Bengaluru CityBollywoodCinemaKarnatakaLatestMain PostSandalwood

ರಾಷ್ಟ್ರ ಭಾಷೆ ವಿವಾದದ ನಡುವೆಯೂ ಹಿಂದಿ ಬಾಕ್ಸ್ಆಫೀಸ್‌ನಲ್ಲಿ 343 ಕೋಟಿ ಬಾಚಿದ `ಕೆಜಿಎಫ್ 2′

ಸಿನಿಮಾ ಅಂದ್ರೆ `ಕೆಜಿಎಫ್ 2′ ಅನ್ನೋವಷ್ಟರ ಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿರೋ ಸಿನಿಮಾ. ರಾಷ್ಟ್ರ ಭಾಷೆ ವಿವಾದದ ನಡುವೆಯೂ ಯಶಸ್ವಿ ಪ್ರದರ್ಶನ ಕಾಣ್ತಿದೆ ಯಶ್ ಸಿನಿಮಾ. ದಿನದಿಂದ ದಿನಕ್ಕೆ ಕೋಟಿ ಕೋಟಿ ಲೂಟಿ ಮಾಡ್ತಿರೋ `ಕೆಜಿಎಫ್ 2′ ಚಿತ್ರದ ಈಗಿನ ಕಲೆಕ್ಷನ್ ಅಪ್‌ಡೇಟ್ 343.13 ಕೋಟಿ ಬಾಚಿದೆ. ಬಾಲಿವುಡ್‌ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿ ಮೂರನೇ ಸ್ಥಾನದಲ್ಲಿದೆ.

kgf 2

ಪ್ರಶಾಂತ್‌ನೀಲ್ ಮತ್ತು ಯಶ್ ಕಾಂಬಿನೇಷನ್‌ನ `ಕೆಜಿಎಫ್ 2′ ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಆಗಿತ್ತು. ಬಿಡುಗಡೆಯಾಗಿ 15 ದಿನಗಳಾದ್ರು ಕಲೆಕ್ಷನ್ ಎಲ್ಲೂ ಹಿಂದೆ ಬೀಳದೇ ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರಗಳಲ್ಲಿ `ಕೆಜಿಎಫ್ 2′ ಮೂರನೇ ಸ್ಥಾನದಲ್ಲಿದೆ. `ಟೈಗರ್ ಜಿಂದಾ ಹೈ’, ಪಿಕೆ, ಸಂಜು ಸಿನಿಮಾಗಳನ್ನು ಸೆಡ್ಡು ಹೊಡೆದು 343.13 ಕೋಟಿ ಬಾಚಿದೆ.

ಸಲ್ಮಾನ್ ನಟನೆಯ `ಟೈಗರ್ ಜಿಂದಾ ಹೈ’ 339.16, ಅಮೀರ್ ಖಾನ್ ನಟನೆಯ ಪಿಕೆ 340.8, ರಣ್‌ಬೀರ್ ಕಪೂರ್ ನಟನೆಯ ಸಂಜು 342.53 ಕಲೆಕ್ಷನ್‌ ಮಾಡಿದೆ. ʻಬಾಹುಬಲಿ 2′ ಮೊದಲ ಸ್ಥಾನದಲ್ಲಿದ್ದರೆ, ದಂಗಲ್ ಎರಡನೇ ಸ್ಥಾನದಲ್ಲಿದೆ, `ಕೆಜಿಎಫ್ 2′ ಮೂರನೇ ಸ್ಥಾನದಲ್ಲಿದೆ. ಇನ್ನು ಬಾಲಿವುಡ್ ಸದ್ಯ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿರುವುದು ಯಾವುದು ಇಲ್ಲ. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ಕಿಚ್ಚ ಸುದೀಪ್ ಮಾತಿಗೆ ದನಿಗೂಡಿಸಿದ ಸಿಎಂ ಬೊಮ್ಮಾಯಿ

ಹಿಂದಿ ರಾಷ್ಟ್ರಭಾಷೆ ಎಂಬ ವಿವಾದದ ನಡುವೆಯೂ 342 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಒಟ್ನಲ್ಲಿ ದಿನದಿಂದ ದಿನಕ್ಕೆ ಸಿನಿಮಾ ಸಂಖ್ಯೆ ಜಾಸ್ತಿಯಾಗುತ್ತಿದೆ. ವಿನಃ ಕಮ್ಮಿಯಾಗುತ್ತಿಲ್ಲ.

Leave a Reply

Your email address will not be published.

Back to top button