ಬೆಂಗಳೂರು: ಪಂಚಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ ದಾಖಲೆ ನಿರ್ಮಿಸಿದ ಕೆಜಿಎಫ್ ಈಗ ವಿಶ್ವಾದ್ಯಂತ 150 ಕೋಟಿ ರೂ. ಕಲೆಕ್ಷನ್‍ಗೈದ ಕನ್ನಡದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಿಡುಗಡೆಯಾದ 5ನೇ ದಿನಕ್ಕೆ 100 ಕೋಟಿ ರೂ. ಕ್ಲಬ್ ಸೇರಿದ್ದ ಯಶ್ ಅಭಿನಯದ ಕೆಜಿಎಫ್ ಈಗ ಎರಡನೇ ವಾರಾಂತ್ಯದಲ್ಲಿ 150 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈಗ ವಿದೇಶದಲ್ಲೂ ಕೆಜಿಎಫ್ ಸ್ಕ್ರೀನ್ ಹೆಚ್ಚಳವಾಗುತ್ತಿದ್ದು ಮತ್ತಷ್ಟು ಕಲೆಕ್ಷನ್ ಜಾಸ್ತಿಯಾಗಲಿದೆ. ಇದನ್ನೂ ಓದಿ: ಲುಂಗಿ, ಹವಾಯಿ ಚಪ್ಪಲಿ, ಮಂಕಿಕ್ಯಾಪ್ ಹಾಕ್ಕೊಂಡು ‘ಕೆಜಿಎಫ್’ ನೋಡಿದ ಸ್ಯಾಂಡಲ್‍ವುಡ್ ಟಾಪ್ ನಟ
ಕನ್ನಡದಲ್ಲಿ ಒಟ್ಟು 87 ಕೋಟಿ ರೂ. ಕಲೆಕ್ಷನ್ ಮಾಡಿದ್ದು ಇದು ದಾಖಲೆಯಾಗಿದೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ 75 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಹಿಂದಿ ಆವೃತ್ತಿಯಲ್ಲಿ ಕೆಜಿಎಫ್ ಚಿತ್ರ ಒಟ್ಟಾರೆ 26.70 ಕೋಟಿ ರೂ. ಗಳಿಸಿ ದಾಖಲೆ ನಿರ್ಮಿಸಿದೆ. ಕ್ರಿಸ್ಮಸ್ ರಜೆಯ ಹಿನ್ನೆಲೆಯಲ್ಲಿ ಹಲವು ಜನ ಊರು ಮತ್ತು ಪ್ರವಾಸಕ್ಕೆ ತೆರಳಿದ್ದರು. ಹೀಗಾಗಿ ಸಿನಿಮಾ ವೀಕ್ಷಿಸದವರು ಈಗ ಚಿತ್ರ ಮಂದಿರದತ್ತ ಬರುತ್ತಿದ್ದಾರೆ. ಇದನ್ನೂ ಓದಿ:ತಮಿಳುನಾಡಲ್ಲೂ ಕೆಜಿಎಫ್ ಹವಾ – ತಮಿಳು ಚಿತ್ರಗಳನ್ನು ಹಿಂದಿಕ್ಕಿ ಸ್ಕ್ರೀನ್ ಹೆಚ್ಚಿಸಿಕೊಳ್ಳುತ್ತಿದ್ದಾನೆ ರಾಕಿ ಭಾಯ್
ಬಿಡುಗಡೆಯಾದ 4 ದಿನಕ್ಕೆ 77 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿತ್ತು. ಈಗ ಸ್ಕ್ರೀನ್ ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುವ ಜೊತೆಗೆ ಕ್ರಿಸ್‍ಮಸ್ ರಜೆ ಇದ್ದ ಕಾರಣ ಭರ್ಜರಿ ಕಲೆಕ್ಷನ್ ಮಾಡಿದೆ. ಒಟ್ಟಿನಲ್ಲಿ ಕನ್ನಡ ಚಿತ್ರವೊಂದು ಬಾಲಿವುಡ್ ಅಂಗಳದಲ್ಲಿಯೂ ಸದ್ದು ಮಾಡುವ ಮೂಲಕ ತನ್ನ ಹಿರಿಮೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.
`ಕೆಜಿಎಫ್’ ಚಿತ್ರದ ಮೊದಲ ದಿನದ ಕಲೆಕ್ಷನ್ ಸುಮಾರು 23 ಕೋಟಿ ರೂ. ಆಗಿದ್ದರೆ, ಎರಡನೇ 40 ಕೋಟಿ ರೂ. ಗಳಿಸಿತ್ತು. ಮೂರನೇ ದಿನ 58 ಕೋಟಿ ರೂ., ನಾಲ್ಕನೇಯ ದಿನ 77 ಕೋಟಿ ರೂ. ಆಗಿದ್ದರೆ, ಐದನೇ ದಿನ ಕೆಜಿಎಫ್ ನೂರು ಕೋಟಿ ರೂ. ಗಡಿ ದಾಟಿತ್ತು. ಇದನ್ನೂ ಓದಿ:ಸಲಾಂ ರಾಕಿ ಭಾಯ್ ಅಂತಾ ಹೇಳ್ತಿರೋದು ಕೆಜಿಎಫ್ ಸಿನಿಮಾಗೆ ಅಲ್ಲ
ಕೆಜಿಎಫ್ ಬಿಡುಗಡೆಯಾದ ದಿನವೇ ರಿಲೀಸ್ ಆಗಿದ್ದ ಶಾರೂಖ್ ಖಾನ್ ಅಭಿನಯದ ಝೀರೋ ಎರಡನೇ ವಾರಾಂತ್ಯದ ವೇಳೆಗೆ ಒಟ್ಟು 80 ಕೋಟಿ ರೂ. ಕಲೆಕ್ಷನ್ ಮಾಡಿದೆ. ಒಟ್ಟು 10 ದಿನದಲ್ಲಿ 80 ಕೋಟಿ ಗಳಿಸಿದ್ದು, ಎರಡನೇ ವಾರಾಂತ್ಯದಲ್ಲಿ ಕೇವಲ 3.10 ಕೋಟಿ ರೂ. ಗಳಿಕೆ ಮಾಡಿದೆ. ಬಾಕ್ಸ್ ಆಫೀಸಿನಲ್ಲಿ ಶಾರೂಖ್ ಅಭಿನಯದ ಅತಿ ಕಡಿಮೆ ಗಳಿಕೆ ಮಾಡಿದ ಚಿತ್ರ ಝೀರೋ ಆಗಿದೆ ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಇದನ್ನೂ ಓದಿ:ಹಳ್ಳಿ ಹೈದ ಬರೆದ ‘ಕೆಜಿಎಫ್’ ಹಾಡಿಗೆ ಜನ್ರು ಫುಲ್ ಫಿದಾ
#KGF has crossed ₹ 150 Crs at the WW Box Office at the end of 2nd Weekend..
With many new Overseas locations opening this past weekend.. pic.twitter.com/J6uEr0Ksf0
— Ramesh Bala (@rameshlaus) December 31, 2018
ಕೆಜಿಎಫ್ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಕೆಜಿಎಫ್ ಮೊದಲ ಭಾಗದಲ್ಲಿ ನಟಿ ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನಂತ್ ನಾಗ್ ಹಾಗೂ ವಸಿಷ್ಠ ಸಿಂಹ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ಕೆಜಿಎಫ್ ಚಿತ್ರ ಡಿಸೆಂಬರ್ 21 ರಂದು ಬಿಡುಗಡೆಯಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv