ಬೆಂಗಳೂರು: ಸ್ಯಾಂಡಲ್‍ವುಡ್ ಸೇರಿದಂತೆ ಭಾರತದಾದ್ಯಂತ ರಾಕಿಭಾಯ್ ಹವಾ ಜೋರಾಗಿದ್ದು, ‘ಕೆಜಿಎಫ್’ ಸಿನಿಮಾ ರಿಲೀಸ್ ಆಗಿ ಮೂರು ವಾರ ಕಳೆದರೂ ಹವಾ ಮಾತ್ರ ಕಮ್ಮಿಯಾಗಿಲ್ಲ. ವಾರದಿಂದ ವಾರಕ್ಕೆ ‘ಕೆಜಿಎಫ್’ ಖಜಾನೆಗೆ ಕೋಟಿ ಕೋಟಿ ಹಣ ಬಂದು ಸೇರುತ್ತಿದೆ.
ಕೆಜಿಎಫ್ ಸಿನಿಮಾ ಬಿಡುಗಡೆಗೊಂಡ 10 ದಿನದಲ್ಲಿ 150 ಕೋಟಿ ರೂಪಾಯಿಯನ್ನು ಗಳಿಸಿತ್ತು. ಈಗ 19ನೇ ದಿನಕ್ಕೆ ಬರೋಬ್ಬರಿ 200 ಕೋಟಿ ರೂ.ಗಳಿಕೆ ಕಂಡಿದೆ. ಅದರಲ್ಲೂ ಕರ್ನಾಟಕದಲ್ಲೇ 120 ಕೋಟಿ ಕಲೆಕ್ಷನ್ ಮಾಡಿದ್ದು, ಬಾಲಿವುಡ್ ಅಂಗಳವೊಂದರಲ್ಲೇ 37 ಕೋಟಿ ಬಾಚಿಕೊಂಡಿದೆ. ಇನ್ನು ಎರಡ್ಮೂರು ದಿನದಲ್ಲಿ ಅದು 50 ಕೋಟಿಗೆ ಮುಟ್ಟುವ ಸಾಧ್ಯತೆ ಇದೆ. ಇದನ್ನೂ ಓದಿ: 150 ಕೋಟಿಯ ಕ್ಲಬ್ ಸೇರಿ ದಾಖಲೆ ಬರೆದ ಕೆಜಿಎಫ್!
Advertisement
Advertisement
ಈ ಹಿಂದೆ 100 ಮತ್ತು 200 ಕೋಟಿ ಕ್ಲಬ್ ಸೇರುವುದು ಬಾಲಿವುಡ್ ನಲ್ಲಿ ಮಾತ್ರ ಎಂಬ ಮಾತಿತ್ತು. ಆದರೆ ಈಗ ಸ್ಯಾಂಡಲ್ ವುಡ್ ನ ‘ಕೆಜಿಎಫ್’ ಸಿನಿಮಾ 200 ಕೋಟಿ ಕ್ಲಬ್ ಸೇರಿದ್ದು, ಈ ಮೂಲಕ ಇತಿಹಾಸದಲ್ಲೇ 200 ಕೋಟಿ ಬಾಚಿರುವ ಪ್ರಪ್ರಥಮ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನೂ ಬಾಲಿವುಡ್ ನ ‘ಝೀರೋ’ ಮತ್ತು ‘ಸಿಂಬಾ’ ಸಿನಿಮಾಗಳ ನಡುವೆಯೂ ‘ಕೆಜಿಎಫ್’ ಹಿಂದಿ ವರ್ಷನ್ ಸಿನಿಮಾ 40 ಕೋಟಿ ಬಾಚಿಕೊಂಡಿದೆ. ಇತ್ತ ತೆಲುಗು ಮತ್ತು ತಮಿಳಿನಲ್ಲಿ 20 ಕೋಟಿ ಗಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಬಿಡುಗಡೆಯಾದ ಐದೇ ದಿನಕ್ಕೆ 100 ಕೋಟಿ ರೂ. ಗಳಿಸಿದ ಕೆಜಿಎಫ್
Advertisement
ಪ್ರಶಾಂತ್ ನೀಲ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್’ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಐದು ಭಾಷೆಗಳಲ್ಲಿ ಡಿಸೆಂಬರ್ 21 ರಂದು ತೆರೆಕಂಡಿತ್ತು. ಈಗ ಬರೋಬ್ಬರಿ 200 ಕೋಟಿ ಕ್ಲಬ್ ಸೇರುವ ಮೂಲಕ ‘ಕೆಜಿಎಫ್’ ಸ್ಯಾಂಡಲ್‍ವುಡ್ ಮಟ್ಟಿಗೆ ಹೊಸ ಮೈಲಿಗಲ್ಲು ನಿರ್ಮಿಸಿದೆ.
Advertisement
ಕೆಜಿಎಫ್ ಸಿನಿಮಾ ಟಾಲಿವುಡ್, ಕಾಲಿವುಡ್, ಬಾಲಿವುಡ್ ಮತ್ತು ಮಾಲಿವುಡ್ ಅಂಗಳದಲ್ಲಿ ತನ್ನದೇ ಆದ ಹವಾ ಕ್ರಿಯೇಟ್ ಆಗಿದೆ. ಅತ್ತ ಸೌಥ್ ಸೂಪರ್ ಸ್ಟಾರ್‍ಗಳು ಕೂಡ ಯಶ್ ಸಿನಿಮಾ ಟಕ್ಕರ್ ಕೊಡೋದಕ್ಕೆ ಮೈಕೊಡವಿ ಎದ್ದು ನಿಂತಿದ್ದಾರೆ. `ಪೆಟ್ಟಾ’ ಸಿನಿಮಾದ ಮೂಲಕ ತಲೈವಾ, `ಕಥಾನಾಯಕುಡು’ ಚಿತ್ರದ ಮೂಲಕ ಬಾಲಕೃಷ್ಣಗಾರು, ತಲಾ ಅಜಿತ್ `ವಿಶ್ವಾಸಂ’ ಸಿನಿಮಾ ಮುಖೇನ ಬೆಳ್ಳಿಪರದೆಗೆ ಲಗ್ಗೆ ಇಡುತ್ತಿದ್ದಾರೆ. ಇವರುಗಳ ಜೊತೆಗೆ ರಾಮ್‍ಚರಣ್ ತೇಜಾ ಅಭಿನಯದ `ವಿನಯ ವಿಧೇಯ ರಾಮ’ ಸಿನಿಮಾ ಕೂಡ ಬಿಡುಗಡೆಗೊಳ್ಳುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv