LatestLeading NewsMain Post

ಅಂದು ಆಡಿ ಕಾರಲ್ಲಿ ಬಂದ ಕೆಜಿಎಫ್ ಬಾಬು, ಇಂದು ಸೋತು ಆಟೋ ಹತ್ತಿ ಹೋದ್ರು..!

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಬೆಂಗಳೂರು ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ಎಸ್.ಗೋಪಿನಾಥ್ ರೆಡ್ಡಿ ಗೆಲುವು ಸಾಧಿಸಿದ್ದಾರೆ. ಹೀನಾಯ ಸೋಲು ಕಂಡ ಕೆಜಿಎಫ್ ಬಾಬು ಆಟೋ ಹತ್ತಿ ಮನೆಗೆ ತೆರಳಿದರು.

1,277 ಮತಗಳ ಅಂತರದಿಂದ ಗೋಪಿನಾಥ್ ರೆಡ್ಡಿ ಗೆಲುವು ಸಾಧಿಸಿದ್ದು, ಕೆಜಿಎಫ್ ಬಾಬು ಸೋಲನುಭವಿಸಿದ್ದಾರೆ. ಇವರು 830 ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಒಟ್ಟು 2057 ಮತಗಳು ಚಲಾವಣೆಯಾಗಿದ್ದು, 13 ಮತಗಳು ತಿರಸ್ಕೃತಗೊಂಡಿವೆ. ಇದನ್ನೂ ಓದಿ: 1,743 ಕೋಟಿ ಆಸ್ತಿಯ ಒಡೆಯ ಕೆಜಿಎಫ್‌ ಬಾಬುಗೆ ಸೋಲು

ನಾಮಪತ್ರ ಸಲ್ಲಿಕೆ ವೇಳೆ ಐಷರಾಮಿ ಕಾರಲ್ಲಿ (ಆಡಿ ಕಾರು) ಬಂದಿದ್ದ ಕೆಜಿಎಫ್ ಬಾಬು, ಸೋಲಿನ ನಂತರ ಯಾರ ಬಳಿಯೂ ಮಾತನಾಡದೇ ಕೈ ಮುಗಿದು ಆಟೋ ಹತ್ತಿ ತೆರಳಿದರು. ಬೆಂಬಲಿಗರು, ಕಾರ್ಯಕರ್ತರು ಯಾರೂ ಇಲ್ಲದೇ ಒಬ್ಬಂಟಿಯಾಗಿ ತೆರಳಿದರು. ಇದನ್ನೂ ಓದಿ: ಕೊಂಡಯ್ಯಗೆ ಸೋಲು – ಬಳ್ಳಾರಿ, ಕೊಡಗು, ಉತ್ತರ ಕನ್ನಡದಲ್ಲಿ ಬಿಜೆಪಿಗೆ ಗೆಲುವು

 

Leave a Reply

Your email address will not be published.

Back to top button