ಮತ್ತಷ್ಟು ಎತ್ತರಕ್ಕೆ ಏರುತ್ತೀಯ- ‘ಕೆಜಿಎಫ್’ ನಟಿಗೆ ದೈವದ ಅಭಯ

Public TV
1 Min Read
srinidhi shetty

‘ಕೆಜಿಎಫ್’ (KGF) ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ದೈವ ಕೋಲದಲ್ಲಿ ಭಾಗಿಯಾಗಿದ್ದಾರೆ. ತನ್ನ ಕುಟುಂಬದ ದೈವಗಳಿಗೆ ಹೇಳಿದ್ದ ಹರಕೆಯ ನೇಮೋತ್ಸವವನ್ನು (Daiva Kola) ನೆರವೇರಿಸಿದ್ದಾರೆ. ಈ ವೇಳೆ, ಮತ್ತಷ್ಟು ಎತ್ತರಕ್ಕೆ ಏರುತ್ತೀಯ ಎಂದು ದೈವ ಶ್ರೀನಿಧಿ ಶೆಟ್ಟಿಗೆ ಅಭಯ ನೀಡಿದೆ.

srinidhi shettyಮಂಗಳೂರಿನ ಹೊರವಲಯದ ಕಿನ್ನಿಗೋಳಿ ತಮ್ಮ ಕುಟುಂಬದ ಮನೆ ತಾಳಿಪಾಡಿ ಗುತ್ತುವಿನಲ್ಲಿ ಈ ಹರಕೆ ನೇಮೋತ್ಸವ ನಡೆಯಿತು. ಈ ಹಿಂದೆ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತಂತೆ ಕಿನ್ನಿಗೋಳಿ ಸಮೀಪ ತಾಳಿಪಾಡಿ ಗುತ್ತುವಿನಲ್ಲಿ ಜಾರಾಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಸಲಾಯಿತು. ಇದನ್ನೂ ಓದಿ:ಬಾಲಿವುಡ್ ನಲ್ಲಿ ಅಮಿತಾಭ್ ಬಿಟ್ಟರೆ ನನಗೆ ಹೆಚ್ಚು ಗೌರವ : ನಟಿ ಕಂಗನಾ

FotoJet 5ಈ ವೇಳೆ, ಶ್ರೀನಿಧಿ ಶೆಟ್ಟಿಯವರ ಕುಟುಂಬ ವರ್ಗದವರು ಸಂಬಂಧಿಕರು ಪಾಲ್ಗೊಂಡಿದ್ದಾರೆ. ತನ್ನ ಯಶಸ್ಸಿನ ಹಿಂದೆ ಕುಟುಂಬದ ದೈವಗಳ ಆಶೀರ್ವಾದ ಇದ್ದು, ತನ್ನ ಇಷ್ಟಾರ್ಥ ಸಿದ್ಧಿಗಾಗಿ ಈ ಹರಕೆ ಹೇಳಿಕೊಂಡಿದ್ದರು. ಅದರಂತೆ ಇದೀಗ ಹರಕೆಯನ್ನು ಶ್ರೀನಿಧಿ ಶೆಟ್ಟಿ ಸಲ್ಲಿಸಿದ್ದಾರೆ. ಮುಂದೆ ಇನ್ನಷ್ಟು ಎತ್ತರಕ್ಕೆ ಏರುತ್ತೀಯ ಎಂದು ದೈವಗಳು ‘ಕೆಜಿಎಫ್’ ನಟಿಗೆ ಅಭಯ ನೀಡಿದೆ.

ಕನ್ನಡದ ಕೆಜಿಎಫ್ 1, ಕೆಜಿಎಫ್ 2 (KGF 2) ಸಿನಿಮಾಗಳಲ್ಲಿ ಯಶ್‌ಗೆ (Yash) ನಾಯಕಿಯಾಗಿ ಮಿಂಚಿದ್ದರು. ಬಳಿಕ ಸೌತ್ ಸಿನಿಮಾಗಳಲ್ಲಿ ಶ್ರೀನಿಧಿ ಶೆಟ್ಟಿ ನಟಿಸಿದ್ದರು. ಇದೀಗ ಕಿಚ್ಚ ಸುದೀಪ್ (Kiccha Sudeep) ಅವರ 47ನೇ ಚಿತ್ರದಲ್ಲಿ ಶ್ರೀನಿಧಿ ನಾಯಕಿಯಾಗಿದ್ದಾರೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಕೂಡ ಆರಂಭ ಆಗಲಿದೆ.

Share This Article