ಡಬಲ್ ಧಮಾಕಾ ನೀಡಲು ರೆಡಿಯಾದ ಯಶ್

Public TV
1 Min Read
yash life journey

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಡಬಲ್ ಧಮಾಕಾ ನೀಡಲು ರೆಡಿಯಾಗಿದ್ದಾರೆ. ಕೆಜಿಎಫ್ ಚಾಪ್ಟರ್-1 ಬಿಡುಗಡೆಯ ಬಳಿಕ ಎರಡನೇ ಭಾಗ ಯಾವಾಗ ಎಂದು ಅಭಿಮಾನಿಗಳು ಪ್ರಶ್ನಿಸಿದ್ದರು. ಇದೀಗ ಕೆಜಿಎಫ್: ಚಾಪ್ಟರ್ -2 ಚಿತ್ರದ ಮುಹೂರ್ತ ನೆರವೇರಿದೆ ಎಂದು ಯಶ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಕೆಜಿಎಫ್-1 ಚಿತ್ರದ ಬಳಿಕ ನೀವು ತೋರಿಸಿದ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಡಬಲ್ ಧಮಾಕಾ ಸೃಷ್ಟಿಸಲು ಚಾಪ್ಟರ್-2 ಅಣಿಯಾಗುತ್ತಿದೆ. ನಿಮ್ಮ ಪ್ರೀತಿ ಮತ್ತಿ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಬರೆದುಕೊಂಡು ಮುಹೂರ್ತದ ಫೋಟೋ ಹಾಕಿಕೊಂಡು ಟ್ವೀಟ್ ಮಾಡಿದ್ದಾರೆ.

KGF

2018 ಡಿಸೆಂಬರ್ ನಲ್ಲಿ ಬಿಡುಗಡೆಗೊಂಡಿದ್ದ ಕೆಜಿಎಫ್ ಇಡೀ ಪ್ರಪಂಚದಾದ್ಯಂತ ಚಂದನವನದ ಪರಿಮಳವನ್ನು ಬೀರಿತ್ತು. ಕೆಜಿಎಫ್ ಚಿತ್ರದಲ್ಲಿ ರಣ ರಣ ಲುಕ್‍ನಲ್ಲಿ ಮಿಂಚಿದ್ದ ಯಶ್ ಹಾಗು ಇತರೆ ಕಲಾವಿದರು ತಮ್ಮ ನಟನೆಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ದರು. ಕೆಜಿಎಫ್ ಮೊದಲ ಭಾಗ ನೋಡಿದ ಪ್ರೇಕ್ಷಕ ಕೆಲ ಉತ್ತರ ಸಿಗದ ಪ್ರಶ್ನೆಗಳೊಂದಿಗೆ ಹೊರಬಂದಿದ್ದ. ಈ ಎಲ್ಲ ಪ್ರಶ್ನೆಗಳಿಗೆ ಚಾಪ್ಟರ್-2 ಉತ್ತರ ನೀಡಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *