ನವದೆಹಲಿ: ಬಡವನೊಬ್ಬ ಶ್ರಮವಹಿಸಿ ದುಡಿದು ಕಾನೂನು ಬದ್ಧವಾಗಿಯೇ ಶ್ರೀಮಂತನಾದರೂ ದೇಶದ ತನಿಖಾ ಸಂಸ್ಥೆಗಳು ವಿಚಾರಣೆ ಹೆಸರಿನಲ್ಲಿ ಮಾನಸಿಕ ಕಿರುಕುಳ ನೀಡುತ್ತವೆ. ಹೀಗಾಗಿ ಬಡವರು ಯಾವ ಕೆಲಸ ಮಾಡುತ್ತಿದ್ದೀರಿ, ಅದೇ ಕೆಲಸ ಮಾಡಿಕೊಂಡು ಬಡವರಾಗಿದ್ದು ಬಿಡಿ ಎಂದು ಕೆಜಿಎಫ್ ಬಾಬು (KGF Babu) ಅಸಮಾಧಾನ ವ್ಯಕ್ತಪಡಿಸಿದರು.
6ನೇ ಬಾರಿಗೆ ವಿಚಾರಣೆಯ ಹಿನ್ನೆಲೆಯಲ್ಲಿ ದೆಹಲಿಯ ಇಡಿ ಕೇಂದ್ರ ಕಚೇರಿಗೆ ಆಗಮಿಸಿದ್ದ ಕೆಜಿಎಫ್ ಬಾಬು ಮಾಧ್ಯಮಗಳ ಜೊತೆಗೆ ಮಾತನಾಡಿ, ನನಗೂ ಇಡಿಗೂ (ED) ಸಂಬಂಧ ಇಲ್ಲ, ಯಾಕೆ ಕರೆದಿದ್ದಾರೆ ನನಗೆ ಗೊತ್ತಿಲ್ಲ, ಈವರೆಗೂ 6 ಬಾರಿ ಕರೆದಿದ್ದಾರೆ. ನನ್ನ ಜೊತೆಗೆ ವ್ಯವಹಾರ ಮಾಡಿದ ಆರೇಳು ಜನಕ್ಕೆ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ ಎಂದರು.
Advertisement
Advertisement
ಇಡಿ ಅಧಿಕಾರಿಗಳು ಯಾವುದನ್ನು ಅಧಿಕೃತವಾಗಿ ತನಿಖೆ ನಡೆಸುತ್ತಿಲ್ಲ ಎನಿಸುತ್ತಿದೆ. ನನಗೆ ಸಮನ್ಸ್ ನೀಡದೆ ವಿಚಾರಣೆಗೆ ಕರೆಯುತ್ತಿದ್ದಾರೆ. ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ನನ್ನ ಆದಾಯದ ಮೂಲ ಕೇಳುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ ಮಾಡುವ ಕೆಲಸವನ್ನು ಇಡಿ ಮಾಡಲು ಆರಂಭಿಸಿದೆ. 2019ವರೆಗೂ ಐಟಿಯೇ (IT) ನನ್ನ ಆಸ್ತಿ ಅಂದಾಜು ಮಾಡಿ, ಟ್ಯಾಕ್ಸ್ ಕಟ್ಟಿಸಿಕೊಂಡಿದೆ. ಹಾಗಾದ್ರೆ ಐಟಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
Advertisement
ವಿಚಾರಣೆ ಹೆಸರಿನಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಹೀಗೆ ಕಿರುಕುಳ ನೀಡುವ ಬದಲು ಒಮ್ಮೆ ಜೈಲಿಗೆ ಹಾಕಿ ಬಿಡಿ ಎಂದು ಆಕ್ರೋಶ ಹೊರಹಾಕಿದ ಅವರು, ಯಾರು ಸ್ಲಂನಲ್ಲಿದ್ದೀರಿ ಅವರು ಅಲ್ಲೇ ಇರಿ, ಬಡವರು ದುಡ್ಡಿನವರು ಆದರೆ ಇದೇ ಸಮಸ್ಯೆ ಇರಲಿದೆ. ಶ್ರೀಮಂತರು ಶ್ರೀಮಂತರಾಗಿರಬೇಕು, ಬಡವರು ಶ್ರೀಮಂತರಾದ್ದಾರೆ ಇಡಿ ಸಿಬಿಐ (CBI) ಎಲ್ಲರೂ ಬರ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಮಾರ್ಚ್‌ನಲ್ಲಿ ದಶಪಥ ರಸ್ತೆ ಲೋಕಾರ್ಪಣೆ, 250 ರೂ. ಟೋಲ್ ನಿಗದಿ ಸಾಧ್ಯತೆ: ಪ್ರತಾಪ್ ಸಿಂಹ
Advertisement
ನನ್ನ ವ್ಯವಹಾರ ರಾಜಕಾರಣಿಗಳು ಸೇರಿ ಎಲ್ಲರ ಜೊತೆಗೆ ಇದೆ. ಜಮೀರ್ ಅಹ್ಮದ್‌ಗೆ 3.70 ಕೋಟಿ ಕೈಸಾಲ ನೀಡಿ ಸಿಕ್ಕಿ ಹಾಕಿಕೊಂಡೆ, ಸಾಲವನ್ನು ನೀಡಿದ್ದನ್ನು ಧೃಢಿಕರಿಸಿದ ಬಳಿಕ ನೋಟಿಸ್, ವಿಚಾರಣೆ ಆರಂಭವಾಯಿತು. ಇದರಲ್ಲಿ ಮಾಜಿ ಶಾಸಕ ಆರ್.ವಿ ದೇವರಾಜ್ ಕೈವಾಡವೂ ಇದೆ ಎನ್ನುವ ಅನುಮಾನವಿದೆ. ಮನೆಗೆ ಬೆಂಕಿ ಇಟ್ಟಿರುವ ದೇವರಾಜ್ ನನ್ನನ್ನು ರಾಜಕೀಯವಾಗಿ ಮುಗಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಶಾಲೆಗಳಲ್ಲಿ ಮೊಟ್ಟೆ ಕೊಡುವುದು ನಿಲ್ಲಿಸುವುದಿಲ್ಲ: ಬಿ.ಸಿ ನಾಗೇಶ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k