ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆಜಿಎಫ್-2’ ಸಿನಿಮಾ ವಿಶ್ವದಾದ್ಯಂತ ತೆರೆಕಂಡಿದ್ದು, ಚಿತ್ರವೂ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆಯಲು ಸಜ್ಜಾಗಿದೆ. ಚಿತವ್ರು ರಿಲೀಸ್ಗೂ ಮುನ್ನವೇ 20 ಕೋಟಿ ಮೌಲ್ಯದ ಟಿಕೆಟ್ ಮಾರಾಟವಾಗಿದ್ದು, ರಾಜಮೌಳಿ ನಿರ್ದೇಶನ ಆರ್ಆರ್ಆರ್ ಸಿನಿಮಾದ ದಾಖಲೆಯನ್ನೂ ಸರಿಗಟ್ಟಿದೆ.
Advertisement
ಮಧ್ಯರಾತ್ರಿಯಿಂದಲೇ ತೆರೆಗೆ ಬಂದ ಕೆಜಿಎಫ್-2ಗೆ ಎಲ್ಲ ಭಾಷೆಗಳಲ್ಲಿಯೂ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾ ರಂಗಗಳಲ್ಲೂ ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೆ, ಕೋವಿಡ್ ನಂತರ ಬಿಡುಗಡೆಯಾದ ಹಿಂದಿ ಚಲನಚಿತ್ರಗಳನ್ನೂ ಕೆಜಿಎಫ್-2 ಹಿಂದಿಕ್ಕಿರುವುದು ಮತ್ತೊಂದು ವಿಶೇಷ. ಇದನ್ನೂ ಓದಿ: ಕೆಜಿಎಫ್ 2 : ಈ ಎಲ್ಲ ಸೆಲೆಬ್ರಿಟಿಗಳು ಮಧ್ಯೆ ರಾತ್ರಿಯೇ ಸಿನಿಮಾ ನೋಡಿದ್ರು
Advertisement
Advertisement
ಮಧ್ಯರಾತ್ರಿಯಿಂದಲೇ ಶೋ ನೋಡಿ ಬಂದವರು ರಾಕಿಭಾಯ್ಯನ್ನು ಹೊಗಳುತ್ತಿದ್ದಾರೆ. ಅನೇಕ ಮಹಿಳಾ ಅಭಿಮಾನಿಗಳು, ಮಕ್ಕಳು ಫಿದಾ ಆಗಿದ್ದು, ರಾಕಿಭಾಯ್ಗಾಗಿ ಥಿಯೇಟರ್ ಮುಂದೆಯೇ ಸ್ಟೆಪ್ ಹಾಕುತ್ತಿದ್ದಾರೆ. 5 ಭಾಷೆಗಳಲ್ಲಿ ಸುಮಾರು 70 ದೇಶಗಳಲ್ಲಿ ಕೆಜಿಎಫ್-2 ಬಿಡುಗಡೆಯಾಗಿದ್ದು, ಉತ್ತರ ಭಾರತದಲ್ಲಿ ಕೂಡ ಕೆಜಿಎಫ್-2 ಹವಾ ಆರಂಭವಾಗಿದೆ. ಇದನ್ನೂ ಓದಿ: ಕೆಜಿಎಫ್ 2: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ರವೀನಾ ಟಂಡನ್?
Advertisement
ಈಗಾಗಲೇ ಟಿಕೆಟ್ ಬುಕ್ಕಿಂಗ್ ಆದಾಯದಲ್ಲಿ ಕನ್ನಡದಲ್ಲಿ 4.90 ಕೋಟಿ, ಹಿಂದಿಯಲ್ಲಿ 11.40 ಕೋಟಿ, ಮಲಯಾಳಂನಲ್ಲಿ 1.90 ಕೋಟಿ, ತೆಲುಗಿನಲ್ಲಿ 5 ಲಕ್ಷ, ತಮಿಳಿನಲ್ಲಿ 2 ಕೋಟಿಗೆ ಸೇರಿ 20.25 ಕೋಟಿ ರೂ.ಗೆ ಮುಂಗಡ ಟಿಕೆಟ್ ಮಾರಾಟವಾಗಿದೆ. ಸದ್ಯ ಕೆಜಿಎಫ್ಗೆ ಸವಾಲೊಡ್ಡಲು ಸಿದ್ಧವಾಗಿದ್ದ ಶಾಹಿದ್ ಕಪೂರ್ ನಟನೆಯ `ಜೆರ್ಸಿ’ ಚಿತ್ರವು ಕಾಪಿರೈಟ್ ಸಮಸ್ಯೆ ಎದುರಿಸುತ್ತಿದ್ದು, ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ.