Bengaluru CityDistrictsKarnatakaLatestMain Post

ಇಡಿ, ಸಿಬಿಐಯವರು ಬರ್ತಾರೆ ಅಂತ ನಿದ್ದೆ ಬರ್ತಿಲ್ಲ, ಟೆನ್ಶನ್ ಹೆಚ್ಚಾಗಿದೆ: ಕೆಜಿಎಫ್ ಬಾಬು

Advertisements

ಬೆಂಗಳೂರು: ನನಗೆ ಯಾವುದೇ ಭಯವಿಲ್ಲ. ಇದ್ದರೇ ಒಂದೇ, ಹೋದರೇ ಒಂದೇ. ಆದರೆ ಇಡಿಯವರು, ಸಿಬಿಐಯವರು ಬರುತ್ತಾರೆ ಎಂದು ರಾತ್ರಿ ನಿದ್ದೆ ಬರುತ್ತಿಲ್ಲ. ಜೀವನದಲ್ಲಿ ಟೆನ್ಶನ್ ಹೆಚ್ಚಾಗಿದೆ ಎಂದು ಕೆಜಿಎಫ್ ಬಾಬು ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ಕೋಟಿ ಟ್ಯಾಕ್ಸ್ ಕಟ್ಟುತ್ತಿದ್ದೇನೆ. ನಾನು ಕಳ್ಳತನ ಮಾಡಿಲ್ಲ. ಆದರೂ ಇಡಿಯವರು ನನಗೆ ಟಾರ್ಚರ್ ಕೊಡುತ್ತಿದ್ದಾರೆ. ಅರೆಸ್ಟ್ ಮಾಡ್ತೇವೆ, ತಿಹಾರ್ ಜೈಲಿನಲ್ಲಿ ಇಡ್ತೇವೆ ಎಂದು ಹೇಳಿ ಹೆದರಿಸುತ್ತಿದ್ದಾರೆ. ನನ್ನ ಹೆಂಡತಿಗೆ ಬೆದರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹೆಂಡತಿಗೆ ಆಪರೇಷನ್ ಆಗಿದೆ. ಆರೋಗ್ಯ ಸರಿ ಇಲ್ಲ. ಆದರೂ ವಿಚಾರಣೆಗೆ ಕರೆಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂದು ಇದ್ದೆ. ಆದರೆ ಈಗ ಚಾಲೆಂಜಿಂಗ್ ಆಗಿ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ಪಾರ್ಟಿ ನಲ್ಲಿ ಇರುತ್ತೇನೆ. ಚಿಕ್ಕಪೇಟೆ ಕ್ಷೇತ್ರದಲ್ಲಿ ನಾನು ಕೆಲಸ ಮಾಡುತ್ತೇನೆ. ಅಲ್ಲಿಂದ ಸ್ಪರ್ಧೆ ಮಾಡಿ ಎಂದು ಜನ ಒತ್ತಾಯ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಮೋದಿ ಮುಂದೆ ರಾಹುಲ್ ಗಾಂಧಿ ಜೀರೋ: ರೇಣುಕಾಚಾರ್ಯ

Live Tv

Leave a Reply

Your email address will not be published.

Back to top button