ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜೆಎಫ್ ಸಿನಿಮಾ ಅನೇಕ ಮೈಲುಗಲ್ಲನ್ನು ಬರೆದಿದ್ದು, ಈಗ ಹಿಂದಿ ಬಾಕ್ಸ್ ಆಫೀಸ್‍ನಲ್ಲೂ ಕಮಾಲ್ ಮಾಡಿದೆ.
ಹಿಂದಿಗೆ ಡಬ್ ಆಗಿರುವ ಕೆಜಿಎಫ್ ಚಿತ್ರವು ಈ ವರೆಗೆ 40.39 ಕೋಟಿ ರೂ. ಗಳಿಸಿದೆ. ಈ ಮೂಲಕ ಹಿಂದಿಗೆ ಡಬ್ ಆದ ಸಿನಿಮಾಗಳ ಪೈಕಿ ಅತಿ ಹೆಚ್ಚು ಹಣ ಗಳಿಸಿದ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆ ಕೆಜಿಎಫ್ ಪಾತ್ರವಾಗಿದೆ. ಹೀಗಾಗಿ ಬಾಹುಬಲಿ 2, 2.0, ಹಾಗು ಬಾಹುಬಲಿ ಭಾಗ 1 ಸಿನಿಮಾದ ನಂತರದ ಸ್ಥಾನದಲ್ಲಿ ಕೆಜಿಎಫ್ ಗುರುತಿಸಿಕೊಂಡಿದೆ. ಇದನ್ನು ಓದಿ: ಪಾಕಿಸ್ತಾನದಲ್ಲೂ ಕೆಜಿಎಫ್ ಹವಾ ಶುರು
ಕೆಜಿಎಫ್ ಸಿನಿಮಾ ತೆರೆಕಂಡ ಮೊದಲ ವಾರದಲ್ಲಿ 21.45 ಕೋಟಿ ರೂ., ಎರಡನೇ ವಾರಕ್ಕೆ 11.50 ಕೋಟಿ ಹಾಗೂ ಮೂರನೇ ವಾರ 7.44 ಕೋಟಿ ರೂ, ಗಳಿಸುವ ಮೂಲಕ ಒಟ್ಟು 40.39 ಕೋಟಿ ರೂ. ಗಡಿದಾಟಿದೆ.
#KGF biz at a glance…
Week 1: ₹ 21.45 cr
Week 2: ₹ 11.50 cr
Week 3: ₹ 7.44 cr
Total: ₹ 40.39 cr
India biz. HINDI version.#KGF is fourth highest grossing dubbed HINDI film, after #Baahubali2, #2Point0 and #Baahubali. Nett BOC. India biz.
— taran adarsh (@taran_adarsh) January 11, 2019
ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ ಭಾಗ 1 ಸಿನಿಮಾ ಜುಲೈ 10, 2015ರಂದು ತೆರೆಕಂಡಿತ್ತು. 180 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಹಿಂದಿ ವರ್ಷನಿಂದ 120 ಕೋಟಿ ರೂ. ಸೇರಿದಂತೆ, ಒಟ್ಟು 650 ಕೋಟಿ ರೂ. ಗಳಿಸಿತ್ತು. ಇದರ ನಂತರದಲ್ಲಿ ಎಪ್ರಿಲ್ 28, 2017ರಂದು ತೆರೆಕಂಡ ಬಾಹುಬಲಿ 2 ಸಿನಿಮಾ ಬರೋಬ್ಬರಿ 1,810 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಬಾಹುಬಲಿ 2 ಸಿನಿಮಾ ಹಿಂದಿ ವರ್ಷನ್ ಒಂದರಲ್ಲಿ ಕೇವಲ 34ನೇ ದಿನಕ್ಕೆ 500 ಕೋಟಿ ರೂ. ಬಾಚಿತ್ತು.
ರಜನಿಕಾಂತ್, ಅಕ್ಷಯ್ ಕುಮಾರ್ ಅಭಿನಯದ 2.0 ಸಿನಿಮಾ ಹಿಂದಿ ವರ್ಷನ್‍ನಲ್ಲಿ 183.75 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿತ್ತು. ಇದನ್ನು ಓದಿ:`ಉತ್ತರಾಯಣ’ ದಿಂದ `ಕೆಜಿಎಫ್’ವರೆಗೆ – ರಾಕಿಂಗ್ ಸ್ಟಾರ್ ಯಶ್ ನಡೆದು ಬಂದ ಹಾದಿ ಇಲ್ಲಿದೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv