‘ಕೆಜಿಎಫ್’, ‘ಕೆಜಿಎಫ್ 2’ (KGF 2) ಸಿನಿಮಾಗಳ ಸಕ್ಸಸ್ ನಂತರ ಸೌತ್ ಸಿನಿಮಾಗಳಲ್ಲಿ ಶ್ರೀನಿಧಿ ಶೆಟ್ಟಿ (Srinidhi Shetty) ಬ್ಯುಸಿಯಾಗಿದ್ದಾರೆ. ಸದ್ಯ ನಾನಿ ನಟನೆಯ ಸಿನಿಮಾಗೆ ಶ್ರೀನಿಧಿ ಶೆಟ್ಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಇದೀಗ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ದಾಖಲೆ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದ ಆಡಿಯೋ ಹಕ್ಕು
ಕರಾವಳಿ ನಟಿ ಶ್ರೀನಿಧಿಗೆ ದೊಡ್ಡ ಮಟ್ಟದ ಫ್ಯಾನ್ ಬೇಸ್ ಇದೆ. ‘ಕೆಜಿಎಫ್’ ಸರಣಿ ಸಕ್ಸಸ್ ನಂತರ ನಟಿಯ ಮುಂದಿನ ಸಿನಿಮಾ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಈಗ ನಟಿಯ ಬಗ್ಗೆ ತಾಜಾ ಸಮಾಚಾರವೊಂದು ಸಿಕ್ಕಿದೆ. ನಾನಿ (Nani) ತಾವೇ ಬರೆದು ನಟಿಸುತ್ತಿರುವ ‘ಹಿಟ್ ಪಾರ್ಟ್ 3’ಗೆ ನಾಯಕಿಯಾಗಲು ಶ್ರೀನಿಧಿ ಜೊತೆ ತಂಡ ಮಾತುಕತೆ ನಡೆಸಿದೆಯಂತೆ.
ಈಗಾಗಲೇ ‘ಹಿಟ್ 1’ ಮತ್ತು ‘ಹಿಟ್ 2’ ಸಿನಿಮಾ ಸಕ್ಸಸ್ ಕಂಡಿದೆ. ಅದರಲ್ಲಿ ‘ಹಿಟ್ 2’ ಚಿತ್ರದಲ್ಲಿ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ನಾನಿ, ಈಗ ‘ಹಿಟ್ 3’ ಚಿತ್ರದಲ್ಲಿ ಲೀಡ್ ರೋಲ್‌ನಲ್ಲಿ ನಟಿಸಲಿದ್ದಾರೆ. ಹಾಗಾಗಿ ನಾನಿ (Nani) ಜೊತೆ ಡ್ಯುಯೇಟ್ ಹಾಡಲು ‘ಕೆಜಿಎಫ್’ ನಟಿಗೆ ಚಾನ್ಸ್ ಸಿಕ್ಕಿದೆ ಎನ್ನಲಾಗಿದೆ.
ಇದೇ ಸಿನಿಮಾದಲ್ಲಿ ನಾನಿ ಮತ್ತು ಶ್ರೀನಿಧಿ ಎದುರು ರಾಣಾ ದಗ್ಗುಬಾಟಿ (Rana Daggubati) ಖಡಕ್ ಆದ ಪಾತ್ರ ಮಾಡಲಿದ್ದಾರಂತೆ. ಸದ್ಯ ಈಗ ಹರಿದಾಡುತ್ತಿರುವ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಚಿತ್ರತ್ರಂಡ ಅನೌನ್ಸ್ ಮಾಡುವವರೆಗೂ ಕಾಯಬೇಕಿದೆ.