ಎಲ್ಲಿ ಹೋದ್ರೂ ಅಲ್ಲಿ ರಾಕಿಭಾಯ್ ಹವಾ, ಯಶ್‌ದೇ ಜಪತಪ ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟು ಹಾಕಿರೋ `ಕೆಜಿಎಫ್ 2′ ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ಮಾತ್ರ ಸೌಂಡ್ ಮಾಡ್ತಿರೋದಲ್ಲ. ತಮಿಳುನಾಡಿನ ಪ್ರೇಕ್ಷಕರಿಗೂ ಚಿತ್ರ ಸಿಕ್ಕಾಪಟ್ಟೆ ಮೋಡಿ ಮಾಡಿದೆ. ಅಷ್ಟೇ ಅಲ್ಲ, ಬಾಕ್ಸಾಫೀಸ್‌ನಲ್ಲಿ 100 ಕೋಟಿ ಬಾಚಿರೋ ಮೊದಲ ತಮಿಳು ಡಬ್ಬಿಂಗ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Advertisement
`ಕೆಜಿಎಫ್’ ಚಾಪ್ಟರ್ 1 ಭರ್ಜರಿ ಹಿಟ್ ಆಗಿತ್ತು ಇದೀಗ ಚಾಪ್ಟರ್ 2 ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ತಮಿಳಿನ `ಬೀಸ್ಟ್’ ಚಿತ್ರದ ಮುಂದೆ ರಿಲೀಸ್ ಆಗಿರೋ `ಕೆಜಿಎಫ್ 2′ ಚಿತ್ರ ದಳಪತಿ ವಿಜಯ್ ಸಿನಿಮಾಗೆ ಗೇಟ್ ಪಾಸ್ ಕೊಟ್ಟು ಬಾಕ್ಸಾಆಫೀಸ್ ಲೂಟಿ ಮಾಡ್ತಿದೆ ಯಶ್ ಸಿನಿಮಾ. `ಬೀಸ್ಟ್’ ಚಿತ್ರಕ್ಕೆ ಸೆಡ್ಡು ಹೊಡೆದು ಕಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ಬಾಚಿರೋ ಮೊದಲ ತಮಿಳು ಡಬ್ಬಿಂಗ್ ಚಿತ್ರ ಎಂಬ ಪ್ರಶಂಸೆಗೆ ಪಾತ್ರವಾಗಿದೆ.
Advertisement
Advertisement
ಈ ಹಿಂದೆ ಮಾರ್ಚ್ನಲ್ಲಿ ರಿಲೀಸ್ ಆಗಿದ್ದ `ಆರ್‌ಆರ್‌ಆರ್’ ಚಿತ್ರದ ಕಲೆಕ್ಷನ್ ಅನ್ನು ಮೀರಿಸಿ `ಕೆಜಿಎಫ್ 2′ ನಿಂತಿದೆ. ತಮಿಳು ವರ್ಷನ್‌ನಲ್ಲೂ ಪ್ರಶಾಂತ್ ನೀಲ್ ಮತ್ತು ಯಶ್ ಡೆಡ್ಲಿ ಕಾಂಬಿನೇಷನ್ ವರ್ಕೌಟ್ ಆಗಿದ್ದು, ತೆರೆಯ ಮೇಲೆ ರಾಕಿಭಾಯ್ ಕಮಾಲ್ ಮಾಡ್ತಿದ್ದಾರೆ. ಚಿತ್ರ ನೋಡಿ ತಮಿಳು ಪ್ರೇಕ್ಷಕರು ಕೂಡ ಯಶ್ ಆಕ್ಟಿಂಗ್‌ಗೆ ಬೋಲ್ಡ್ ಆಗಿದ್ದಾರೆ ಅನ್ನೋದಕ್ಕೆ ಗಲ್ಲಾಪೆಟ್ಟಿಗೆಯ ಕಲೆಕ್ಷನ್ ತಾಜಾ ಉದಾಹರಣೆ. ಇದನ್ನೂ ಓದಿ: ಮತ್ತೆ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸಂಜನಾ ಗಲ್ರಾನಿ: ಫೋಟೋಸ್ ವೈರಲ್
Advertisement
ಇನ್ನು ಕಾಲಿವುಡ್ ಅಂಗಳದಲ್ಲಿ `ಕೆಜಿಎಫ್ 2′ 100 ಕೋಟಿ ಬಾಚಿ ಮೊದಲ ತಮಿಳು ಡಬ್ಬಿಂಗ್ ಚಿತ್ರವಾಗಿ ಸೌಂಡ್ ಮಾಡ್ತಿದ್ದು, ಒಟ್ಟು ಕಲೆಕ್ಷನ್‌ನಲ್ಲಿ 1000 ಸಾವಿರ ಕೋಟಿ ಗಡಿ ದಾಟಿ ಕಲೆಕ್ಷನ್ ಮಾಡಿದೆ. ಎಲ್ಲಾ ವುಡ್‌ನಲ್ಲೂ ಯಶ್ ಮೇನಿಯಾ ಜೋರಾಗಿದೆ.