ಸಿನಿಮಾರಂಗ ಅಂದಮೇಲೆ ಲವ್, ಮದುವೆ, ಬ್ರೇಕಪ್, ಡಿವೋರ್ಸ್, ಸೆಕ್ಸ್ ಎಲ್ಲವೂ ಕಾಮನ್ ಆಗಿ ಬಿಟ್ಟಿದೆ. ಇಂದು ಒಟ್ಟಿಗೆ ಇದ್ದ ಜೋಡಿ, ನಾಳೆ ಕೂಡ ಒಟ್ಟಿಗೆ ಇರುತ್ತಾರೆ ಎಂದು ಹೇಳೋದ್ದಕ್ಕೆ ಸಾಧ್ಯವಿಲ್ಲ. ಬಾಲಿವುಡ್‌ನಲ್ಲಿ ಪೀಕ್‌ನಲ್ಲಿರುವ ಸ್ಟಾರ್ ಜೋಡಿ ಅಂದರೆ ತಮನ್ನಾ ಭಾಟಿಯಾ- ವಿಜಯ್ ವರ್ಮಾ (Vijay Varma) ಅವರಾಗಿದ್ದು, ‘ಲಸ್ಟ್ ಸ್ಟೋರಿಸ್ 2’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಂದರ್ಶನದಲ್ಲಿ ಮೊದಲ ಭೇಟಿ, ಲವ್, ಸೆಕ್ಸ್ ಎಲ್ಲದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
‘ಲಸ್ಟ್ ಸ್ಟೋರಿಸ್ 2’ ಸಿನಿಮಾ ಸೆಟ್‌ನಲ್ಲಿ ವಿಜಯ್ ವರ್ಮಾ- ತಮನ್ನಾ ಭಾಟಿಯಾಗೆ (Tamannah Bhatia) ಪ್ರೇಮಾಂಕುರವಾಯಿತು. ಇಷ್ಟು ದಿನಗಳ ಕಾಲ ನಮ್ಮ ನಡುವೆ ಏನಿಲ್ಲ ಎಂದು ಹೇಳುತ್ತಿದ್ದ ಈ ಜೋಡಿ ಈಗ ತಮ್ಮ ಪ್ರೀತಿಯನ್ನ ಅಧಿಕೃತಗೊಳಿಸಿದ್ದಾರೆ. ಇತ್ತೀಚಿಗೆ ತಮನ್ನಾ, ವಿಜಯ್ ನನ್ನ ಖುಷಿಯ ಖಜಾನೆ ಎಂದು ಹೇಳುವ ಮೂಲಕ ಲವ್ ಬಗ್ಗೆ ಮಾತನಾಡಿದ್ರು. ವಿಜಯ್ ವರ್ಮಾ ಕೂಡ ಪ್ರೀತಿಯಲ್ಲಿ ಇರೋದಾಗಿ ತಿಳಿಸಿದ್ರು. ಈಗ ಇದೇ ‘ಲಸ್ಟ್ ಸ್ಟೋರಿಸ್ 2’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ವಿಜಯ್- ತಮನ್ನಾ ಜೋಡಿ ಭಾಗವಹಿಸುತ್ತಿದ್ದಾರೆ. ಇದನ್ನೂ ಓದಿ:ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಜೊತೆ ಕನ್ನಡಿಗ ಡ್ಯಾನಿಶ್ ನಟನೆ
‘ಲಸ್ಟ್ ಸ್ಟೋರಿಸ್ 2’ (Lust Stories 2) ಚಿತ್ರದಲ್ಲಿ ವಿಜಯ್- ತಮನ್ನಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಸ್ಸಿಂಗ್ ಸೀನ್‌ಗಳ ಝಲಕ್ ಕೂಡ ಇದ್ದು, ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಹಾಗಾಗಿ ಸಂದರ್ಶನಗಳಲ್ಲೂ ಬೋಲ್ಡ್ ಪ್ರಶ್ನೆಗಳನ್ನ ಎದುರಿಸುತ್ತಿದ್ದಾರೆ. ತಮನ್ನಾ, ವಿಜಯ್ ವರ್ಮಾ, ನಿರ್ದೇಶಕ ಸುಜಯ್ ಘೋಶ್ ಸಂದರ್ಶನದಲ್ಲಿ ಭಾಗಿ ಆಗಿದ್ದರು. ಸಂದರ್ಶನದ ಚೌಕಟ್ಟು ಮೀರಿದ ಪ್ರಶ್ನೆಗಳನ್ನು ಕೇಳಲಾಗಿದೆ. ಮೊದಲ ಡೇಟ್ ಹೇಗಿತ್ತು, ಅದರಲ್ಲಿ ಸೆಕ್ಸ್ ಇತ್ತಾ.? ಎಂದು ಪ್ರಶ್ನೆ ಮಾಡಲಾಯಿತು. ತಮನ್ನಾ ಬೋರಿಂಗ್ ಡೇಟ್ ಎಂದು ಉತ್ತರ ನೀಡಿದರು. ಇದಕ್ಕೆ ವಿಜಯ್ ವರ್ಮಾ ಉತ್ತರಿಸಿದ್ದು, ಮೊದಲ ಡೇಟ್‌ನಲ್ಲಿ ಯಾವುದೇ ಕಾಮ ಇರಲಿಲ್ಲ ಎಂದಿದ್ದಾರೆ. ಸುಜಯ್ ಕೂಡ ಇದಕ್ಕೆ ಉತ್ತರಿಸಿದ್ದಾರೆ. ನಾನು ಮಧ್ಯಮ ವರ್ಗದಲ್ಲಿ ಹುಟ್ಟಿದ ವ್ಯಕ್ತಿ. ನಾವು ಎಲ್ಲದಕ್ಕೂ ಹೋರಾಡಬೇಕು. ನಮಗೆ ಯಾವುದೂ ಸುಲಭವಾಗಿ ಲಭ್ಯವಾಗುವುದಿಲ್ಲ ಎಂದು ನಕ್ಕಿದ್ದಾರೆ.
ತಮನ್ನಾ- ವಿಜಯ್ ವರ್ಮಾ ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಗುರುವಾರ ಜೂನ್ 29ಕ್ಕೆ ಈ ಸಿನಿಮಾ ರಿಲೀಸ್ ಆಗಿದೆ. ಒಂದು ಸಿನಿಮಾದಲ್ಲಿ ನಾಲ್ಕು ಕಥೆಗಳಿವೆ. ಒಟಿಟಿ ಮೂಲಕ ಇದು ರಿಲೀಸ್ ಆಗಿದೆ. ತೆರೆಯ ಮೇಲೆ ವಿಜಯ್- ತಮನ್ನಾ ಜೋಡಿಯನ್ನ ಅಭಿಮಾನಿಗಳು ಮೆಚ್ಚಿಕೊಳ್ಳುತ್ತಾರಾ ಕಾದು ನೋಡಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]