ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ‘ಝೀರೋ’ ಸಿನಿಮಾವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಇದನ್ನೂ ಓದಿ: ಗಲ್ಲಾ ಪೆಟ್ಟಿಗೆಯಲ್ಲೂ ರಾಕಿಯ ಆರ್ಭಟ- ಹಿಂದಿಯಲ್ಲಿ ಫಸ್ಟ್ ಡೇ 2.10 ಕೋಟಿ
Advertisement
Advertisement
‘ಕೆಜಿಎಫ್’ ಸಿನಿಮಾ ಬಿಡುಗಡೆಯಾದ ಮೊದಲ ದಿವವೇ ಸುಮಾರು 30 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಬಳಿಕ ಶನಿವಾರ ಮತ್ತು ಭಾನುವಾರ ವೀಕೆಂಡ್ ಇದ್ದ ಕಾರಣ ಮೂರು ದಿನಗಳಲ್ಲಿ ‘ಕೆಜಿಎಫ್’ ಸಿನಿಮಾ 60 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕ ವಿಜಯ ಕಿರಗಂದೂರು ತಿಳಿಸಿದ್ದಾರೆ. ಇದನ್ನೂ ಓದಿ:’ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್’
Advertisement
ಮೊದಲನೇ ದಿನ 24 ಕೋಟಿ ರೂ. ಗಳಿಸಿದರೆ, ಎರಡನೇ ದಿನ ಮತ್ತು ಮೂರನೇ ದಿನ 20-21 ಕೋಟಿ ರೂ. ಗಳಿಸಿದ್ದು, ಮೂರು ದಿನಗಳಲ್ಲಿ ಸುಮಾರು 60 ಕೋಟಿ ರೂ. ಗಳಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲದೇ ಹಿಂದಿಯಲ್ಲೂ ಕೂಡ ಕಲೆಕ್ಷನ್ ಅಧಿಕವಾಗಿದ್ದು, ಕನ್ನಡ ಸಿನಿಮಾಗೆ ಬೇರೆ ಭಾಷೆಯಲ್ಲೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
Advertisement
ಕನ್ನಡದ ಕೆಜಿಎಫ್ ಸಿನಿಮಾ ಝೀರೋ ಸಿನಿಮಾಗೆ ತೀವ್ರ ಪೈಪೋಟಿ ಕೊಟ್ಟಿದ್ದು, ಇದರಿಂದ ಝೀರೋ ಸಿನಿಮಾದ ಕಲೆಕ್ಷನ್ ಕಡಿಮೆಯಾಗಿದೆ. ಮೊದಲ ದಿನವೇ ಕೆಜಿಎಫ್ 24 ಕೋಟಿ ರೂ. ಗಳಿಸಿತ್ತು. ಭಾರತದಲ್ಲಿ 18 ಕೋಟಿ, ಕನ್ನಡದಲ್ಲಿಯೇ 12.5 ಕೋಟಿ ರೂ ಗಳಿಸಿತ್ತು. ವೀಕೆಂಡ್ ಇದ್ದ ಕಾರಣ ಸುಮಾರು 40 ಕೋಟಿ ಹಣವನ್ನು ಗಳಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಝೀರೋ ಸಿನಿಮಾ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಕೇವಲ 38 ಕೋಟಿ ರೂ. ಕೆಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ದಿನದಿಂದ ದಿನಕ್ಕೆ ಪ್ರೇಕ್ಷಕರು ಕೂಡ ಹೆಚ್ಚಾಗುತ್ತಿದ್ದಾರೆ. ಆದ್ದರಿಂದ ಪರಭಾಷೆ ಸಿನಿಮಾಗೆ ಕನ್ನಡ ಸಿನಿಮಾ ಪೈಪೋಟಿ ನೀಡಿದೆ. ಹಿಂದಿ ಭಾಷೆಯಲ್ಲಿ ಕೆಜಿಎಫ್ ಮೊದಲ ದಿನವೇ 2.1 ಕೋಟಿ ರೂ. ಗಳಿಸಿದ್ದು, ಎರಡನೇ ದಿನ 3 ಕೋಟಿ ರೂ. ಗಳಿಸಿತ್ತು ಎಂದು ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv