LatestMain PostNational

ನೊಟೀಸ್‍ನಿಂದ ಬೇಜಾರು ಆಗಿಲ್ಲ, ಭಯನೂ ಆಗಿಲ್ಲ, ನಾನು ಕರೆಕ್ಟಾಗಿ ಇದ್ದೀನಿ: ಕೆಜಿಎಫ್ ಬಾಬು

ನವದೆಹಲಿ: ಬಡ ಕುಟುಂಬಗಳಿಗೆ ಹಣ, ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಕೊಡುತ್ತಿದ್ದೇನೆ. ಕೋಲಾರದಲ್ಲಿ ಮಾಡಿದ ಜನಸೇವೆಯನ್ನೇ ನಾನು ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಮಾಡುತ್ತಿದ್ದೇನೆ, ಇದರಲ್ಲಿ ತಪ್ಪು ಏನಿದೆ. ಯಾಕೆ ನೋಟಿಸ್ ನೀಡಲಾಗಿದೆ ಎಂದು ಅರ್ಥವಾಗುತ್ತಿಲ್ಲ ಎಂದು ಕೆಜಿಎಫ್ ಬಾಬು ಪ್ರತಿಕ್ರಿಯಿಸಿದರು.

ಕೆಪಿಸಿಸಿ ಶಿಸ್ತು ಸಮಿತಿಯಿಂದ ನೋಟಿಸ್ ಹಿನ್ನೆಲೆ ದೆಹಲಿಯಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಯಾಕೆ ಅನುಮಾನ ಪಡುತ್ತಿದೆ ಎಂದು ಅರ್ಥ ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಶಕ್ತಿಯಾಗಿ ನಿಲ್ಲಲ್ಲು ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲವೂ ಕಾನೂನು ಬದ್ಧವಾಗಿ ಮಾಡುತ್ತಿದ್ದೇನೆ. ಇದರಲ್ಲಿ ತಪ್ಪೇನಿದೆ? ಕೋಲಾರದಲ್ಲೂ ಕೊಡುವಾಗ ಅನುಮತಿ ಕೇಳಿದ್ದೇ, ಈಗ ಬಹಿರಂಗವಾಗಿ ಅನುಮತಿ ಕೇಳುತ್ತಿದ್ದೇನೆ ಅಷ್ಟೇ ಎಂದರು.

Congress

ನಾನು ಹಲವು ಉದ್ಯಮಿಗಳಿಗೆ ಮಾದರಿಯಾಗಲು ಬಯಸುತ್ತಿದ್ದೇನೆ. ನನ್ನಂತೆಯೇ ಉದ್ಯಮಿಗಳಿಗೆ ಕಾಂಗ್ರೆಸ್ ಮೂಲಕ ಸಮಾಜ ಸೇವೆಗೆ ಕರೆ ಕೊಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬುವ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಹೆಸರಿನಲ್ಲಿ ನಾನು ಈಗಾಗಲೇ ಜನಸೇವೆ ಮಾಡುತ್ತಿದ್ದೇನೆ, ಈಗ ಕಾಂಗ್ರೆಸ್ ಹೆಸರಿನಲ್ಲಿ ಮಾಡಲು ಅನುಮತಿ ಕೇಳುತ್ತಿದ್ದೇನೆ ಎಂದು ತಿಳಿಸಿದರು.

ಚಿಕ್ಕಪೇಟೆ ಕ್ಷೇತ್ರದಲ್ಲಿ ನಾನು ಕೆಲಸ ಮಾಡಿದರೇ ಇತರರಿಗೆ ಏನು ತೊಂದರೆ, ಮತ್ತೊಬ್ಬ ಶಾಸಕನಿಗೆ ತೊಂದರೆಯಾಗುತ್ತದೆ ಎಂದು ನಾನು ಜನರ ಸೇವೆ ಮಾಡುವುದು, ಕ್ಷೇತ್ರದ ಅಭಿವೃದ್ಧಿ ಮಾಡುವುದು ಬಿಡಬೇಕಾ, ಬೇರೆಯವರು ಮಾಡಲ್ಲ ಎಂದು ನಾನು ಮಾಡಬಾರದಾ? ದೆಹಲಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಅನುಮತಿ ಕೇಳುತ್ತಿದ್ದೇನೆ. ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತಾ ವೈಫಲ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ನೇರ ಕಾರಣ – ಸುಪ್ರೀಂಗೆ ಸಮಿತಿ ವರದಿ

ಬೆಂಗಳೂರಿಗೆ ತೆರಳಿದ ಬಳಿಕ ಶಿಸ್ತು ಸಮಿತಿಯ ನೊಟೀಸ್‍ಗೆ ಉತ್ತರ ನೀಡುತ್ತೇನೆ, ನೊಟೀಸ್‍ನಿಂದ ಬೇಜಾರು ಆಗಿಲ್ಲ, ಭಯನೂ ಆಗಿಲ್ಲ, ನಾನು ಕರೆಕ್ಟಾಗಿ ಇದಿನಿ, ಭಯೋಪಡುವುದಿಲ್ಲ ಎಂದು ಕೆಜಿಎಫ್ ಬಾಬು ಹೇಳಿದ್ದಾರೆ. ಇದನ್ನೂ ಓದಿ: ದೇವಾಲಯದಲ್ಲಿ ಪ್ರಸಾದ ನಿರಾಕರಿಸಿದ ಸಚಿವರ ವಿರುದ್ಧ ದೂರು ದಾಖಲು

Live Tv

Leave a Reply

Your email address will not be published.

Back to top button